ಗಂಡನಿಗೆ ವಿಷ ಉಣಿಸಿ ಕೊಂದು ಪ್ರಿಯಕರನೊಂದಿಗೆ ಪತ್ನಿ ಪರಾರಿ
Team Udayavani, Jul 18, 2018, 12:12 PM IST
ಮುಜಫರನಗರ : ಗಂಡನಿಗೆ ವಿಷ ಉಣಿಸಿ ಕೊಂದು ಪ್ರಿಯಕರನೊಂದಿಗೆ ಪರಾರಿಯಾಗಿರುವ ಪತ್ನಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪತ್ನಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಅಫೇರ್ ಇರುವುದು 30ರ ಹರೆಯದ ಪತಿ ಅಫ್ಸರ್ ಅಲಿಗೆ ಗೊತ್ತಾಗಿತ್ತು. ಇದನ್ನು ಆತ ತೀವ್ರವಾಗಿ ಪ್ರತಿಭಟಿಸಿ ಆಕ್ಷೇಪಿಸಿದ್ದ. ತನ್ನ ಹಾದಿಗೆ ಅಡ್ಡಬಂದಿರುವ ಪತಿಗೆ ವಿಷ ಉಣಿಸಿ ಕೊಂದ ಬಳಿಕ ಪತ್ನಿ ಪ್ರಿಯಕರ ಜತೆಗೆ ಪಲಾಯನ ಮಾಡಿದ್ದಳು. ಘಟನೆಗೆ ಸಂಬಂಧಿಸಿ ಅಲಿ ಅವರ ಸಹೋದರ ನವಾಬ್ ಪೊಲೀಸರಿಗೆ ದೂರು ನೀಡಿದ್ದರು.
ಅಫ್ಸರ್ ಅಲಿ ಕಳೆದ ಜು.9ರಂದು ತನ್ನ ಮನೆಯಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿತ್ತು. ಆತನ ಪತ್ನಿಯು ತನ್ನ ಗಂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಳು. ಕೊಲೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಈಗ ಪರಾರಿಯಾಗಿರುವ ಜೋಡಿಯನ್ನು ಹುಡುಕುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.