ವಿಶ್ವದ ಬೃಹತ್ ಧ್ಯಾನಕೇಂದ್ರ ವಾರಾಣಸಿಯಲ್ಲಿ ಅನಾವರಣ
ಸ್ವರವೇದ ಮಂದಿರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
Team Udayavani, Dec 19, 2023, 12:51 AM IST
ವಾರಾಣಸಿ: ಉತ್ತರಪ್ರದೇಶದ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ವಿಶ್ವದ ಅತೀದೊಡ್ಡ ಧ್ಯಾನ ಕೇಂದ್ರ “ಸ್ವರವೇದ ಮಹಾಮಂದಿರ’ವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಏಕಕಾಲಕ್ಕೆ 20 ಸಾವಿರ ಮಂದಿ ಕುಳಿತು ಧ್ಯಾನಿಸಲು ಸಾಧ್ಯವಿರುವುದು ಈ ಕೇಂದ್ರದ ವಿಶೇಷ.
ವಾರಾಣಸಿಯಿಂದ 12 ಕಿ.ಮೀ. ದೂರದ ಉಮರಾಹಾ ಪ್ರದೇಶದಲ್ಲಿ ಸುಮಾರು 3 ಲಕ್ಷ ಚ.ಅಡಿ ವಿಸ್ತೀರ್ಣದಲ್ಲಿ ಮಂದಿರವನ್ನು ನಿರ್ಮಿಸಲಾಗಿದೆ. 7 ಮಹಡಿಗಳ ಈ ಮಂದಿರದ ಗೋಡೆಗಳಲ್ಲಿ ಸ್ವರವೇದದ ಶ್ಲೋಕಗಳನ್ನು ಕೆತ್ತಲಾಗಿದೆ.
ಮಂದಿರ ಲೋಕಾರ್ಪಣೆಗೊಳಿಸಿ ಮಾತನಾಡಿದ ಪ್ರಧಾನಿ ಮೋದಿ, “ಭಾರತವು ಈಗ ಗುಲಾಮಗಿರಿ ಮನಸ್ಥಿತಿಯಿಂದ ಮುಕ್ತವಾಗಿದ್ದು, ತನ್ನ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಿದೆ. ಗುಲಾಮಗಿರಿಯ ಸಮಯದಲ್ಲಿ ಶೋಷಕರು ಮೊದಲಿಗೆ ದೇಶದ ಸಂಕೇತಗಳ ಮೇಲೆ ದಾಳಿ ನಡೆಸಿ, ಭಾರತವನ್ನು ದುರ್ಬಲಗೊಳಿಸಲು ಯತ್ನಿಸಿದರು. ಸ್ವಾತಂತ್ರಾéನಂತರವೂ ಸೋಮನಾಥ ದೇಗುಲ ಸೇರಿದಂತೆ ಪ್ರಮುಖ ಸ್ಥಳಗಳ ಮರುಸ್ಥಾಪನೆಗೆ ಕೆಲವರು ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ದೇಶವು ಕೀಳರಿಮೆಗೆ ಬಿದ್ದು, ತನ್ನ ಪರಂಪರೆಯ ಬಗ್ಗೆ ಹೆಮ್ಮೆ ಪಡುವುದನ್ನೇ ಮರೆತುಬಿಟ್ಟಿತು’ ಎಂದು ಹೇಳಿದ್ದಾರೆ.
ನಾಲ್ಕು ರೈಲುಗಳಿಗೆ ಹಸುರು ನಿಶಾನೆ
ಹೊಸದಿಲ್ಲಿ-ವಾರಾಣಸಿ ವಂದೇ ಭಾರತ್ ರೈಲು ಸೇರಿದಂತೆ ಒಟ್ಟು 4 ರೈಲುಗಳಿಗೆ ಸೋಮವಾರ ಪ್ರಧಾನಿ ಮೋದಿ ಹಸುರು ನಿಶಾನೆ ತೋರಿದ್ದಾರೆ. ಕೇಸರಿ ಬಣ್ಣದ ವಂದೇ ಭಾರತ್ ರೈಲಿನಲ್ಲಿ ವೈಫೈ, ಜಿಪಿಎಸ್ ಆಧರಿತ ಮಾಹಿತಿ ವ್ಯವಸ್ಥೆ, ಜೈವಿಕ ಶೌಚಾಲಯ, ಪ್ರತೀ ಸೀಟಿಗೂ ಚಾರ್ಜಿಂಗ್ ಪಾಯಿಂಟ್ ಸೇರಿ ಅತ್ಯಾಧುನಿಕ ಸೌಲಭ್ಯಗಳಿವೆ. ಇದೇ ವೇಳೆ ದೀನ್ ದಯಾಳ್ ಉಪಾಧ್ಯಾಯ್ ಜಂಕ್ಷನ್‌ನಿಂದ ಭಾವ್‌ಪುರ ಜಂಕ್ಷನ್‌ವರೆಗಿನ ಫ್ರೈಟ್ ಕಾರಿಡಾರ್‌ಗೂ ಚಾಲನೆ ನೀಡಿದ್ದಾರೆ. 10,903 ಕೋಟಿ ರೂ. ವೆಚ್ಚದಲ್ಲಿ ಇದು ನಿರ್ಮಾಣವಾಗಿದೆ.
ಸ್ವರವೇದ ಮಂದಿರದ ವೈಶಿಷ್ಟ್ಯ
7 ಮಹಡಿಗಳು, 20,000 ಆಸನ ಸಾಮರ್ಥ್ಯ, 3,00,000 ಚ.ಅಡಿ.: ಒಟ್ಟು ವ್ಯಾಪ್ತಿ
ಮೋದಿಯ ಗ್ಯಾರಂಟಿ ವಾಹನವು ದೇಶಾದ್ಯಂತ ಸೂಪರ್‌ಹಿಟ್ ಆಗುತ್ತಿದೆ. ಜನರ ಸ್ಪಂದನೆಯು ದೇಶವನ್ನು 2047ರ ವೇಳೆಗೆ ಅಭಿವೃದ್ಧಿಯ ಉತ್ತುಂಗಕ್ಕೇರಿಸಲಿದೆ.
ನರೇಂದ್ರ ಮೋದಿ, ಪ್ರಧಾನಿ
ದೇಶವಾಸಿಗಳಿಗೆ ಮೋದಿಯಿಂದ 9 ಆಗ್ರಹ
ಸ್ವರವೇದ ಮಂದಿರ ಉದ್ಘಾಟನೆ ವೇಳೆ ಮಾತನಾಡಿದ ಪ್ರಧಾನಿ ಮೋದಿ, “9 ಸಂಕಲ್ಪಗಳು ಮತ್ತು 9 ಆಗ್ರಹಗಳನ್ನು’ ಜನರ ಮುಂದಿಟ್ಟಿದ್ದಾರೆ. ನೀರು ಸಂರಕ್ಷಣೆ, ಡಿಜಿಟಲ್ ವಹಿವಾಟಿಗೆ ಪ್ರೇರಣೆ, ಸ್ವತ್ಛತೆಗೆ ಆದ್ಯತೆ, ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ, ಸಾಧ್ಯವಾದಷ್ಟು ದೇಶದೊಳಗೇ ಪ್ರವಾಸ, ನೈಸರ್ಗಿಕ ಕೃಷಿಗೆ ಪ್ರೋತ್ಸಾಹ, ದಿನನಿತ್ಯ ಸಿರಿಧಾನ್ಯಗಳ ಬಳಕೆ, ಯೋಗ-ಕ್ರೀಡೆಯಂಥ ಫಿಟೆ°ಸ್ ವಿಧಾನಗಳ ಅಳವಡಿಕೆ, ಬಡ ಕುಟುಂಬಕ್ಕೆ ನೆರವು. ಈ 9 ಆಗ್ರಹಗಳನ್ನು ಪೂರೈಸುವಂತೆ ಮೋದಿ ಕರೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.