

Team Udayavani, Jan 30, 2025, 3:13 PM IST
ಹೊಸದಿಲ್ಲಿ: ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರವು ದೆಹಲಿಗೆ ಸರಬರಾಜು ಮಾಡುವ ಯಮುನಾ ನೀರನ್ನು ಕಲುಷಿತಗೊಳಿಸುತ್ತಿದೆ ಎಂಬ ಕೇಜ್ರಿವಾಲ್ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಪುರಾವೆಗಳನ್ನು ಕೋರಿದೆ. ಈ ಆಯೋಗದ ಕ್ರಮಕ್ಕೆ ಗುರುವಾರ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ. ನಾಟಕೀಯ ಉತ್ತರವೊಂದರಲ್ಲಿ ಅವರು “ಧೈರ್ಯವಿದ್ದರೆ ಆ ನೀರನ್ನು ಕುಡಿಯಿರಿ” ಎಂದು ಅವರು ಬಿಜೆಪಿ- ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
“ನಮ್ಮಲ್ಲಿ ನಾಲ್ಕು ಬಾಟಲಿಗಳಿವೆ… ಪ್ರತಿಯೊಬ್ಬರಿಗೂ ಒಂದರಂತೆ ಕಳುಹಿಸುತ್ತೇವೆ… ದಯವಿಟ್ಟು ಕುಡಿದು ನಮಗೆ ತೋರಿಸಿ. ಆಗ ನಾವು ನಂಬುತ್ತೇವೆ” ಎಂದು ಕೇಜ್ರಿವಾಲ್ ಪ್ಲಾಸ್ಟಿಕ್ ಬಾಟಲಿಗಳನ್ನು ತೋರಿಸುತ್ತಾ ಯಮುನಾ ನೀರು ಇದೆ ಎಂದು ಹೇಳಿಕೊಂಡರು.
ಚುನಾವಣಾ ಆಯೋಗವು ಶುಕ್ರವಾರ ಬೆಳಿಗ್ಗೆ 11 ಗಂಟೆಯೊಳಗೆ “ವಾಸ್ತವಿಕ ಸಾಕ್ಷ್ಯಗಳನ್ನು” ಸಲ್ಲಿಸುವಂತೆ ಕೇಜ್ರಿವಾಲ್ ಅವರಿಗೆ ನಿರ್ದೇಶಿಸಿತ್ತು.
ಹರಿಯಾಣ ಸರ್ಕಾರವು ನದಿಗೆ ವಿಷ ಬೆರೆಸುತ್ತಿದೆ ಎಂಬ ಹೇಳಿಕೆಗೆ ಯಮುನಾ ನದಿಯಲ್ಲಿನ ಅಮೋನಿಯಾ ಮಟ್ಟವನ್ನು ಜೋಡಿಸಬೇಡಿ ಎಂದು ಚುನಾವಣಾ ಆಯೋಗ ಗುರುವಾರ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಕೇಳಿದೆ.
Delhi: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾಗುಪ್ತ ಆಯ್ಕೆ… ನಾಳೆ(ಫೆ.20) ಪ್ರಮಾಣವಚನ
ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ
Racket: ಕಾರವಾರ ನೌಕಾನೆಲೆಯ ಸೂಕ್ಷ್ಮ ಮಾಹಿತಿ ಪಾಕ್ ಗೆ ನೀಡುತ್ತಿದ್ದ ಮತ್ತೋರ್ವನ ಬಂಧನ
Delhi stampede: ರೈಲ್ವೆ ಇಲಾಖೆಗೆ ದೆಹಲಿ ಹೈ ಕೋರ್ಟ್ ತೀವ್ರ ತರಾಟೆ!
Chhaava ಎಫೆಕ್ಟ್:ಸಂಭಾಜಿ ಮಹಾರಾಜ್ ಕುರಿತು ಆಕ್ಷೇಪಾರ್ಹ ಮಾಹಿತಿ: ವಿಕಿಪಿಡಿಯಾಗೆ ನೋಟಿಸ್
You seem to have an Ad Blocker on.
To continue reading, please turn it off or whitelist Udayavani.