Ladakh ಅತಿಕ್ರಮಣಕ್ಕೆ ಯಾರಿಗೂ ಅವಕಾಶ ಇಲ್ಲ: ಲೆ.ಜ. ಉಪೇಂದ್ರ ದ್ವಿವೇದಿ
Team Udayavani, Sep 11, 2023, 10:58 PM IST
ಲಡಾಖ್:”ಯಾರಿಗೇ ಆಗಲಿ, ಲಡಾಖ್ ಅನ್ನು ಪ್ರವೇಶಿಸಿ ನಮ್ಮ ನೆಲವನ್ನು ಅತಿಕ್ರಮಿಸಲು ಅವಕಾಶವೇ ನೀಡುವುದಿಲ್ಲ’ ಹೀಗೆಂದು ಭೂಸೇನೆಯ ನಾರ್ದರ್ನ್ ಕಮಾಂಡ್‌ನ ಮುಖ್ಯಸ್ಥ ಲೆ.ಜ. ಉಪೇಂದ್ರ ದ್ವಿವೇದಿ ಸಾರಿದ್ದಾರೆ.
ಜಮ್ಮುವಿನಲ್ಲಿರುವ ಐಐಟಿಯಲ್ಲಿ ಮೂರು ದಿನಗಳ ತಾಂತ್ರಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, “ನಮ್ಮ ಸೇನೆ ಯಾವತ್ತೂ ಯುದ್ಧ ಸನ್ನದ್ಧ ಸ್ಥಿತಿಯಲ್ಲಿಯೇ ಇರುತ್ತದೆ. ಪಾಕಿಸ್ತಾನ ಮತ್ತು ಚೀನಾ ಸೇನೆ ಗಡಿ ನಿಯಂತ್ರಣ ರೇಖೆ, ವಾಸ್ತವಿಕ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧರಾಗಿಯೇ ಇದ್ದೇವೆ. ಚೀನಾ ತಂಟೆ ಮಾಡಿದ ಲಡಾಖ್‌ನಲ್ಲಿ ಸದ್ಯ ಪರಿಸ್ಥಿತಿ ಸಾಮಾನ್ಯವಾಗಿದೆ’ ಎಂದು ಹೇಳಿದ್ದಾರೆ.
ಸದ್ಯ ನಾರ್ದರ್ನ್ ಕಮಾಂಡ್‌ನ ನಿಯಂತ್ರಣ ಇರುವ ಲಡಾಖ್‌ನ ಪ್ರದೇಶಗಳಿಗೆ ಅತಿಕ್ರಮಣ ನಡೆಸಲು ಯಾರಿಗೂ ಅವಕಾಶ ಇಲ್ಲ ಎಂದು ಲೆ.ಜ.ದ್ವಿವೇದಿ ಹೇಳಿದ್ದಾರೆ. ಮತ್ತೊಂದೆಡೆ ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ನಿವೃತ್ತ ಬ್ರಿಗೇಡಿಯರ್ ಬಿ.ಡಿ.ಮಿಶ್ರಾ ಮಾತನಾಡಿ ದೇಶದ ಯಾವುದೇ ಭಾಗ ಚೀನಾ ಸೇನೆಯ ವಶವಾಗಿಲ್ಲ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.