ನೀರಿಗೆ ಬರ : ಮನೆಯಿಂದಲೇ ಕೆಲಸ ಮಾಡಿ!
ನೀರಿಗೆ ಬರ: "ವರ್ಕ್ ಫ್ರಂ ಹೋಂ' ಮೊರೆ ಹೋದ ಐಟಿ ಕ್ಷೇತ್ರ
Team Udayavani, Jun 14, 2019, 6:10 AM IST
ಚೆನ್ನೈ: ಕಳೆದ 200 ದಿನಗಳಿಂದ ಮಳೆ ಬೀಳದ ಹಿನ್ನೆಲೆಯಲ್ಲಿ ಚೆನ್ನೈ ನಗರ ನೀರಿನ ತೀವ್ರಕ್ಷಾಮ ಎದುರಿಸುತ್ತಿದ್ದು, ಅದರ ಬಿಸಿ ಈಗ ಅಲ್ಲಿನ ಐಟಿ ವಲಯಕ್ಕೂ ತಟ್ಟಿದೆ. ಹಳೆ ಮಹಾಬಲಿಪುರಂ ರಸ್ತೆಯ (ಒಎಂಆರ್) ಪ್ರಾಂತ್ಯದಲ್ಲಿರುವ ಸುಮಾರು 12 ಐಟಿ ಕಂಪೆನಿಗಳು ತಮ್ಮ 5,000 ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ (ವರ್ಕ್ ಫ್ರಂ ಹೋಂ) ಸೂಚಿಸಿವೆ. ಮುಂದಿನ ಮೂರು ತಿಂಗಳವರೆಗೆ ಚೆನ್ನೈನಲ್ಲಿ ಮಳೆಯಾಗುವ ಯಾವುದೇ ಲಕ್ಷಣಗಳು ಕಾಣದಿರುವುದು ಈ ಕಂಪೆನಿಗಳನ್ನು ಕಂಗೆಡಿಸಿದೆ.
ಒಎಂಆರ್ ಪ್ರಾಂತ್ಯದಲ್ಲಿ ಸುಮಾರು 600 ಐಟಿ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿನ ಹಲವಾರು ಕಂಪೆನಿಗಳು ಬಳಸಿದ ನೀರನ್ನೇ ಶುದ್ಧೀಕರಿಸಿ ಮರುಬಳಕೆ ಮಾಡು ತ್ತಿದ್ದರೂ, ಅದು ಕಚೇರಿಯ ಅಗತ್ಯದ ಕೇವಲ ಶೇ. 55ರಷ್ಟನ್ನು ಮಾತ್ರ ಪೂರೈಸುತ್ತಿದೆ. ಹಾಗಾಗಿ, ಕೆಲ ಕಂಪೆನಿಗಳು ಉದ್ಯೋಗಿಗಳಿಗೆ ಕೆಲವು ನಿಬಂಧನೆಗಳನ್ನು ಹೇರತೊಡಗಿವೆ. ಉದಾಹರಣೆಗೆ, “ಫೋರ್ಡ್ ಬ್ಯುಸಿನೆಸ್ ಸರ್ವೀಸಸ್’ ಕಂಪೆನಿ, ಉದ್ಯೋಗಿಗಳು ತಮ್ಮ ಕುಡಿಯುವ ನೀರನ್ನು ಮನೆಯಿಂದಲೇ ತರುವಂತೆ ಆದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.