ಯಚುಲಿ ಬೇಸಿಗೆ ರಾಜಧಾನಿ!
Team Udayavani, Nov 9, 2017, 6:20 AM IST
ಯಚುಲಿ: ಪ್ರೇಮಿಗಳ ಸ್ವರ್ಗವೆಂದೇ ಬಣ್ಣಿಸಲಾಗುವ ಅರುಣಾಚಲ ಪ್ರದೇಶದ ಯಚುಲಿ ನಗರವನ್ನು ಆ ರಾಜ್ಯದ ಬೇಸಿಗೆ ರಾಜಧಾನಿಯೆಂದು ಘೋಷಿಸಲಾಗಿದೆ. ಟಿಬೆಟ್ ಗಡಿ ಭಾಗಕ್ಕೆ ಅಂಟಿಕೊಂಡಂತಿರುವ ಈ ನಗರಕ್ಕೆ ಟಿಬೆಟ್ನಿಂದ ಬರುತ್ತಿರುವ ಅಕ್ರಮ ವಲಸಿಗರನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಅಂದಹಾಗೆ, ಅರುಣಾಚಲ ಪ್ರದೇಶದ ಪಶ್ಚಿಮ ಭಾಗದ ರಾಜಧಾನಿಯೆಂದು ಯೆಚು ಲಿಯನ್ನು ಹೆಸರಿಸಲಾಗಿದ್ದು, ಈ ಪಶ್ಚಿಮ ಭಾಗವು 11 ಜಿಲ್ಲೆ ಹಾಗೂ 33 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಅರುಣಾಚಲದ ಮುಖ್ಯ ರಾಜಧಾನಿ ಇಟಾನಗರದ ಈಶಾನ್ಯ ದಿಕ್ಕಿಗೆ ಸುಮಾರು 100 ಕಿ.ಮೀ. ದೂರದಲ್ಲಿದ್ದು, 3 ಸಾವಿರ ಜನಸಂಖ್ಯೆ ಹೊಂದಿದೆ.
ಈ ಊರಿಗೆ ರಾಜಧಾನಿ ಸ್ಥಾನಮಾನ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಪೆಮಾ ಖಂಡು, “”ಇದೊಂದು ಐತಿಹಾಸಿಕ ದಿನ. ರಾಜ್ಯದ ಪಶ್ಚಿಮ ಭಾಗದ ನಿಯಂತ್ರ ಣವು ವಿಭಾಗೀಯ ಆಯುಕ್ತರ ಕೈಯ್ಯಲ್ಲಿರಲಿದ್ದು, 50 ಲಕ್ಷ ರೂ.ವರೆಗಿನ ಸರಕಾರಿ ಯೋಜನೆಗಳ ಬಗ್ಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಅವರಿಗೆ ನೀಡಲಾಗಿದೆ” ಎಂದು ತಿಳಿಸಿದರು.
ಏತನ್ಮಧ್ಯೆ, ತಮ್ಮ ಊರಿಗೆ ಬೇಸಿಗೆ ರಾಜಧಾನಿ ಸ್ಥಾನಮಾನ ಸಿಕ್ಕಿರುವ ಹಿನ್ನೆಲೆಯಲ್ಲಿ ಸಂತುಷ್ಟರಾಗಿರುವ ಜನತೆ, ವಿಭಾಗೀಯ ಆಯುಕ್ತರ ಹಾಗೂ ಉಪ ಪೊಲೀಸ್ ಮಹಾ ನಿರ್ದೇಶಕರಿಗಾಗಿ ಕಟ್ಟಲಾಗುವ ಕಚೇರಿಗಳಿಗೆ ಸ್ವಯಂಪ್ರೇರಿತವಾಗಿ ಸುಮಾರು 200 ಹೆಕ್ಟೇರ್ ಭೂಮಿಯನ್ನು ದಾನ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ. ಯಚುಲಿಗೆ ರಾಜಧಾನಿ ಸ್ಥಾನಮಾನದ ಬೇಡಿಕೆ 20 ವರ್ಷ ಹಿಂದೆಯೇ ಬಂದಿತ್ತು. ಆಗ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಈಗ ಅನುಮತಿ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.