ಸೌದಿಯಲ್ಲಿ ಯೋಗಕ್ಕೆ ಕ್ರೀಡೆಯ ಮಾನ್ಯತೆ
Team Udayavani, Nov 15, 2017, 6:00 AM IST
ಹೊಸದಿಲ್ಲಿ: ಯೋಗ ಈಗ ಸೌದಿ ಅರೇಬಿಯಾದ ಅಧಿಕೃತ ಕ್ರೀಡಾ ಚಟುವಟಿಕೆಗಳಲ್ಲಿ ಒಂದು ಎಂದು ಮಾನ್ಯತೆ ಪಡೆದುಕೊಂಡಿದೆ. ಈ ಮೂಲಕ ಇಸ್ಲಾಮಿಕ್ ರಾಷ್ಟ್ರದಲ್ಲಿ ಜನತೆಗೆ ಇನ್ಮುಂದೆ ಅಧಿಕೃತವಾಗಿ ಯೋಗ ಕಲಿಕೆ ಹಾಗೂ ಬೋಧನೆಗೆ ಪರವಾನಿಗೆ ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ಪ್ರಯತ್ನದ ಫಲವಾಗಿ ಇದು ಸಾಧ್ಯವಾಗಿದೆ. ಮಂಗಳವಾರ ಇಲ್ಲಿನ ಸರಕಾರ ಯೋಗಾಭ್ಯಾಸ ಹಾಗೂ ಯೋಗ ಬೋಧನೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಕ್ರೀಡಾ ಚಟುವಟಿಕೆಗಳಲ್ಲಿ ಯೋಗವೂ ಒಂದು ಎಂದು ಹೇಳಿದೆ. ವ್ಯಾಪಾರ ಮತ್ತು ಉದ್ಯಮ ಸಚಿವಾ ಲಯ ಅದಕ್ಕೆ ಅನುಮೋದನೆ ನೀಡಿದೆ.
2015ರಲ್ಲಿ ವಿಶ್ವಸಂಸ್ಥೆ ಜೂನ್ 21ರಂದು “ಯೋಗ ದಿನ’ ಆಚ ರಣೆಗೆ ಮಾನ್ಯತೆ ನೀಡಿ ಭಾರತದ ಮನವಿಯನ್ನು ಪುರಸ್ಕರಿಸಿತ್ತು. ಆ ಬಳಿಕ ಸೌದಿ ಅರೇಬಿಯಾ ಸಹಿತ ವಿಶ್ವದ ಅನೇಕ ರಾಷ್ಟ್ರಗಳಲ್ಲಿರುವ ಭಾರತೀಯ ಶಾಲೆಗಳಲ್ಲಿಯೂ ಯೋಗ ಹೇಳಿಕೊಡಲಾಗುತ್ತಿತ್ತು. ಸೌದಿ ಅರೇಬಿಯಾದಲ್ಲಿ ಕಳೆದ ಅನೇಕ ವರ್ಷಗಳಿಂದ ಯೋಗ ಪಾಠ ಮಾಡುತ್ತ ಬಂದಿರುವ ನೌಫ್ ಅಲ್ ಮರ್ವಾಯು ಅಲ್ಲಿನ ಮೊದಲ ಯೋಗ ಶಿಕ್ಷಕಿ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಯೋಗಕ್ಕೆ ಮಾನ್ಯತೆ ನೀಡಿದ ವಿಶ್ವದ ಮೊದಲ ಇಸ್ಲಾಮಿಕ್ ರಾಷ್ಟ್ರ ಎನಿಸಿಕೊಂಡಿದೆ ಸೌದಿ ಅರೇಬಿಯಾ. ಕೆಲ ದಿನಗಳ ಹಿಂದಷ್ಟೇ ಝಾರ್ಖಂಡ್ನ ಮುಸ್ಲಿಂ ಬಾಲಕಿಗೆ ಯೋಗ ಮಾಡಿದ್ದಕ್ಕಾಗಿ ಆಕೆಯ ವಿರುದ್ಧ ಫತ್ವಾ ಹೊರಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.