ಲಂಚದ ಹಣ ನುಂಗಿ ಪಾರಾಗಲು ಯತ್ನಿಸಿದ ಮಹಿಳಾ ಕಾನ್‌ಸ್ಟೆಬಲ್
Team Udayavani, Feb 15, 2018, 4:47 PM IST
ಮುಂಬಯಿ : 300 ರೂ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರದ ಮಹಿಳಾ ಕಾನ್‌ಸ್ಟೆಬಲ್, ಆ ಲಂಚದ ಹಣವನ್ನು ಬಾಯಿಗೆ ಹಾಕಿ ನುಂಗಿ ಪಾರಾಗಲು ಯತ್ನಿಸಿದ ಘಟನೆ ವರದಿಯಾಗಿದೆ.
ಈ ಘಟನೆ ಕೊಲ್ಹಾಪುರದ ಚಂದಗಢ ಪೊಲೀಸ್ ಠಾಣೆಯಲ್ಲೇ ಈ ಘಟನೆ ನಡೆಯಿತೆಂಬುದು ವಿಶೇಷ.
300 ರೂ. ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದು ಬಳಿಕ ಅದನ್ನು ನುಂಗಲೆತ್ನಿಸಿದ ಮಹಿಳಾ ಕಾನ್‌ಸ್ಟೆಬಲ್ ಹೆಸರು ದೀಪಾಲಿ ಖಡ್‌ಕೆ. 28ರ ಹರೆಯದ ತರುಣನೋರ್ವ ಆಕೆಯ ವಿರುದ್ಧ ಲಂಚ ಸ್ವೀಕಾರದ ದೂರು ನೀಡಿದ್ದ. ಪಾಸ್ ಪೋರ್ಟಿಗಾಗಿ ಕ್ಯಾರೆಕ್ಟರ್ ಸರ್ಟಿಫಿಕೇಟ್ ಪಡೆಯಲು ಆತ ಅರ್ಜಿ ಹಾಕಿದ್ದ. ಮಹಿಳಾ ಕಾನ್‌ಸ್ಟೆಬಲ್ ಅದಕ್ಕಾಗಿ 300 ರೂ. ಲಂಚ ಕೇಳಿದ್ದಳು.
ಅದಾಗಿ ದೂರುದಾರ ತರುಣನು ಕೊಲ್ಹಾಪುರದ ಎಸಿಬಿ ಘಟಕವನ್ನು ಸಂಪರ್ಕಿಸಿ ದೂರು ನೀಡಿದ್ದ. ಅಂತೆಯೇ ಪೊಲೀಸ್ ಠಾಣೆಯ ರೆಕಾರ್ಡ್ ರೂಮಲ್ಲಿ ಮಹಿಳಾ ಕಾನ್‌ಸ್ಟೆಬಲ್ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಳು. ತಾನು ಸಿಕ್ಕಿಬಿದ್ದೆ ಎಂದು ಗೊತ್ತಾಗುತ್ತಲೇ ಆಕೆ ಲಂಚವಾಗಿ ಪಡೆದ ನೋಟುಗಳನ್ನು ಬಾಯಿಯಲ್ಲಿ ಹಾಕಿ ಜಗಿಯಲು ಆರಂಭಿಸಿದಳು. ಆದರೆ ಅದನ್ನು ನುಂಗುವ ಮೊದಲೇ ಆಕೆಯ ಲಂಚಾವತಾರ ಬಯಲಾಯಿತು ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್ ಅಂತ್ಯಕ್ರಿಯೆ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.