ಬರಿಗೈಯಲ್ಲಿ ಹಾವು ಹಿಡಿದು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದ ಮಹಿಳೆ: ವಿಡಿಯೋ ವೈರಲ್
Team Udayavani, Sep 16, 2020, 2:45 PM IST
ನವದೆಹಲಿ: ಬರಿಗೈಯಲ್ಲಿ ಹಾವನ್ನು ಹಿಡಿದ ಮಹಿಳೆಯೊಬ್ಬಳ ಸಾಹಸದ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಕರ್ನಾಟಕ ಮೂಲದ ನಿರ್ಜಾರ ಚಿಟ್ಟಿ ಎಂಬ ಮಹಿಳೆ ಭಯಾನಕ ಹಾವೊಂದನ್ನು ನಿರಾಯಾಸವಾಗಿ ಸೆರೆಹಿಡಿದು ರಕ್ಷಣೆ ಮಾಡಿದ್ದಾರೆ.
ಸೆಪ್ಟೆಂಬರ್ 12 ರಂದು ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಆದರೇ ಮೊದಲು ಮಹಿಳೆಯನ್ನು ವಿರಾಟ್ ಭಗಿನಿ ಎಂದು ಹೆಸರಿಸಲಾಗಿತ್ತು. ತದನಂತರ ಅವರ ನಿಜವಾದ ಹೆಸರು ತಿಳಿದುಬಂದಿದ್ದು ನಿರ್ಜಾರ ಚಿಟ್ಟಿ ಎಂದು ಗುರುತಿಸಲಾಗಿದೆ.
ಗಮನಾರ್ಹ ಸಂಗತಿಯೆಂದರೇ ನಿರ್ಜಾರ ಚಿಟ್ಟಿ, ಮದುವೆ ಕಾರ್ಯಕ್ರಮಕ್ಕೆಂದು ಹೋಗಲು ಸೀರೆಯುಟ್ಟು ತಯಾರಾಗುತ್ತಿದ್ದರು. ಅದಾಗಲೇ ಹಾವೊಂದನ್ನು ಹಿಡಿಯುವಂತೆ ಅವರಿಗೆ ಕರೆ ಬರುತ್ತದೆ. ಕೂಡಲೇ ತೆರಳಿದ ನಿರ್ಜಾರ ಯಾವುದೇ ವಸ್ತುವನ್ನು ಬಳಸದೇ ಸುಲಭವಾಗಿ ಹಾವನ್ನು ಸೆರೆಹಿಡಿದು ಅರಣ್ಯಕ್ಕೆ ಬಿಡುತ್ತಾರೆ.
ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಪತಿಯ ಕೊಂದ ಮಹಿಳೆ: ರೊಚ್ಚಿಗೆದ್ದ ಗ್ರಾಮಸ್ಥರಿಂದ ಮೂವರ ಹತ್ಯೆ
Virat Bhagini, a snake catcher, was dressed to attend a wedding when she was called to catch a snake in a home. She did it without any special equipment with perfect poise in a saree. pic.twitter.com/uSQEhtqIbA
— Dr. Ajayita (@DoctorAjayita) September 12, 2020
ಸುಮಾರು 2 ನಿಮಿಷಗಳಿರುವ ಈ ವಿಡಿಯೋ ಕಳೆದ ವರ್ಷವೇ ಚಿತ್ರಿಸಲಾಗಿತ್ತು ಎಂದು ಫ್ಯಾಕ್ಟ್ ಚೆಕ್ ತಿಳಿಸಿದೆ. ಅದಾಗ್ಯೂ ಸೆಪ್ಟೆಂಬರ್ 12 ರಂದು ನೆಟ್ಟಿಗರ ಗಮನ ಸೆಳೆದಿತ್ತು. ಈ ಬಗ್ಗೆ ಮಾತನಾಡುವ ನಿರ್ಜಾರ, ಮದುವೆ ಸಂಭ್ರಮಕ್ಕೆಂದು ತೆರಳುವಾಗ ಮನೆಯೊಳಕ್ಕೆ ನುಸುಳಿದ್ದ ನಾಗರಹಾವು ಹಿಡಿಯುವಂತೆ ಕರೆ ಬಂತು. ಆದರೇ ಸೀರೆ ಧರಿಸಿದ್ದರಿಂದ ಸರಿಯಾಗಿ ನಿಭಾಯಿಸಲಾಗಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಮನಾಲಿ ಟು ಲೇಹ್: ಜಗತ್ತಿನ ಅತೀ ಉದ್ದದ ಅಟಲ್ ಸುರಂಗ ಮಾರ್ಗ- ಏನಿದರ ವಿಶೇಷತೆ
ಇದೀಗ ಈ ವಿಡಿಯೋ 4.5 ಲಕ್ಷಕ್ಕಿಂತ ಹೆಚ್ಚಿನ ವೀಕ್ಷಣೆ ಯನ್ನು ಪಡೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.