ಜೀವನದ ಅವಿಭಾಜ್ಯ ಅಂಗವಾಗಲಿ ಯೋಗ
ರಾಂಚಿಯ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದನೆ
Team Udayavani, Jun 22, 2019, 5:00 AM IST
ರಾಂಚಿ: ‘ಯೋಗವನ್ನು ಜೀವನದ ಅವಿಭಾಜ್ಯ ಅಂಗವೆಂದು ಪರಿಗಣಿಸಿ, ಅದನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪುವಂತೆ ಮಾಡಿ’ ಎಂದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಜಾರ್ಖಂಡ್ ರಾಜಧಾನಿ ರಾಂಚಿಯ ಪ್ರಭಾತ್ ತೇರಾ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಗರ ಪ್ರದೇಶಗಳಿಂದ ಯೋಗವನ್ನು ಗ್ರಾಮ, ಬುಡಕಟ್ಟು ಪ್ರದೇಶದವರೆಗಿನ ಜನರಿಗೆ ತಲುಪಿಸಬೇಕಾಗಿದೆ. ಯೋಗ ಎಲ್ಲ ಜಾತಿ, ಧರ್ಮ, ಲಿಂಗ, ಪ್ರಾದೇಶಿಕತೆಯನ್ನು ಮೀರಿದ್ದು. ಹಲವು ಶತಮಾನಗಳಿಂದ ಯೋಗ ಇದೆ. ಆರೋಗ್ಯಯುತ ದೇಹ, ಸ್ಥಿರವಾದ ಮನಸ್ಸು, ಏಕತೆಯ ಪ್ರತೀಕಕ್ಕೆ ಯೋಗದ ಕೊಡುಗೆ ಮಹತ್ವದ್ದಾಗಿದೆ. ಜ್ಞಾನ, ಕರ್ಮ ಮತ್ತು ಭಕ್ತಿಗೆ ಅದರ ಕೊಡುಗೆಯೂ ಮಹತ್ವದ್ದು. ಹೀಗಾಗಿ ಅದು ಜೀವನದ ಅವಿಭಾಜ್ಯ ಅಂಗವಾಗಬೇಕು’ ಎಂದು ಮೋದಿ ಹೇಳಿದ್ದಾರೆ.
ಯುವ ಸಮುದಾಯದವರು ಹೃದಯ ಸಂಬಂಧಿ ಸಮಸ್ಯೆಗೆ ತುತ್ತಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ಪ್ರಧಾನಿ, ಯೋಗ ಅದಕ್ಕೆ ಪರಿಹಾರ ನೀಡಬಲ್ಲುದು. ಹೀಗಾಗಿ ಈ ವರ್ಷ ‘ಹೃದಯಕ್ಕಾಗಿ ಯೋಗ’ ಎಂಬ ಧ್ಯೇಯ ವಾಕ್ಯ ಅಳವಡಿಸಿಕೊಳ್ಳಲಾಗಿದೆ ಎಂದಿದ್ದಾರೆ. ಹೃದಯ ಸಂಬಂಧಿ ತೊಂದರೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಅದನ್ನು ಜಾಗೃತಿ ಕಾರ್ಯಕ್ರಮಗಳ ಜತೆಗೆ ಯೋಗದಿಂದಲೂ ತಡೆ ಯಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ ಪ್ರಧಾನಿ. ವಿವಿಧ ಕಾಯಿಲೆಗಳು ಬರದಂತೆ ತಡೆಯುವಲ್ಲಿ ಯೋಗ ಕೂಡ ಪ್ರಧಾನ ಅಂಶ ಎಂದು ಪರಿಗಣಿಸುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎಂದಿದ್ದಾರೆ ಪ್ರಧಾನಿ.
ಸಂಶೋಧನೆಯ ಅಗತ್ಯವಿದೆ: ದೇಶದಲ್ಲಿ ಯೋಗದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿದೆ ಎಂದು ಹೇಳಿದ ಪ್ರಧಾನಿ, ಅದಕ್ಕೆ ಸಂಬಂಧಿಸಿದ ಮೂಲ ಸೌಲಭ್ಯಗಳನ್ನು ಹೆಚ್ಚಿನ ರೀತಿಯಲ್ಲಿ ಒದಗಿಸಬೇಕಾಗಿದೆ ಎಂದಿದ್ದಾರೆ. ಜತೆಗೆ ಸೂಕ್ತ ಮತ್ತು ಅನುಭವಿ ತರಬೇತುದಾರರ ಅಗತ್ಯ ಕೂಡ ಇದೆ. ಸುಧಾರಿತ ಸಾಫ್ಟ್ವೇರ್‌ಗಳ ಮೂಲಕ ಫೋನ್‌ಗಳು ಹೇಗೆ ಅಪ್‌ಡೇಟ್ ಆಗು ತ್ತವೆಯೋ ಅದೇ ರೀತಿ, ಯೋಗದ ಬಗ್ಗೆ ಹೆಚ್ಚಿನ ರೀತಿಯಲ್ಲಿ ಸಂಶೋಧನೆ ನಡೆದು ಮಾಹಿತಿ ನೀಡುವಂಥ ವ್ಯವಸ್ಥೆ ಇರಬೇಕು. ಶಾಂತಿ ಮತ್ತು ಸೌಹಾರ್ದತೆ ಹಾಗೂ ಯೋಗಕ್ಕೆ ನಿಕಟ ಸಂಬಂಧ ಇದೆ. ಹೀಗಾಗಿ ಜಗತ್ತಿನ ಎಲ್ಲರೂ ಅದನ್ನು ಅಭ್ಯಾಸ ಮಾಡಬೇಕು ಎಂದು ಪ್ರಧಾನಿ ಸಲಹೆ ನೀಡಿದ್ದಾರೆ. ಕಾರ್ಯಕ್ರಮ ಶುರುವಾಗುವ ಮುನ್ನ ಪ್ರಧಾನಿ ಮೋದಿ ಅವರು ಶಾಲೆಯ ಮಕ್ಕಳು ಸೇರಿದಂತೆ ಹಲವಾರು ಮಂದಿ ಯೋಗ ಅಭ್ಯಾಸ ಮಾಡುವವರ ಜತೆ ಬೆರೆತು ಮಾತುಕತೆ ನಡೆಸಿ, ಕೈಕುಲುಕಿದ್ದು ಕಂಡುಬಂತು.
ಎಲ್ಲೆಲ್ಲೂ ಯೋಗ ಸಂಭ್ರಮ
•ಚೀನದ ಖ್ಯಾತ ಶಾವೋಲಿನ್ ದೇಗುಲದಿಂದ ಹಿಡಿದು ಬ್ರಿಟನ್‌ನ ಸೈಂಟ್. ಪೌಲ್ಸ್ ಕ್ಯಾಥಡ್ರಲ್ವರೆಗೆ ವಿಶ್ವದ ಮೂಲೆ ಮೂಲೆಗಳಲ್ಲೂ ನಡೆಯಿತು ಯೋಗ ಸಂಭ್ರಮ.
•ಇಂಡೋ-ಚೀನ ಗಡಿಯಲ್ಲಿ ಇದೇ ಮೊದಲ ಬಾರಿಗೆ ಚೀನ ಸೇನೆಯ ಯೋಧರು ಹಾಗೂ ಭಾರತೀಯ ಯೋಧರಿಂದ ಜಂಟಿ ಯೋಗಾಭ್ಯಾಸ.
•ಪೋರ್ಟ್‌ಬ್ಲೇರ್‌ನಲ್ಲಿ ಅಧ್ಯಾತ್ಮ ಗುರು ಸದ್ಗುರು ನೇತೃತ್ವದಲ್ಲಿ ಅಂಡಮಾನ್-ನಿಕೋಬಾರ್ ಕಮಾಂಡ್‌ನ 500 ಸಿಬಂದಿ ಹಾಗೂ ಕುಟುಂಬ ಸದಸ್ಯರಿಂದ ಯೋಗ.
•ಜನರಲ್ಲಿ ಯೋಗವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಯೋಗ ಮಂಡಳಿ ಸ್ಥಾಪನೆ: ಗುಜರಾತ್ ಸರಕಾರ ಘೋಷಣೆ.
•ಕೇರಳದಲ್ಲಿ ಯೋಗ ದಿನಕ್ಕೆ ಸಿಎಂ ಪಿಣರಾಯಿ ಚಾಲನೆ. ಯೋಗವು ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎಂದ ಪಿಣರಾಯಿ.
•ಯೋಗವು ಪ್ರಧಾನಿ ಮೋದಿ ಅವರ ಕಾರ್ಯಕ್ರಮವಲ್ಲ. ನಿಮ್ಮ ನಿಮ್ಮ ಆರೋಗ್ಯಕ್ಕಾಗಿ ಯೋಗ ಮಾಡಿ. ಶಾಲಾ ಪಠ್ಯಕ್ರಮಗಳಲ್ಲೂ ಯೋಗವನ್ನು ಸೇರಿಸಿ ಎಂದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು.
•ಸಂಸತ್‌ನಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ನೇತೃತ್ವದಲ್ಲಿ ಯೋಗ ದಿನ ಆಚರಣೆ. 400ಕ್ಕೂ ಹೆಚ್ಚು ಮಂದಿ ಭಾಗಿ.
•ದಿಲ್ಲಿಯ ಯೋಗ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಭಾಗಿ, ರಾಷ್ಟ್ರಪತಿ ಭವನದ ಹಾಲ್ನಲ್ಲಿ ರಾಷ್ಟ್ರಪತಿ ಕೋವಿಂದ್ ಯೋಗ.
•ಹರ್ಯಾಣದ ರೋಹrಕ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಯೋಗಾಭ್ಯಾಸ. ಯೋಗವನ್ನು ಜಗತ್ತಿಗೆ ಪರಿಚಯಿಸಿದ್ದೇ ಪ್ರಧಾನಿ ಮೋದಿ ಎಂದು ಶ್ಲಾಘನೆ.
•ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಭಾಂಗಣದಲ್ಲೂ ನಡೆಯಿತು ಯೋಗಾಸನ.
ಶಾಲೆಯಲ್ಲಿ ಮಕ್ಕಳಿರುವಂತೆಯೇ, ಸಂಸತ್‌ನಲ್ಲಿ ಕೆಲವು ‘ಮಕ್ಕಳು’ (ರಾಹುಲ್) ಇದ್ದಾರೆ. ಮಕ್ಕಳಂತೆ ವರ್ತಿಸುವ ಇಂಥವರಿಗೆ ಯೋಗದಿಂದ ಸಾಕಷ್ಟು ಪ್ರಯೋಜನವಾಗಲಿದೆ.
ರಾಮ್‌ಮಾಧವ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಇಡೀ ಜಗತ್ತೇ ಶುಕ್ರವಾರ ‘ಯೋಗ’ದಲ್ಲಿ ತಲ್ಲೀನವಾಗಿದ್ದರೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸುಮಾರು 5 ಲಕ್ಷ ಸಿಬಂದಿ ಮಾತ್ರ ‘ಡೋಗಾ’ ಹಾಗೂ ‘ಹೋಗಾ’ದಲ್ಲಿ ನಿರತರಾಗಿದ್ದರು. ಇದೇನಿದು ಎಂದು ಯೋಚಿಸುತ್ತಿದ್ದೀರಾ?
ಇದು ವಿಶಿಷ್ಟ ರೀತಿಯ ಯೋಗ! ಅರುಣಾಚಲ ಪ್ರದೇಶದ ಗಡಿಯಲ್ಲಿನ ಲೋಹಿತ್‌ಪುರದಲ್ಲಿರುವ ಐಟಿಬಿಪಿ ಘಟಕವು, ತಮ್ಮ ಶ್ವಾನಗಳ ಜೊತೆಗೆ ಯೋಗ ಮಾಡಿದ್ದು, ಅದನ್ನು ‘ಡೋಗಾ'(ಡಾಗ್ ಯೋಗ) ಎಂದು ಕರೆದಿದೆ. ಇನ್ನು ತಮ್ಮ ಕುದುರೆಗಳ ಮೇಲೆ ನಡೆಸಿದ ಯೋಗಾಸನವನ್ನು ‘ಹೋಗಾ'(ಹಾರ್ಸ್ ಯೋಗ) ಎಂದು ಬಣ್ಣಿಸಿದೆ.
ಒಟ್ಟಿನಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಿಂದ ಹಿಡಿದು ಪಾಕ್ ಹಾಗೂ ಚೀನದೊಂದಿಗಿನ ಗಡಿ ಭಾಗದಂಥ ಪ್ರದೇಶಗಳವರೆಗೆ ಕೇಂದ್ರ ಸಶಸ್ತ್ರ ಪಡೆಯ ಯೋಧರು ಯೋಗ ಮಾಡಿದರು. ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್, ಐಟಿಬಿಪಿ, ಎಸ್‌ಎಸ್‌ಬಿ, ಎನ್‌ಎಸ್‌ಜಿ ಹಾಗೂ ಎನ್‌ಡಿಆರ್‌ಎಫ್ನ ಸಿಬಂದಿ ತಾವು ನಿಯೋಜನೆಯಾಗಿರುವ ಸ್ಥಳಗಳಲ್ಲೇ ‘ಯೋಗ ದಿನ’ವನ್ನು ಆಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚೆನ್ನೈ ಲೈಂಗಿಕ ಕಿರುಕುಳ ಕೇಸ್: ಎಸ್‌ಐಟಿ ತನಿಖೆಗೆ ಹೈಕೋರ್ಟ್ ಆದೇಶ
Pinarayi Vijayan: ಸಿಂಗ್ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ
Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ
ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.