ಮಹಿಳೆಯನ್ನು ಅಪರಾಧಿ ಮಾಡುವ ವ್ಯಭಿಚಾರದ ಕಾನೂನು ಮುಟ್ಟೆನು: ಸುಪ್ರೀಂ
Team Udayavani, Aug 2, 2018, 11:35 AM IST
ಹೊಸದಿಲ್ಲಿ : ಮಹಿಳೆಯರನ್ನೂ ಅಪರಾಧಿಗಳನ್ನಾಗಿ ಮಾಡುವ ವ್ಯಭಿಚಾರ ನಿಗ್ರಹ ಕಾನೂನನ್ನು ತಾನು ಮುಟ್ಟಲು ಹೋಗುವುದಿಲ್ಲ ಎಂದಿರುವ ಸರ್ವೋಚ್ಚ ನ್ಯಾಯಾಲಯ, ವ್ಯಭಿಚಾರ ನಿಗ್ರಹ ಕಾನೂನು ಲಿಂಗ ಅಲಿಪ್ತ ಕಾನೂನಾಗಿರಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿತು.
ವಿವಾಹಿತ ಪರ ಸ್ತ್ರೀಯೊಂದಿಗೆ ವಿವಾಹೇತರ ಲೈಂಗಿಕ ಸಂಬಂಧ ಹೊಂದುವ ಪುರುಷನನ್ನು ಮಾತ್ರವೇ ಶಿಕ್ಷಿಸುವ ಐಪಿಸಿ ಸೆ.497 (ವ್ಯಭಿಚಾರ ನಿಗ್ರಹ ಕಾನೂನು) ರದ್ದು ಪಡಿಸಬೇಕೆಂದು ಕೋರುವ ಅರ್ಜಿಗಳ ಮೇಲಿನ ವಿಚಾರಣೆಯನ್ನು ಕೈಗೊಂಡ ಸುಪ್ರೀಂ ಕೋರ್ಟ್, ಐಪಿಸಿಯ ಸೆ.497 ಕ್ರಿಮಿನಲ್ ಅಪರಾಧವಾಗಿ ಉಳಿಯಬೇಕೇ ಬೇಡವೇ ಎಂಬುದನ್ನು ತಾನು ಪರಿಶೀಲಿಸುವುದಾಗಿ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂ ಪೀಠ ಹೇಳಿತು.
ಇನ್ನೊಬ್ಬ ವ್ಯಕ್ತಿಯ ಪತ್ನಿಯೊಂದಿಗೆ ತಾನು ಪರಸ್ಪರ ಒಪ್ಪಿಗೆಯ ಮೇಲೆ ಸಂಭೋಗ ನಡೆಸಿದ್ದಾಗಿ ಹೇಳುವ ವ್ಯಕ್ತಿಯನ್ನು ಜೈಲಿಗೆ ಅಟ್ಟಲು ಸಾಧ್ಯವೇ ಎಂಬುದನ್ನು ಕೂಡ ಪರಿಶೀಲಿಸುವುದಾಗಿ ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ, ಜಸ್ಟಿಸ್ಗಳಾದ ರೊಹಿನ್ಟನ್ ಫಾಲಿ ನಾರಿಮನ್, ಎ ಎಂ ಖಾನ್ವಿಲ್ಕರ್ , ಡಿ ವೈ ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರ ಅವರನ್ನು ಒಳಗೊಂಡ ಪೀಠ ಹೇಳಿತು.
ಸಂವಿಧಾನದ 14ನೇ ವಿಧಿಯ ನೆಲೆಯಲ್ಲಿ (ಕಾನೂನಿನ ಮುಂದೆ ಎಲ್ಲರೂ ಸಮಾನರು) ಐಪಿಸಿಯ ಸೆ.497 (ವ್ಯಭಿಚಾರ ನಿಗ್ರಹ) ಕ್ರಿಮಿನಲ್ ಅಪರಾಧವಾಗಿ ಉಳಿಯಲು ಸಾಧ್ಯವೇ ಎಂಬುದನ್ನು ತಾನು ಪರಿಶೀಲಿಸುವುದಾಗಿ ಪೀಠವು ಹೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
Super App: ರೈಲು ಬುಕಿಂಗ್, ಟ್ರ್ಯಾಕ್ಗೆ ‘’ಸೂಪರ್ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
MUST WATCH
ಹೊಸ ಸೇರ್ಪಡೆ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
Virtual ; ಟರ್ಕಿಯಯಲ್ಲಿ ವರ, ಹಿಮಾಚಲದಲ್ಲಿ ವಧು : ಆನ್ ಲೈನ್ ನಲ್ಲೇ ನಿಖ್ಹಾ!
Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್ಫೇಕ್ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ
Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.