ಐಸಿಸ್ ಕಾರ್ಯಕರ್ತೆಗೆ ಏಳು ವರ್ಷ ಜೈಲು
Team Udayavani, Mar 25, 2018, 6:00 AM IST
ಕೊಚ್ಚಿ: ಕೇರಳದಲ್ಲಿ ಐಸಿಸ್ ಉಗ್ರ ಸಂಘಟನೆಗೆ ಯುವಕರನ್ನು ನೇಮಕ ಮಾಡುತ್ತಿದ್ದ ಪ್ರಕರಣ ಸಂಬಂಧ ಎನ್‌ಐಎ ವಿಶೇಷ ನ್ಯಾಯಾಲಯ ಶನಿವಾರ ಐಸಿಸ್‌ನ ಮಹಿಳಾ ಕಾರ್ಯಕರ್ತೆ ಯಾಸ್ಮಿನ್ ಮೊಹಮ್ಮದ್ ಜಹೀದಾಗೆ 7 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಮೊದಲು ಶಿಕ್ಷೆಗೆ ಒಳಗಾದ ಆರೋಪಿ ಈಕೆ.
ಜಹೀದಾ ಬಿಹಾರ ಮೂಲದವಳಾಗಿದ್ದು, ಈಕೆ ಐಸಿಸ್ ಸೇರಲು ಕಾಬೂಲ್‌ಗೆ ತನ್ನ ಮಗುವಿನೊಂದಿಗೆ ಹೊರಟಿದ್ದಾಗ 2016ರ ಜು. 30ರಂದು ದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಪ್ರಕರಣ ದಲ್ಲಿ ಒಟ್ಟು 15 ಆರೋಪಿಗಳಿದ್ದು, ಜಹೀದಾ 2ನೇ ಆರೋಪಿ. ಅಬ್ದುಲ್ ರಶೀದ್ ಅಬ್ದುಲ್ಲಾ ಮೊದಲ ಆರೋಪಿ. ಈತನೇ ಪ್ರಕರಣದ ಸೂತ್ರಧಾರ.
ಕಾಸರಗೋಡು ತಾಲೂಕಿನಲ್ಲಿ ಕಳೆದ ವರ್ಷ ಹಲವು ಯುವಕರು ತಮ್ಮ ಕುಟುಂಬದೊಂದಿಗೆ ಐಸಿಸ್ ಸೇರಲು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳಿದ್ದು, ಅವರಿಗೆ ಉಗ್ರ ಸಂಘಟನೆಗೆ ಸೇರುವಂತೆ ಪ್ರೇರೇಪಿಸಿದ್ದೇ ರಶೀದ್ ಮತ್ತು ಜಹೀದಾ. ಇವರು ಕಾಸರಗೋಡು ಹಾಗೂ ಇತರ ಪ್ರದೇಶಗಳಲ್ಲಿ ಯುವ ಕರ ತಲೆಗೆ ಜೆಹಾದ್ ಸಿದ್ಧಾಂತವನ್ನು ತುಂಬುವಂಥ ತರಗತಿಗಳನ್ನೂ ನಡೆಸು ತ್ತಿದ್ದರು. ಈ ಕುರಿತು ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ಇವರಿಬ್ಬರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಪ್ರಕರಣದಲ್ಲಿ 15 ಮಂದಿ ಆರೋಪಿ ಗಳಿದ್ದು, ಇಬ್ಬರ ವಿರುದ್ಧ ಮಾತ್ರ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಏಕೆಂದರೆ, ರಶೀದ್ ಸಹಿತ ಉಳಿದ ಆರೋಪಿಗಳು ಅಫ್ಘಾನಿಸ್ಥಾನ ಮತ್ತು ಸಿರಿಯಾದಲ್ಲಿ ದ್ದಾರೆ. ಈ ಪೈಕಿ ಮೂವರು ಅಫ್ಘಾನ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
4 ತಿಂಗಳಲ್ಲಿ ಮುಗಿದ ವಿಚಾರಣೆ: ಈ ಪ್ರಕರಣದ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸಿತ್ತು. ಕಳೆದ ನವೆಂಬರ್‌ನಲ್ಲಿ ವಿಚಾರಣೆ ಆರಂಭಿಸಿದ ನ್ಯಾಯಾಲಯ ಕೇವಲ ನಾಲ್ಕೇ ತಿಂಗಳಲ್ಲಿ ಅದನ್ನು ಪೂರ್ಣ ಗೊಳಿಸಿ ತೀರ್ಪನ್ನೂ ಪ್ರಕಟಿಸಿದೆ.
ಯಾವುದೀ ಪ್ರಕರಣ?
2016ರ ಮೇ ಮತ್ತು ಜುಲೈಯಲ್ಲಿ ದೇಶ ಬಿಟ್ಟು ಹೋದ ಕಾಸರಗೋಡಿನ 14 ಮಂದಿಗೆ ಸಂಬಂಧಿಸಿದ ಪ್ರಕರಣವಿದು. ತಮ್ಮ ಕುಟುಂಬಗಳ ಜತೆ ತೆರಳಿದ್ದ ಇವರು ಈಗಾಗಲೇ ಐಸಿಸ್‌ನಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರ ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ
ನಮ್ಮ ಪಕ್ಷಕ್ಕೆ ಮಾನ್ಯತೆ ಸಿಗುತ್ತಿಲ್ಲ, ಸಚಿವ ಸ್ಥಾನ ತೊರೆವೆ: ಮಾಂಜಿ ಎಚ್ಚರಿಕೆ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್