ನಮ್ಮಲ್ಲೇ ಬುರ್ಜ್‌ ಖಲೀಫಾ ಮೀರಿಸುವ ಕಟ್ಟಡ ನಿರ್ಮಾಣ


Team Udayavani, Apr 17, 2017, 10:27 AM IST

17-PTI-6.jpg

ಹೊಸದಿಲ್ಲಿ: ಎತ್ತರದಲ್ಲಿ ದುಬೈನ 163 ಅಂತಸ್ತಿನ ಬುರ್ಜ್‌ ಖಲೀಫಾವನ್ನೂ ಮೀರಿಸುವ ಕಟ್ಟಡ, ಅಂದ-ಚಂದದಲ್ಲಿ ಮುಂಬಯಿನ ಮರೀನ ಡ್ರೈವ್‌ ಕೂಡ ನಾಚುವಂತೆ ಮಾಡುವ ಮತ್ತು ಅದಕ್ಕಿಂತಲೂ 3 ಪಟ್ಟು ದೊಡ್ಡದಾದ ಹಸಿರು ಹೆದ್ದಾರಿ, ಕಣ್ಮನ ಸೆಳೆಯು ವಂಥ ಕಟ್ಟಡ, ರಸ್ತೆ ಪಾರ್ಕ್‌ಗಳು… ದೇಶದ ಆರ್ಥಿಕ ರಾಜಧಾನಿ ಮುಂಬಯಿ ಇಂಥ ಅದ್ಭುತಗಳ ನೆಲೆಯಾಗುವ ಕಾಲ ದೂರವಿಲ್ಲ. ಇಂಥದೊಂದು ಯೋಜನೆಯನ್ನು ಸದ್ದಿಲ್ಲದೆ ಸಿದ್ಧ ಪಡಿಸಿರುವ ನೌಕಾಯಾನ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ಯೋಜನೆಗೆ ಸಂಪುಟದ ಸಮ್ಮತಿ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ. 

ಹೀಗೆ ಆಕರ್ಷಣೆಯ ತಾಣವಾಗಿ ಜಗತ್ತನ್ನೇ ತನ್ನತ್ತ ಸೆಳೆಯಲು ಆಯ್ಕೆಯಾಗಿರುವುದು ಮುಂಬಯಿ ಮಹಾನಗರದ ಕಡಲ ಕಿನಾರೆ. ಈ ಎಲ್ಲ ಕಾರ್ಯಗಳಿಗೆ ಸ್ಥಳಾವಕಾಶ ಒದಗಿಸಲಿರುವುದು, ವಾಣಿಜ್ಯ ನಗರಿಯ ನಂ.1 ಸಂಸ್ಥೆ “ಮುಂಬಯಿ ಬಂದರು ಪ್ರಾಧಿಕಾರ (ಎಂಪಿಟಿ). “ತಾಜ್‌ ಹೋಟೆಲ್‌, ಬಲ್ಲಾರ್ಡ್‌ ಎಸ್ಟೇಟ್‌, ರಿಲಾಯನ್ಸ್‌ ಬಿಲ್ಡಿಂಗ್‌ ಸೇರಿದಂತೆ ಹಲವು ಪ್ರತಿಷ್ಠಿತ ಆಸ್ತಿಗಳನ್ನು ಹೊಂದಿರುವ ಎಂಬಿಪಿಟಿ, ಅತ್ಯಂತ ವಿಶಾಲವಾದ ಬಂದರು ಪ್ರದೇಶವನ್ನು ಹೊಂದಿದ್ದು, ಈ ಬಂದರನ್ನು ಅಭಿವೃದ್ಧಿಪಡಿಸುವ ಸುಂದರ ಯೋಜನೆಗಳು ನಮ್ಮ ಬಳಿ ಇವೆ. ಈ ಭೂಮಿಯನ್ನು ಬಿಲ್ಡರ್‌ಗಳಿಗೆ ಕೊಡದೆ, ಸರಕಾರವೇ ಖುದ್ದಾಗಿ ನಿಂತು, ನಿರ್ವಹಣೆ ಹೊಣೆ ಹೊರಲಿದ್ದು, ಮುಂಬಯಿನ ಸಮುದ್ರ ತೀರದಲ್ಲಿ ಬುರ್ಜ್‌ ಖಲೀಫಾಗಿಂತಲೂ ಎತ್ತರದ ಕಟ್ಟಡ, ಮರೀನ್‌ ಡ್ರೈವ್‌ಗಿಂತ 3 ಪಟ್ಟು ದೊಡ್ಡದಾದ ಹಸಿರು ಪಥ ನಿರ್ಮಾಣವಾಗಲಿದೆ,’ ಎನ್ನುತ್ತಾರೆ ಗಡ್ಕರಿ. ಬಂದರಿನ ಮೂಲ ಸೌಲಭ್ಯಗಳ ವಿನ್ಯಾಸ ಹಾಗೂ ಮಾಸ್ಟರ್‌ ಪ್ಲಾನ್‌ಗೆ ಸಂಬಂಧಿಸಿದಂತೆ ಮುಂಬಯಿ ಪೋರ್ಟ್‌ ಈಗಾಗಲೇ ಜಾಗತಿಕ ಟೆಂಡರ್‌ ಕರೆದಿದೆ.

ಮುಂಬಯಿ ಪೋರ್ಟ್‌ ಟ್ರಸ್ಟ್‌
1873ರಲ್ಲಿ ಸ್ಥಾಪನೆಯಾದ ಮುಂಬಯಿ ಪೋರ್ಟ್‌ ಟ್ರಸ್ಟ್‌, ದೇಶದ ಅಗ್ರ 12 ಬಂದರುಗಳ ಪೈಕಿ ಒಂದೆನಿ ಸಿದ್ದು, ಮುಂಬಯಿನ ನಂ.1 ಲ್ಯಾಂಡ್‌ಲಾರ್ಡ್‌ ಎನಿಸಿದೆ.

ಅಭಿವೃದ್ಧಿಯಾಗುವ ಪ್ರದೇಶ
ಸುಮಾರು 500 ಹೆಕ್ಟೇರ್‌ ಪ್ರದೇಶ ಅಭಿವೃದ್ಧಿಗೆ ಒಳಪಡಲಿದ್ದು, ಬಂದರು ಕಾರ್ಯಾಚರಣೆ, ವ್ಯವಹಾರ, ಕಚೇರಿ, ವಾಣಿಜ್ಯ, ರೀಟೇಲ್‌, ಮನೋರಂಜನೆ, ಸಮುದಾಯ ಯೋಜನೆಗಳು ಮತ್ತು ಸಮುದಾಯ ಭವನಗಳು ಸೇರಿದಂತೆ ಇನ್ನೂ ಹಲವು ಸೌಲಭ್ಯಗಳು ಇಲ್ಲಿ ತಲೆಯೆತ್ತಲಿವೆ.

ಬೃಹತ್‌ ಮರೀನ್‌ ಡ್ರೈವ್‌
ಮಡ್‌ಗಾಂವ್‌ ಡಾಕ್ಸ್‌ ಮತ್ತು ವಡಾಲ ನಡುವೆ ಸುಮಾರು 7 ಕಿ.ಮೀ ಉದ್ದದ ಮರೀನ್‌ ಡ್ರೈವ್‌ ನಿರ್ಮಿಸುವುದು ಈ ಯೋಜನೆಯ ಪ್ರಮುಖ ಭಾಗ. ಇದು ಹಾಲಿ ಇರುವ ಮರೀನ್‌ ಡ್ರೈವ್‌ಗಿಂತಲೂ ಮೂರು ಪಟ್ಟು ದೊಡ್ಡದಿರಲಿದೆ.

ಖಲೀಫಾ ಮೀರಿಸುವ ಕಟ್ಟಡ
ಇದೇ ಬಂದರು ಪ್ರದೇಶದಲ್ಲಿ ದುಬೈನ್‌ ಬುರ್ಜ್‌ ಖಲೀಫಾಗಿಂತಲೂ ಎತ್ತರವಾಗಿರುವ ಕಟ್ಟಡ ನಿರ್ಮಿಸುವ ಯೋಜನೆಯಿದೆ. ಬೃಹತ್‌ ಮರೀಗೆ ಹೊಂದಿಕೊಂಡಂತೆಯೇ ಈ ಗಗನಚುಂಬಿ ಕಟ್ಟಡ ನಿರ್ಮಾಣವಾಗಲಿದ್ದು, ಜಗತ್ತಿನ ಆಕರ್ಷಣೆಯ ಕೇಂದ್ರವಾಗಲಿದೆ.

ಮುಂದಿನ ಯೋಜನೆ
ಮುಂಬಯಿ ಬಂದರು ಅಭಿವೃದ್ಧಿಗೊಂಢ ಅನಂತರ ಕೋಲ್ಕತಾ ಬಂದರನ್ನು ಸುಂದರವಾಗಿಸುವ ಕಾರ್ಯ ನಡೆಯಲಿದೆ. ಇದರೊಂದಿಗೆ ಸ್ಮಾರ್ಟ್‌ ಸಿಟಿ ಯೋಜನೆಯಡಿ ಖಂಡಾಲ ಬಂದರನ್ನು ಸ್ಮಾರ್ಟ್‌ ಆಗಿಸುವ ಆಲೋಚನೆ ಕೂಡ ಕೇಂದ್ರಕ್ಕಿದೆ.

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.