ಹಣ ಹೆಕ್ಕಲು ಮೆಟ್ರೋ ಹಳಿಗೆ ಜಿಗಿದ ಮಹಿಳೆ ಅದೃಷ್ಟವಶಾತ್ ಪಾರು
Team Udayavani, Mar 12, 2019, 10:48 AM IST
ಹೊಸದಿಲ್ಲಿ : ಮೆಟ್ರೋ ಹಳಿಯ ಮೇಲೆ ಬಿದ್ದಿದ್ದ ತನ್ನ ಹಣವನ್ನು ಹೆಕ್ಕಲು ಹಳಿಗೆ ಜಿಗಿದ ಮಹಿಳೆ ಅದೃಷ್ಟವಶಾತ್ ಜೀವ ಸಹಿತ ಪಾರಾದ ಘಟನೆ ಇಂದು ಮಂಗಳವಾರ ದಿಲ್ಲಿಯ ದ್ವಾರಕ ಮೋರ್ ಸ್ಟೇಶನ್ ನಲ್ಲಿ ನಡೆದಿದೆ. ಈ ಘಟನೆಯಿಂದಾಗಿ ದಿಲ್ಲಿ ಮೆಟ್ರೋ ಬ್ಲೂ ಲೈನ್ ಸೇವೆಯು ಸ್ವಲ್ಪ ಕಾಲ ಬಾಧಿತವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ಹಣ ಹೆಕ್ಕಲು ರೈಲು ಹಳಿಗೆ ಜಿಗಿದ ಮಹಿಳೆ, 24ರ ಹರೆಯದ, ನಗರದ ಜರೋಡಾ ಕಲಾನ್ ಪ್ರದೇಶದ ನಿವಾಸಿ ಎಂದು ಗೊತ್ತಾಗಿದೆ. ಅದೃಷ್ಟವಶಾತ್ ಜೀವ ಸಹಿತ ಪಾರಾದ ಈಕೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಒಯ್ಯಲಾಗಿದೆ ಎಂದು ಡಿಎಂಆರ್ಸಿ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಇಂದು ಮಂಗಳವಾರ ಬೆಳಗ್ಗೆ 10.40ರ ಸುಮಾರಿಗೆ ಈ ಘಟನೆ ನಡೆದಿದೆ. ಮೆಟ್ರೋ ಹಳಿಯ ಮೇಲೆ ಬಿದ್ದಿದ್ದ ತನ್ನ ಹಣ ಹೆಕ್ಕಲು ಮಹಿಳೆ ಹಳಿಗೆ ಜಿಗಿದಳು ಎಂದು ಓರ್ವ ಮೆಟ್ರೋ ಅಧಿಕಾರಿ ತಿಳಿಸಿದರೆ, ನೋಯ್ಡಾ ಕಡೆಗೆ ಹೋಗುವ ಮೆಟ್ರೋ ರೈಲು ಪ್ಲಾಟ್ ಫಾರ್ಮ್ ಕಡೆಗೆ ಬರುತ್ತಿದ್ದಂತೆಯೇ ಮಹಿಳೆ ಹಳಿಯ ಮೇಲೆ ಜಿಗಿದಿದ್ದಳು ಮತ್ತು ಸಕಾಲದಲ್ಲಿ ಆಕೆಯನ್ನು ಪಾರುಗೊಳಿಸಲಾಯಿತು ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ.
ಘಟನೆಯಂದ ಸೇವೆ ಬಾಧಿತವಾದ ಬ್ಲೂ ಲೈನ್ ಮೆಟ್ರೋ, ದಿಲ್ಲಿಯ ದ್ವಾರಕಾ ಸೆಕ್ಟರ್ 21ನ್ನು ನೋಯ್ಡಾ ಇಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್ ಹುತಾತ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.