ಮಹಿಳಾ ಕಮಾಂಡೋ ಭದ್ರತೆ
Team Udayavani, Jan 18, 2018, 9:39 AM IST
ರಾಯ್‌ಪುರ: ಕಳೆದ ವರ್ಷದ ಎಪ್ರಿಲ್‌ನಲ್ಲಿ ಛತ್ತೀಸ್‌ಗಢದ ದಕ್ಷಿಣ ಸುಕ್ಮಾದಲ್ಲಿ ನಕ್ಸಲೀಯರು ನಡೆಸಿದ ದಾಳಿಗೆ 25 ಮಂದಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಸಿಬಂದಿ ಅಸುನೀಗಿದ್ದರು. ಗಮನಾರ್ಹ ಅಂಶವೆಂದರೆ ಈ ದಾಳಿ ನಡೆಸಿದ ಗುಂಪಿನಲ್ಲಿ ಮಹಿಳೆಯರೂ ಇದ್ದರು. ಅದಕ್ಕೆ ಪ್ರತಿರೋಧವೆಂಬಂತೆ ನಕ್ಸಲೀಯರ ಪ್ರಬಲವಾಗಿರುವ ಬಸ್ತಾರ್‌ನಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯ ಕಾವಲಿಗೆ 60 ಮಂದಿ ಮಹಿಳಾ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಛತ್ತೀಸ್‌ಗಡ ಪೊಲೀಸ್ ಪಡೆಗಾಗಿಯೇ ವಿಶೇಷವಾಗಿ ಆಯ್ಕೆ ಮಾಡಿ ಸುಕ್ಮಾ ಜಿಲ್ಲೆಯಲ್ಲಿ ಅವರಿಗೆ ಕಠಿನ ತರಬೇತಿ ನೀಡಿ ನಿಯೋಜಿಸಲಾಗಿದೆ.
ಈ ತಂಡದಲ್ಲಿ ಹಿಂದಿನ ಸಂದರ್ಭಗಳಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದು ಮನಃ ಪರಿವರ್ತನೆಗೊಂಡ ಕುಟುಂಬದ ಮಹಿಳೆಯರೂ ಇದ್ದಾರೆ ಎನ್ನುವುದು ವಿಶೇಷ ಎಂದು “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ. ದಕ್ಷಿಣ ಸುಕ್ಮಾದ ದೋರ್ನಪಾಲ್ ಎಂಬಲ್ಲಿಂದ ಜಗರ್‌ದೊಂಗ ಎಂಬಲ್ಲಿಗೆ ಸಂಪರ್ಕ ಕಲ್ಲಿಸುವ ನಿಟ್ಟಿನಲ್ಲಿ ಈ ರಸ್ತೆ ನಿರ್ಮಾಣವಾಗುತ್ತಿದೆ. ಅಂದ ಹಾಗೆ ಈ ರಸ್ತೆಯ ಉದ್ದ 56 ಕಿ.ಮೀ. ಈ ಪಡೆ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿ ಕೊಂಡಿರುವವರು ಮತ್ತು ಅಲ್ಲಿ ಪ್ರಯಾಣಿಸುವವರ ರಕ್ಷಣೆಗಾಗಿ ದುಡಿಯುತ್ತಿದೆ. ಅದಕ್ಕಾಗಿ ಅವರಿಗೆ ಅತ್ಯಾ ಧುನಿಕ ಸ್ವಯಂಚಾಲಿತ ಬಂದೂಕುಗಳನ್ನೂ ನೀಡಲಾಗಿದೆ.
ನಾಲ್ಕು ವರ್ಷಗಳಿಂದ ಈಚೆಗೆ ಈ ಪ್ರದೇಶದಲ್ಲಿ ವಿವಿಧ ರೀತಿಯ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ 12 ಬಾರಿ ಗುಂಡಿನ ಕಾಳಗ ನಡೆದಿದೆ. ಕಳೆದ ರವಿವಾರ ಸುಕ್ಮಾ ಜಿಲ್ಲೆಯ 50 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಏಕೈಕ ಬಸ್‌ಗೆ ನಕ್ಸಲೀ ಯರು ಬೆಂಕಿ ಹಚ್ಚಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.