![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Jan 16, 2024, 5:55 AM IST
ದಾವೋಸ್: 2020ಕ್ಕೆ ಹೋಲಿಸಿದರೆ ವಿಶ್ವದ ಟಾಪ್ 5 ಶ್ರೀಮಂತರ ಸಂಪತ್ತು ದುಪ್ಪಟ್ಟಾಗಿದೆ. ಇದೇ ವೇಳೆ ವಿಶ್ವದಲ್ಲಿ 500 ಕೋಟಿ ಬಡವರಿದ್ದಾರೆ ಎಂದು ಆಕ್ಸ್‌ಫ್ಯಾಮ್ ವಾರ್ಷಿಕ ವರದಿ ತಿಳಿಸಿದೆ.
ದಾವೋಸ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆ ಯ ವಾರ್ಷಿಕ ಸಭೆಯ ಮೊದಲ ದಿನ ಆಕ್ಸ್‌ಫ್ಯಾಮ್ ತನ್ನ ವಾರ್ಷಿಕ ಅಸಮಾನತೆ ವರದಿ ಬಿಡುಗಡೆಗೊಳಿಸಿದೆ. ವಿಶ್ವದ 10 ದೊಡ್ಡ ಕಂಪನಿಗಳ ಪೈಕಿ 7 ಕಂಪನಿಗಳ ಸಿಇಒ ಅಥವಾ ಪ್ರಧಾನ ಷೇರುದಾರ ಶತ ಕೋಟ್ಯಧಿಪತಿಯಾಗಿದ್ದಾರೆ. ಇನ್ನೊಂ ದೆಡೆ, 2020ಕ್ಕೆ ಹೋಲಿಸಿದರೆ ಜಗತ್ತಿನ ಟಾಪ್ ಐವರು ಶ್ರೀಮಂತರ ಆಸ್ತಿ ಮೌಲ್ಯ 405 ಬಿಲಿಯನ್ ಡಾಲರ್‌ನಿಂದ 869 ಬಿಲಿಯನ್ ಡಾಲರ್‌ವರೆಗೆ ಏರಿಕೆ ಯಾಗಿದೆ. ಇನ್ನೊಂದೆಡೆ 229 ವರ್ಷಗಳ ವರೆಗೆ ಬಡತನ ನಿರ್ಮೂಲನೆ ಅಸಾಧ್ಯ ಎಂದು ವರದಿ ಹೇಳಿದೆ.
ಬಡತನದಿಂದ 24 ಕೋಟಿ ಮಂದಿ ಹೊರಕ್ಕೆ!
ಹೊಸದಿಲ್ಲಿ: ದೇಶದಲ್ಲಿ 9 ವರ್ಷ ಗಳಲ್ಲಿ 24.82 ಕೋಟಿ ಮಂದಿ ಬಹು ಆಯಾಮದ ಬಡತನದಿಂದ ಹೊರ ಬಂದಿದ್ದಾರೆ ಎಂದು ನೀತಿ ಆಯೋಗ ತಿಳಿಸಿದೆ. ಬಹು ಆಯಾ ಮದ ಬಡತನವನ್ನು ಆರೋಗ್ಯ, ಶಿಕ್ಷಣ ಹಾಗೂ ಜೀವನಮಟ್ಟ ಸುಧಾ ರಣೆಯಿಂದ ಅಳೆಯಲಾಗು ತ್ತದೆ. ಈ ಪ್ರಕಾರ, ಭಾರತದಲ್ಲಿ ಈ ಬಡ ತನವು 2013-14ರಲ್ಲಿ ಶೇ. 29.17ರಿಂದ 2022-23ರಲ್ಲಿ ಶೇ.11.28ಕ್ಕೆ ಇಳಿದಿದೆ. ಈ ಅವಧಿ ಯಲ್ಲಿ 24.82 ಜನರು ಈ ರೇಖೆ ಯಿಂದ ಹೊರಬಂದಿದ್ದಾರೆ ಎಂದು ವರದಿ ಹೇಳಿದೆ.
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.