ತಂದೆ ಯಾರೆಂದು ಕೇಳಿದ ಮಗ: ಅತ್ಯಾಚಾರವಾಗಿ 27 ವರ್ಷಗಳ ಬಳಿಕ ದೂರು ದಾಖಲಿಸಿದ ಸಂತ್ರಸ್ತೆ !
Team Udayavani, Mar 6, 2021, 8:05 PM IST
ಉತ್ತರಪ್ರದೇಶ: 27 ವರ್ಷಗಳ ಹಿಂದೆ ತನ್ನ ಮೇಲೆ ಇಬ್ಬರು ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಿಸಿದ ಘಟನೆ ಶಹಜನ್ ಪುರದಲ್ಲಿ ನಡೆದಿದೆ.
27 ವರ್ಷಗಳ ಹಿಂದೆ ತನಗೆ 12 ವರ್ಷವಿರುವಾಗ ಇಬ್ಬರು ವ್ಯಕ್ತಿಗಳು ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ. ಇದೀಗ ನನ್ನ ಮಗ ತಂದೆ ಯಾರೆಂದು ಪ್ರಶ್ನಿಸಿದ್ದಾನೆ. ಇದಕ್ಕಾಗಿ ದೂರು ದಾಖಲಿಸಿದ್ದೇನೆ ಎಂದು ಮಹಿಳೆ ತಿಳಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮಾತನಾಡಿದ ಎಸ್ ಪಿ ಸಂಜಯ್ ಕುಮಾರ್, 27 ವರುಷಗಳ ಹಿಂದೆ, ಸಂತ್ರಸ್ತೆಯು ತನ್ನ ಅಕ್ಕ, ಭಾವನೊಂದಿಗೆ ವಾಸಿಸುತಿದ್ದರು. ಒಮ್ಮೆ ಆಕೆ ಒಬ್ಬಂಟಿಯಾಗಿರುವಾಗ ವ್ಯಕ್ತಿಯೊಬ್ಬ ಮನೆ ಪ್ರವೇಶಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಆಕೆಯ ಕಿರಿಯ ಸಹೋದರ ಗುಡ್ಡು ಎಂಬಾತ ಕೂಡ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಸಂತ್ರಸ್ತೆಯ ಮಾಹಿತಿಯ ಪ್ರಕಾರ ಆಕೆಯ ಮೇಲೆ ಹಲವಾರು ಬಾರಿ ಈ ಇಬ್ಬರು ಅತ್ಯಾಚಾರವೆಸಗಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಎಸ್ ವೈ, ರಾಘವೇಂದ್ರ, ಈಶ್ವರಪ್ಪರ ಎಲ್ಲಾ ಹಗರಣ ಬಯಲು ಮಾಡ್ತೇನೆ: ಶಾಸಕ ಸಂಗಮೇಶ್ ಎಚ್ಚರಿಕೆ
ಸಂತ್ರಸ್ತೆಗೆ 12 ವರ್ಷವಿದ್ದಾಗ ಈ ಘಟನೆ ನಡೆದಿದ್ದು, 13 ವರ್ಷವಾದಾಗ (1994 ರಲ್ಲಿ) ಮಗುವಿಗೆ ಜನ್ಮ ನೀಡಿದ್ದಳು. ಕೂಡಲೇ ಶಿಶುವನ್ನು ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಉಧಂಪುರ್ ಗ್ರಾಮದ ವ್ಯಕ್ತಿಯೊಬ್ಬನಿಗೆ ನೀಡಲಾಗಿತ್ತು. ಈ ವೇಳೆ ತನ್ನ ಭಾವನಿಗೆ ವರ್ಗಾವಣೆಯಾದ್ದರಿಂದ ಆಕೆಯೂ ರಾಂಪುರ ಗ್ರಾಮಕ್ಕೆ ಬಂದು ವಾಸಿಸುತ್ತಿದ್ದಳು. ನಂತರದಲ್ಲಿ ಸಂತ್ರಸ್ತೆಯನ್ನು ಗಾಜಿಪುರ್ ಗ್ರಾಮದ ವ್ಯಕ್ತಿಯೊಬ್ಬನಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ 10 ವರ್ಷದ ಬಳಿಕ, ಸಂತ್ರಸ್ತೆಯ ಪತಿಗೆ, ಈ ಹಿಂದೆ ಆಕೆಯ ಮೇಲೆ ಅತ್ಯಾಚಾರವಾಗಿದೆ ಎಂಬ ಮಾಹಿತಿ ತಿಳಿದು ವಿಚ್ಚೇಧನ ನೀಡಿದ್ದಾನೆ.
ಏತನ್ಮಧ್ಯೆ ಆಕೆಯು ಉಧಂಪುರ್ ಗ್ರಾಮಕ್ಕೆ ಮರಳಿ ಬಂದು ವಾಸಿಸತೊಡಗಿದಳು. ಈ ವೇಳೆ ಬೆಳೆದು ನಿಂತ ಆಕೆಯ ಮಗ ತನ್ನ ತಾಯಿಯ ಕುರಿತು ವಿಚಾರಿಸತೊಡಗಿದ್ದಾನೆ ಮಾತ್ರವಲ್ಲದೆ ಆಕೆಯನ್ನು ಭೇಟಿ ಮಾಡಿ ಘಟನೆಯ ಮಾಹಿತಿ ಪಡೆದಿದ್ದಾನೆ.
ಇದನ್ನೂ ಓದಿ: ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸೋದು ತಪ್ಪಾ : 6 ಸಚಿವರ ಪರ ಕಟ್ಟಾ ಸುಬ್ರಮಣ್ಯ ಬ್ಯಾಟಿಂಗ್
ಶುಕ್ರವಾರ( 2021 ಮಾ.5 ) ಮಹಿಳೆಯು ಇಬ್ಬರು ವ್ಯಕ್ತಿಗಳ ವಿರುದ್ಧ, ಸದಾರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್ ರೇಪ್ ಪ್ರಕರಣ ದಾಖಲು ಮಾಡಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಅದಾಗಿಯೂ ಮಹಿಳೆಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಲಯದ ಕದ ತಟ್ಟಿದ್ದಾಳೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಮೋಡಿ ಮಾಡಿದ ಅಕ್ಷರ್ – ಅಶ್ವಿನ್: ಭಾರತದ ಪಾಲಿಗೆ ಟೆಸ್ಟ್ ಸರಣಿ, ಚಾಂಪಿಯನ್ ಶಿಪ್ ಗೆ ಆಯ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.