ರಿಕ್ಷಾ ಚಾಲಕನಿಗೆ ತನ್ನ ಕೋಟಿ ರೂ. ಆಸ್ತಿಯನ್ನು ದಾನ ಮಾಡಿದ ಅಜ್ಜಿ: ಯಾಕೆ ಗೊತ್ತಾ?
Team Udayavani, Nov 15, 2021, 9:36 AM IST
ಕಟಕ್: ಒಡಿಶಾದ ಕಟಕ್‌ನಲ್ಲಿ ವಯಸ್ಸಾದ ಮಹಿಳೆಯೊಬ್ಬರು ತನಗೆ ಮತ್ತು ತನ್ನ ಕುಟುಂಬಕ್ಕೆ 25 ವರ್ಷಗಳ ಕಾಲ ಮಾಡಿದ ಸೇವೆಯನ್ನು ಗುರುತಿಸಿ ತನ್ನ ಎಲ್ಲಾ ಆಸ್ತಿಗಳನ್ನು ರಿಕ್ಷಾ ಚಾಲಕನಿಗೆ ದಾನ ಮಾಡಿದ್ದಾರೆ.
ಸುತಾಹತ್ ನ 63 ವರ್ಷದ ಮಿನಾತಿ ಪಟ್ನಾಯಕ್ ಅವರು ತಮ್ಮ ಮೂರು ಅಂತಸ್ತಿನ ಮನೆ, ಚಿನ್ನಾಭರಣಗಳು ಮತ್ತು ತನ್ನೆಲ್ಲ ಆಸ್ತಿಯನ್ನು ಎರಡು ದಶಕಗಳಿಂದ ತನ್ನ ಕುಟುಂಬಕ್ಕೆ ಸೇವೆ ಸಲ್ಲಿಸುತ್ತಿರುವ ರಿಕ್ಷಾ ಚಾಲಕ ಬುಧಾ ಸಮಲ್ ಗೆ ದಾನ ಮಾಡಿದ್ದಾರೆ.
ಮಿನಾತಿ ಅವರು ಕಳೆದ ವರ್ಷ ಕಿಡ್ನಿ ವೈಫಲ್ಯದಿಂದ ಪತಿಯನ್ನು ಕಳೆದುಕೊಂಡಿದ್ದರು. ಅದಲ್ಲದೆ ಇತ್ತೀಚೆಗೆ ಹೃದಯಾಘಾತದಿಂದ ಮಗಳು ಕೋಮಲ್ ಕೂಡಾ ಸಾವನ್ನಪ್ಪಿದ್ದರು. ಹೀಗಾಗಿ ತನಗೆ ಮತ್ತು ಪತಿಗೆ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಡ ರಿಕ್ಷಾ ಚಾಲಕ ಕುಟುಂಬಕ್ಕೆ ತನ್ನ ಆಸ್ತಿಯನ್ನು ಮಿನಾತಿ ದಾನ ಮಾಡಿದ್ದಾರೆ.
ಇದನ್ನೂ ಓದಿ:ಆಡಳಿತಕ್ಕೆ ವೇಗ ನೀಡಲು ಹೊಸ ಯೋಜನೆ: 77 ಮಂತ್ರಿಗಳನ್ನು 8 ಗುಂಪುಗಳಾಗಿ ವಿಂಗಡನೆ
ಇಂಡಿಯಾ ಟುಡೇ ಸುದ್ದಿವಾಹಿನಿ ಜೊತೆ ಮಾತನಾಡಿದ ಮಿನಾತಿ ಪಟ್ನಾಯಕ್, “ನನ್ನ ಪತಿ ಮತ್ತು ಮಗಳ ಸಾವಿನ ನಂತರ ನಾನು ದುಃಖದಲ್ಲಿ ಬದುಕುತ್ತಿದ್ದೇನೆ. ನನ್ನ ಕಷ್ಟದ ದಿನಗಳಲ್ಲಿ ನನ್ನ ಸಂಬಂಧಿಕರು ಯಾರೂ ನನ್ನನ್ನು ಬೆಂಬಲಿಸಲಿಲ್ಲ. ನಾನು ಸಂಪೂರ್ಣವಾಗಿ ಒಬ್ಬಂಟಿಯಾಗಿದ್ದೆ. ಆದರೆ, ಈ ರಿಕ್ಷಾ ಚಾಲಕ ಮತ್ತು ಅವನ ಕುಟುಂಬವು ನನ್ನ ಕಷ್ಟದ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತಿತ್ತು, ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ನನ್ನ ಆರೋಗ್ಯವನ್ನು ನೋಡಿಕೊಂಡಿದ್ದರು” ಎಂದಿದ್ದಾರೆ.
ನನ್ನ ಸಂಬಂಧಿಕರ ಬಳಿ ಸಾಕಷ್ಟು ಆಸ್ತಿಯಿದೆ. ನನ್ನ ಆಸ್ತಿಯನ್ನು ಬಡ ಕುಟುಂಬಕ್ಕೆ ನೀಡಲು ನಾನು ಯಾವಾಗಲೂ ಬಯಸಿದ್ದೆ. ನನ್ನ ಮರಣದ ನಂತರ ಯಾರೂ ಕಿರುಕುಳ ನೀಡದಿರಲು ನಾನು ಬುಧಾ ಸಮಲ್ ಮತ್ತು ಅವನ ಕುಟುಂಬಕ್ಕೆ ಎಲ್ಲವನ್ನೂ ಕಾನೂನುಬದ್ಧವಾಗಿ ದಾನ ಮಾಡಲು ನಿರ್ಧರಿಸಿದೆ” ಎಂದು ಮಿನಾಟಿ ಹೇಳಿದ್ದಾರೆ.
“ಅವನು ನನ್ನ ಮಗಳನ್ನು ಕಾಲೇಜಿಗೆ ಕರೆದುಕೊಂಡು ಹೋಗುತ್ತಿದ್ದ. ಅವರು ನಮ್ಮ ಕುಟುಂಬದ ರಿಕ್ಷಾ ಚಾಲಕರಾಗಿದ್ದರು. ಅವರ ಮೇಲಿನ ನನ್ನ ನಂಬಿಕೆ ಮತ್ತು ನನಗೆ ಮತ್ತು ನನ್ನ ಕುಟುಂಬಕ್ಕೆ ಅವರ ಶೃದ್ದೆ ಅವರಿಗೆ ಈ ಪ್ರತಿಫಲ ನೀಡಿದೆ. ನನ್ನ ಆಸ್ತಿಯನ್ನು ಅವರಿಗೆ ನೀಡುವ ಮೂಲಕ ನಾನು ಅವರಿಗೆ ಯಾವುದೇ ದೊಡ್ಡ ಸೇವೆಯನ್ನು ಮಡುತ್ತಿಲ್ಲ, ಬದಲಾಗಿ ಅವರು ಅದಕ್ಕೆ ಅರ್ಹರು” ಎಂದು ಮಿನಾತಿ ಪಟ್ನಾಯಕ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ
Madras HC: ಆಲಿಂಗನ, ಚುಂಬನ ಹರೆಯದ ಪ್ರೇಮಿಗಳಲ್ಲಿ ಸಾಮಾನ್ಯ
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
MUST WATCH
ಹೊಸ ಸೇರ್ಪಡೆ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.