Madhya Pradesh: ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ
Team Udayavani, Dec 11, 2023, 6:04 PM IST
ಕಟ್ನಿ(ಮಧ್ಯಪ್ರದೇಶ): ಚಲಿಸುತ್ತಿದ್ದ ರೈಲಿನಲ್ಲಿ 30 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಭಾನುವಾರ ಸಂಜೆ ಸತ್ನಾ ಮತ್ತು ಕಟ್ನಿ ವಿಭಾಗಗಳ ನಡುವಿನ ಪಕಾರಿಯಾ ನಿಲ್ದಾಣದಲ್ಲಿ ಮಹಿಳೆ ಜಬಲ್‌ಪುರ್-ರೇವಾ ಮೆಮು ರೈಲಿಗೆ ಹತ್ತಿದಾಗ ಈ ಘಟನೆ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಉತ್ತರ ಪ್ರದೇಶದ ಬಂದಾ ಮೂಲದ ಮತ್ತು ಕಟ್ನಿ ನಿವಾಸಿ ಪಂಕಜ್ ಕುಶ್ವಾಹ (23) ಎಂಬಾತನನ್ನು ಬಂಧಿಸಲಾಗಿದೆ ಎಂದು ಸತ್ನಾ ಜಿಆರ್‌ಪಿ ಠಾಣೆಯ ಉಸ್ತುವಾರಿ ಎಲ್ ಪಿ ಕಶ್ಯಪ್ ತಿಳಿಸಿದ್ದಾರೆ.
ಆರೋಪಿ ಮಹಿಳೆಯನ್ನು ಶೌಚಾಲಯದ ಬಳಿ ಅಡ್ಡಗಟ್ಟಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದ್ದು, ಆಕೆ ತಪ್ಪಿಸಿಕೊಂಡು ಸತ್ನಾ ಸ್ಟೇಷನ್‌ನಲ್ಲಿರುವ ಜಿಆರ್‌ಪಿಗೆ ತಿಳಿಸಿದ್ದು, ನಂತರ ಆ ಆರೋಪಿಯನ್ನು ಬಂಧಿಸಲು ತಂಡವನ್ನು ಕಳುಹಿಸಲಾಯಿತು. ಆರೋಪಿಯು ಶೌಚಾಲಯದಲ್ಲಿ ಬೀಗ ಹಾಕಿಕೊಂಡಿದ್ದ, ರೈಲು ರೇವಾ ತಲುಪಿದಾಗ ಬೀಗ ಮುರಿದು ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.