Tragedy: ಕುಸಿದು ಬಿದ್ದ ಲಿಫ್ಟ್… ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿದ್ದ ಬಾಣಂತಿ ಸಾ*ವು
Team Udayavani, Dec 6, 2024, 1:39 PM IST
ಉತ್ತರಪ್ರದೇಶ: ಆಸ್ಪತ್ರೆಯ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಕೆಲವೇ ಗಂಟೆಗಳ ಮೊದಲು ಮಗುವಿಗೆ ಜನ್ಮ ನೀಡಿದ ಬಾಣಂತಿ ಮೃತಪಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಗುರುವಾರ(ಡಿ.6) ನಡೆದಿದೆ.
ಲೋಹಿಯಾ ನಗರದ ಕ್ಯಾಪಿಟಲ್ ಆಸ್ಪತ್ರೆಯಲ್ಲಿ ಕರಿಷ್ಮಾ ಎಂಬ ಮಹಿಳೆ ಗುರುವಾರ ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನೇನು ಕರಿಷ್ಮಾ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಬೇಕು ಎಂದು ಆಸ್ಪತ್ರೆ ಸಿಬಂದಿಗಳು ಅವರನ್ನು ಲಿಫ್ಟ್ ಮೂಲಕ ಕರೆತರುವ ವೇಳೆ ಲಿಫ್ಟ್ ಕೇಬಲ್ ತುಂಡಾಗಿ ಕುಸಿದು ಬಿದ್ದಿದೆ ಪರಿಣಾಮ ಕರಿಷ್ಮಾ ಅವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಅಲ್ಲದೆ ಅವರ ಜೊತೆಗಿದ್ದ ಇಬ್ಬರು ಆಸ್ಪತ್ರೆ ಸಿಬಂದಿಗಳು ಗಾಯಗೊಂಡಿದ್ದು ಸುಮಾರು 45 ನಿಮಿಷಗಳ ಕಾರ್ಯಾಚರಣೆ ಬಳಿಕ ಲಿಫ್ಟ್‌ನ ಬಾಗಿಲು ಮುರಿದು ರಕ್ಷಿಸಲಾಯಿತು. ಘಟನೆ ನಡೆದ ತಕ್ಷಣ ಆಸ್ಪತ್ರೆ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ರೋಗಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಇತ್ತ ಅವಘಡದಿಂದ ಮಹಿಳೆ ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಕರಿಷ್ಮಾ ಸಂಬಂಧಿಕರು ಆಸ್ಪತ್ರೆಯ ವಸ್ತುಗಳನ್ನು ಪುಡಿಗೈದು ಧ್ವಂಸಗೊಳಿಸಿದ್ದಾರೆ ಇದರಿಂದ ಆಸ್ಪತ್ರೆಯಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು.
#BREAKING -मेरठ हापुड़ चुंगी स्थित कैपिटल हॉस्पिटल में लिफ्ट टूटने से एक जच्चा की मौत हो गई!
ये हादसा तब हुआ जब महिला को डिलवरी के बाद ऊपर से नीचे शिफ्ट किया जा रहा था! वार्ड ब्वॉय समेत तीन लोग घायल हो गए। महिला के परिजनों ने अस्पताल में हंगामा कर तोड़फोड़ की। @meerutpolice pic.twitter.com/FdAcbH4gaw— Sonu Chouhan (TV Journalist) MRT (@SonuJournalist9) December 5, 2024
ಕರಿಷ್ಮಾ ಸಾವಿಗೆ ಆಸ್ಪತ್ರೆಯ ನಿರ್ಲಕ್ಷವೇ ಕಾರಣ ಎಂದು ಸಂತ್ರಸ್ತ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಲಿಫ್ಟ್ ಅವಘಡ ಸಂಭವಿಸಿದ ವೇಳೆ ಲಿಫ್ಟ್ ಬಾಗಿಲು ತೆರೆಯಲು ಆಸ್ಪತ್ರೆಯ ಯಾವ ಸಿಬಂದಿಯೂ ಬಂದಿಲ್ಲ ಅಷ್ಟು ಮಾತ್ರವಲ್ಲದೆ ಸುಮಾರು ಮುಕ್ಕಾಲು ಗಂಟೆಗಳ ಕಾರ್ಯಾಚರಣೆ ಬಳಿಕ ಲಿಫ್ಟ್ ಬಾಗಿಲು ಮುರಿದು ಸಿಬಂದಿ ರಕ್ಷಣೆ ಮಾಡಲಾಯಿತಾದರೂ ಲಿಫ್ಟ್ ಒಳಗೆ ಸಿಲುಕಿದ್ದ ಬಾಣಂತಿಯನ್ನು ರಕ್ಷಣೆ ಮಾಡುವ ಬದಲು ಸಿಬಂದಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಸಿಬಂದಿಗಳು ಸಹಕರಿಸುತಿದ್ದರೆ ಬಾಣಂತಿಯನ್ನು ಉಳಿಸಿಕೊಳ್ಳಬಹುತ್ತಿತ್ತು ಆದರೆ ಆಸ್ಪತ್ರೆ ಸಿಬಂದಿಗಳ ನಿರ್ಲಕ್ಷವೇ ಇದಕ್ಕೆ ನೇರ ಹೊಣೆ ಎಂದಿದ್ದಾರೆ.
ಘಟನೆ ಸಂಬಂಧ ಮಾಹಿತಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿ ಆಯುಷ್ ವಿಕ್ರಮ್ ಲಿಫ್ಟ್ ಅವಘಡದಿಂದ ಮಹಿಳೆ ಮೃತಪಟ್ಟಿದ್ದು ಮಗು ಆರೋಗ್ಯವಾಗಿದ್ದು ಸದ್ಯ ಬೇರೆ ಆಸ್ಪತ್ರೆಗೆ ಮಗುವನ್ನು ವರ್ಗಾಯಿಸಲಾಗಿದೆ ಅಲ್ಲದೆ ಕ್ಯಾಪಿಟಲ್ ಆಸ್ಪತ್ರೆಯ ವಿರುದ್ಧ ವಿವಿಧ ಪ್ರಕರಣಗಳಡಿ ಕೇಸ್ ದಾಖಲಿಸಲಾಗಿದೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಭರವಸೆಯನ್ನು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…