ದಿಲ್ಲಿಯಲ್ಲೀಗ ವಿಶ್ವದ ಅತ್ಯಂತ ಪರಿಶುದ್ಧ ಪಟ್ರೋಲ್, ಡೀಸಿಲ್ ಲಭ್ಯ
Team Udayavani, Apr 2, 2018, 7:34 PM IST
ಹೊಸದಿಲ್ಲಿ : ದೇಶದಲ್ಲಿ ವಾಯು ಮಾಲಿನ್ಯ ಕಳವಳಕಾರಿ ಮಟ್ಟಕ್ಕೆ ಏರುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರಿ ಒಡೆತನದ ತೈಲ ಕಂಪೆನಿಗಳು, ಗಡುವು ತೀರುವ ಎರಡು ವರ್ಷಗಳ ಮೊದಲೇ, ದಿಲ್ಲಿಯಲ್ಲಿ ಯೂರೋ 6 ಗ್ರೇಡ್ ಇಂಧನವನ್ನು ಬಿಡುಗಡೆ ಮಾಡಿವೆ. ಅಂತೆಯೇ ದಿಲ್ಲಿಯಲ್ಲೀಗ ವಿಶ್ವದ ಅತ್ಯಂತ ಪರಿಶುದ್ಧ ಪಟ್ರೋಲ್ ಮತ್ತು ಡೀಸಿಲ್ ಗ್ರಾಹಕರಿಗೆ ಲಭ್ಯವಿದೆ.
ನಿನ್ನೆ ಭಾನುವಾರದಿಂದ ತೊಡಗಿ ದಿಲ್ಲಿಯು ಯೂರೋ 4 ಗ್ರೇಡ್ ಇಂಧನದಿಂದ ಯೂರೋ 6 ಗ್ರೇಡ್ ಇಂಧನಕ್ಕೆ ಜಿಗಿದ ದೇಶದ ಪ್ರಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದಿಲ್ಲಿಯಲ್ಲಿ ಈಗ ಲಭ್ಯವಿರುವ ಈ ಪರಿಶುದ್ಧ ಇಂಧನವು 50 ಪಾರ್ಟ್ ಪರ್ ಮಿಲಿಯನ್‌ಗೆ ಬದಲಾಗಿ ಟೆನ್ ಪಾರ್ಟ್ ಪರ್ ಮಿಲಿಯನ್ (ಪಿಪಿಎಂ) ಸಲ್‌ಫರ್ ಹೊಂದಿದೆ.
ಈ ಸಂಬಂಧ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ತೈಲ ಸಚಿವ ಧರ್ಮೇಂದ್ರ ಪ್ರಧಾನ್ “ತೈಲ ಕಂಪೆನಿಗಳು ಗ್ರಾಹಕರಿಗೆ ಪರಿಶುದ್ಧ ಇಂಧನ ಪೂರೈಸುವ ತಮ್ಮ ಬದ್ಧತೆಯನ್ನು ಕಾಯ್ದುಕೊಂಡಿವೆ. ಆ ಪ್ರಕಾರ ಈಗಿನ್ನು ಯೂರೋ 6 ಗ್ರೇಡ್‌ನ ಮೋಟಾರು ವಾಹನಗಳನ್ನು ಪರಿಚಯಿಸುವ ಬದ್ಧತೆ ಆಟೋಮೊಬೈಲ್ ಕೈಗಾರಿಕೆಯದ್ದಾಗಿದೆ’ ಎಂದು ಹೇಳಿದರು.
ಅತ್ಯಂತ ಪರಿಶುದ್ಧ ಬಿಎಸ್ 6 ಗ್ರೇಡ್ ಪೆಟ್ರೋಲ ಮತ್ತು ಡೀಸಿಲ್ ಪೂರೈಸುವ ಸಲುವಾಗಿ ತಂತ್ರಜ್ಞಾನ ಮತ್ತು ಸಂಸ್ಕರಣ ಪ್ರಕ್ರಿಯೆಗಳನ್ನು ಮೇಲ್ಮಟ್ಟಕ್ಕೆ ಏರಿಸಲು ತೈಲ ಕಂಪೆನಿಗಳು 30,000 ಕೋಟಿ ರೂ. ಹಣವನ್ನು ಹೂಡಿವೆ. ಇದರ ಫಲವಾಗಿ 2010ರೊಳಗೆ ದೇಶಾದ್ಯಂತ ಅತ್ಯಂತ ಪರಿಶುದ್ಧ ಇಂಧನವನ್ನು ಪೂರೈಸುವ ಬದ್ಧತೆಯನ್ನು ಅವು ಪೂರೈಸುವ ವಿಶ್ವಾಸವಿದೆ’ ಎಂದು ಪ್ರಧಾನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.