2 ತಿಂಗಳುಗಳಲ್ಲಿ 242 ಕೆ.ಜಿ. ತೂಕ ಕಳೆದುಕೊಂಡ ಎಮಾನ್ ಆಹ್ಮದ್!
Team Udayavani, Apr 13, 2017, 10:56 AM IST
ಮುಂಬಯಿ: ವಿಶ್ವದ ಅತ್ಯಂತ ದಢೂತಿ ಮಹಿಳೆ ಎಂಬ ಕುಖ್ಯಾತಿಗೆ ಪಾತ್ರಳಾಗಿದ್ದ ಈಜಿಪ್ಟ್ನ ಅಲೆಕ್ಸಾಂಡ್ರಿಯಾದ ಮಹಿಳೆ ಎಮಾನ್ ಆಹ್ಮದ್ ಸದ್ಯ ನಗರದ ಸೈಫೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸುಮಾರು 500 ಕೆ.ಜಿ. ತೂಕವನ್ನು ಹೊಂದಿದ್ದ ಎಮಾನ್ ಇದೀಗ ಬ್ಯಾರಿಯಾಟ್ರಿಕ್ ಸರ್ಜರಿಯ ಬಳಿಕ ಬರೋಬ್ಬರಿ 242ಕೆ.ಜಿ. ತೂಕವನ್ನು ಕಳೆದುಕೊಂಡಿದ್ದಾಳೆ.
ಎಮಾನ್ ಅಹ್ಮದ್ ಚಿಕಿತ್ಸೆಗಾಗಿ ಆಕೆಯ ಪ್ರಯಾಣಕ್ಕೆಂದೇ ಕೆಲವೊಂದು ಮಾರ್ಪಾಡುಗಳನ್ನು ಮಾಡಲಾಗಿದ್ದ ವಿಮಾನದಲ್ಲಿ ನಗರದಲ್ಲಿ ಬಂದಿಳಿದಾಗ ಆಕೆಯ ತೂಕ 498ಕೆ.ಜಿ.ಗಳಷ್ಟಿತ್ತು. ಆಸ್ಪತ್ರೆಗೆ ದಾಖಲಾದ ತತ್ಕ್ಷಣ ಪಥ್ಯಾಹಾರದ ಚಿಕಿತ್ಸೆಯನ್ನು ಆರಂಭಿಸಲಾಗಿತ್ತಲ್ಲದೆ ಈ ಒಂದು ತಿಂಗಳ ಅವಧಿಯಲ್ಲಿ ಆಕೆ ಸುಮಾರು 130ಕೆ.ಜಿ.ಗಳಷ್ಟು ತೂಕವನ್ನು ಕಳೆದುಕೊಂಡಿದ್ದಳು. ಇದಾದ ಬಳಿಕ ಮಾ.7ರಂದು ಆಕೆಗೆ ಹೆಸರಾಂತ ಬ್ಯಾರಿಯಾಟ್ರಿಕ್ ಸರ್ಜನ್ ಆಗಿರುವ ಡಾ|ಮುಫಜಲ್ ಲಕಾxವಾಲಾ ನೇತೃತ್ವದ ವೈದ್ಯರ ತಂಡ ಬ್ಯಾರಿಯಾಟ್ರಿಕ್ ಸರ್ಜರಿ ನಡೆಸಿತ್ತು. ನಗರದ ಸೈಫೀ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಆಕೆಗೆ ಚಿಕಿತ್ಸೆ ಆರಂಭಿಸಿ ಎರಡು ತಿಂಗಳುಗಳು ಕಳೆದಿದ್ದು ಈ ಅವಧಿಯಲ್ಲಿ ಆಕೆ 242 ಕೆ.ಜಿ.ತೂಕವನ್ನು ಕಳೆದುಕೊಂಡಿದ್ದಾಳೆ. ತೂಕ ಕಡಿಮೆಯಾಗುತ್ತಿದ್ದಂತೆಯೇ ಆಕೆಯ ಇತರೆ ಆರೋಗ್ಯ ಸ್ಥಿತಿಯಲ್ಲಿಯೂ ಸುಧಾರಣೆಗಳು ಕಂಡುಬಂದಿವೆ. ಆಕೆಯ ಹೃದಯ, ಕಿಡ್ನಿ, ಶ್ವಾಸಕೋಶಗಳು ಈ ಹಿಂದಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಆಕೆಗೆ ಚಿಕಿತ್ಸೆ ನೀಡುತ್ತಿರುವ ಸೈಫೀ ಆಸ್ಪತ್ರೆಯ ವೈದ್ಯರ ತಿಳಿಸಿದ್ದಾರೆ.
ಆದರೆ ಮೂರು ವರ್ಷಗಳ ಹಿಂದೆ ಆಕೆ ಮೆದುಳಿನ ಆಘಾತಕ್ಕೊಳಗಾಗಿದ್ದ ಹಿನ್ನೆಲೆಯಲ್ಲಿ ಆಕೆಯ ದೇಹದ ಬಲಭಾಗಕ್ಕೆ ಪಾರ್ಶ್ವವಾಯುವಿಗೆ ತುತ್ತಾಗಿದ್ದು ಇದರಲ್ಲಿ ಅಷ್ಟೇನೂ ಸುಧಾರಣೆ ಕಂಡಿಲ್ಲ ಎಂದು ಆಸ್ಪತ್ರೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.