ಯುಪಿ ಅಸೆಂಬ್ಲಿಗೆ ಕೈಕೈ ಹಿಡಿದು ಬಂದ ಯೋಗಿ, ಆಜಂ ಖಾನ್, Watch
Team Udayavani, Dec 15, 2017, 4:23 PM IST
ಲಕ್ನೋ : ಉತ್ತರ ಪ್ರದೇಶ ವಿಧಾನಸಭೆಯ ಚಳಿಗಾಲದ ಅಧಿವೇಶನದ ನಿನ್ನೆ ಗುರುವಾರದ ಮೊದಲ ದಿನದ ಕಲಾಪ ಅತ್ಯಪರೂಪದ ಸ್ನೇಹ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ರಾಜಕೀಯ ರಂಗದಲ್ಲಿ ಹಾವು – ಮುಂಗುಸಿ ಎಂಬಂತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಮಾಜವಾದಿ ಪಕ್ಷದ ವಿವಾದಿತ ನಾಯಕ ಆಜಂ ಖಾನ್ ಕೈ ಕೈ ಹಿಡಿದುಕೊಂಡು, ಬಹುಕಾಲದ ಅಪ್ಪಟ ಸ್ನೇಹಿತರಂತೆ ವಿಧಾನಸಭೆ ಕಾರಿಡಾರ್‌ಗೆ ನಡೆದು ಬಂದರು.
ಸದಾ ಪರಸ್ಪರ ವಾಕ್ ಸಮರದಲ್ಲೇ ನಿರತರಾಗುವ ಈ ಇಬ್ಬರು ನಾಯಕರು ಕೈ ಕೈ ಹಿಡಿದುಕೊಂಡು ವಿಧಾನಸಭೆ ಕಾರಿಡಾರ್‌ಗೆ ನಡೆದುಕೊಂಡು ಬರುತ್ತಿರುವುದನ್ನು ಕಂಡು ಚಕಿತರಾದ ಮಾಧ್ಯಮ ಮಂದಿ ಒಡನೆಯೇ ಈ ನಾಯಕರಿಂದ ಅಪರೂಪದ ಪೋಸ್ ಪಡೆದುಕೊಂಡು ತಮ್ಮ ಕ್ಯಾಮೆರಾದಲ್ಲಿ “ಸಾರ್ವಕಾಲಿಕ ದಾಖಲೆ” ಗಾಗಿ ಕ್ಲಿಕ್ಕಿಸಿಸಿಕೊಂಡರು.
ಸಿಎಂ ಯೋಗಿ ಆದಿತ್ಯನಾಥ್ ಮತ್ತು ಆಜಂ ಖಾನ್ ಬಹುತೇಕ ಒಂದೇ ಹೊತ್ತಿನಲ್ಲಿ ವಿಧಾನಸಭೆಯ ಕಾರಿಡಾರ್ ಪ್ರವೇಶಿಸಿದಾಗ ಉಭಯತರು ಪರಸ್ಪರರನ್ನು ಅಭಿನಂದಿಸಿ ಕೈಕೈ ಹಿಡಿದುಕೊಂಡು ಕಾರಿಡಾರ್ ಪ್ರವೇಶಿಸಿದರು.
ಈ ಹಿಂದೆ ಯೋಗಿ ಆದಿತ್ಯನಾಥ್ ಅವರು “ನಮಾಜ್ ಮತ್ತು ಸೂರ್ಯ ನಮಸ್ಕಾರ ಒಂದೇ’ ಎಂದು ಹೇಳಿದ್ದರು; ಅದಕ್ಕೆ ಉತ್ತರವಾಗಿ ಆಜಂ ಖಾನ್, “ಹಾಗಿದ್ದರೆ ನೀವು ಸೂರ್ಯ ನಮಸ್ಕಾರಕ್ಕೆ ಬದಲಾಗಿ ನಮಾಜ್ ಮಾಡಲು ಬಯಸುವಿರಾ?’ ಎಂದು ವ್ಯಂಗ್ಯವಾಡಿದ್ದರು. ಮಾತ್ರವಲ್ಲದೆ ನಮಾಜ್ ಮಾಡುವುದಕ್ಕೆ ಆದಿತ್ಯನಾಥ್ ಅವರನ್ನು ಯಾರೂ ನಿರ್ಬಂಧಿಸುವುದಿಲ್ಲ’ ಎಂದೂ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.