Telangana: ನಿದ್ದೆಗೆ ಜಾರಿದ ಚಾಲಕ.. ಬಸ್ ಪಲ್ಟಿಯಾಗಿ ಹೊತ್ತಿಕೊಂಡ ಬೆಂಕಿ, ಮಹಿಳೆ ಸಜೀವ ದಹನ
Team Udayavani, Jan 13, 2024, 12:18 PM IST
ಆಂಧ್ರಪ್ರದೇಶ: ಚಿತ್ತೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಓರ್ವ ಮಹಿಳಾ ಪ್ರಯಾಣಿಕರೊಬ್ಬರು ಸಜೀವ ದಹನಗೊಂಡ ಘಟನೆ ಶನಿವಾರ ತೆಲಂಗಾಣದ ಜೋಗುಲಾಂಬ ಗದ್ವಾಲ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಶನಿವಾರ ಮುಂಜಾನೆ 3 ಗಂಟೆಗೆ ಖಾಸಗಿ ಬಸ್ಸು ಹೈದರಾಬಾದ್‌ನಿಂದ ಚಿತ್ತೂರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಬಸ್ಸಿನಲ್ಲಿ ಸುಮಾರು ನಲ್ವತ್ತು ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದ್ದು ಈ ವೇಳೆ ಚಾಲಕ ನಿದ್ದೆಗೆ ಜಾರಿದ ಪರಿಣಾಮ ಬಸ್ಸು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಈ ವೇಳೆ ಡೀಸೆಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ ಉಳಿದ ಪ್ರಯಾಣಿಕರು ಬಸ್ಸಿನಿಂದ ಇಳಿದರೆ ಓರ್ವ ಮಹಿಳೆಯ ಕೈ ಬಸ್ಸಿನ ಅಡಿ ಭಾಗದಲ್ಲಿ ಸಿಲುಕಿದ್ದ ಪರಿಣಾಮ ಬಸ್ಸಿಂದ ಹೊರ ಬರಲು ಸಾಧ್ಯವಾಗದೆ ಬೆಂಕಿ ಹೊತ್ತಿಕೊಂಡು ಸಜೀವ ದಹನಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತಪಟ್ಟ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Viewer discretion advised#Telangana: A woman passenger was charred to death after a private bus caught fire in the Jogumlamba-Gadwal district late on 12 January night. The bus, which was en route to #AndhraPradesh‘s Chittoor district from #Hyderabad, overturned during the… pic.twitter.com/tyHrXuEoA7
— South First (@TheSouthfirst) January 13, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹವಾಮಾನ ಹಣಕಾಸು ಪ್ಯಾಕೇಜ್ ತಿರಸ್ಕರಿಸಿದ ಭಾರತ
Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.