ಅದೃಷ್ಟ ಚೆನ್ನಾಗಿತ್ತು… ಒಂದೇ ಕಡೆ 2 ಬಾರಿ ಸಾವಿನ ದವಡೆಯಿಂದ ಪಾರಾದ ಮಹಿಳೆ;ವಿಡಿಯೋ ವೈರಲ್
ವೇಗವಾಗಿ ರೈಲು ಬರುತ್ತಿರುವುದನ್ನು ಮಹಿಳೆ ಗಮನಿರಲಿಲ್ಲ.
Team Udayavani, Sep 10, 2022, 5:08 PM IST
ಉತ್ತರ ಪ್ರದೇಶ: ಮಹಿಳೆಯೊಬ್ಬರು ಸಾವಿನ ದವಡೆಯಿಂದ ಬಚಾವ್ ಆಗಿ ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಉತ್ತರ ಪ್ರದೇಶದ ಶಿಕೋಹಾಬಾದ್ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬರು ತನ್ನ ಲಗೇಜ್ ಗಳನ್ನು ಹಿಡಿದುಕೊಂಡು ಫೂಟ್ ಬ್ರಿಡ್ಜ್ ನಲ್ಲಿ ನಡೆದುಕೊಂಡು ಬರುವ ಬದಲು, ರೈಲ್ವೇ ಹಳಿ ಮೂಲಕ ದಾಟುತ್ತಾರೆ. ಪ್ಲ್ಯಾಟ್ ಫಾರಂ ಮೇಲೆ ಹತ್ತಲು ಕಷ್ಟಪಡುವ ಮಹಿಳೆ ಮೊದಲು ತನ್ನ ಬ್ಯಾಗ್ ಗಳನ್ನು ಪ್ಲ್ಯಾಟ್ ಫಾರಂನ ಮೇಲೆ ಇಟ್ಟು ತಾವು ಹತ್ತಲು ಯತ್ನಿಸುತ್ತಾರೆ. ಆದರೆ ಅತ್ತ ಕಡೆಯಿಂದ ವೇಗವಾಗಿ ರೈಲು ಬರುತ್ತಿರುವುದನ್ನು ಮಹಿಳೆ ಗಮನಿರಲಿಲ್ಲ.
ಇದನ್ನು ನೋಡಿದ ರೈಲ್ವೇ ನಿಲ್ದಾಣದ ಸಿಬ್ಬಂದಿ, ತಕ್ಷಣ ಮಹಿಳೆಯನ್ನು ಮೇಲಕ್ಕೆತ್ತುತ್ತಾರೆ. ಆದರೆ ಮಹಿಳೆ ಮತ್ತೆ ಸಾವಿನ ದವಡೆಗೆ ಹೋಗುತ್ತಾರೆ. ತನ್ನ ಬ್ಯಾಗ್ ಪಡೆದುಕೊಂಡ ಬಳಿಕ, ತಾವು ಇಟ್ಟ ಒಂದು ನೀರಿನ ಬಾಟಲು ತೆಗೆದುಕೊಳ್ಳಲು ಮಹಿಳೆ ಮತ್ತೆ ಪ್ಲ್ಯಾಟ್ ಫಾರಂ ತುದಿಯತ್ತ ಬಗ್ಗುತ್ತಾರೆ. ಇದೇ ವೇಳೆ ರೈಲು ಕ್ಷಣ ಮಾತ್ರದಲ್ಲಿ ವೇಗವಾಗಿ ಸಾಗುತ್ತದೆ. ಮಹಿಳೆಯ ಈ ಸಾಹಸ ಸಾವಿನೆಡೆಗೆ ಹೋಗಿ ಬಂದಂತಿತ್ತು.
ಪ್ಲ್ಯಾಟ್ ಫಾರಂನ ಅಂಚಿನಲ್ಲಿಟ್ಟ ನೀರಿನ ಬಾಟಲ್ ತೆಗೆದುಕೊಳ್ಳಲು ಹೋಗುವ ಮಹಿಳೆ, ಚೂರು ಅತ್ತಿತ್ತ ಆಗಿದ್ದರೆ ದುರಂತ ನಡೆಯುತ್ತಿತ್ತು. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ವೈರಲ್ ಆಗಿದೆ.
Life saved once but risked again for water bottle.Lady was crossing track without using footover bridge & was unable to climb over the platform on the face approaching train in Shikohabad Station.Oir staff Welfare Inspector Sri Ram Swaroop Meena rushed towards her & saved the day pic.twitter.com/WGYsDonHtR
— J.Sanjay Kumar,IRTS (@Sanjay_IRTS) September 9, 2022
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.