ಯುಪಿ ಬಿಜೆಪಿ ಜಯಭೇರಿ
Team Udayavani, Dec 2, 2017, 6:00 AM IST
ಲಖನೌ: ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದ ಉತ್ತರ ಪ್ರದೇಶ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರು ತಮಗೆದುರಾದ ಮೊದಲ ಪರೀಕ್ಷೆಯಲ್ಲೇ ಭರ್ಜರಿ ಅಂಕ ಗಳಿಸಿದ್ದಾರೆ. ಆದರೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್ ಸ್ಥಳೀಯ ಚುನಾವಣೆಯಲ್ಲೂ ಮುಖಭಂಗ ಅನುಭವಿಸಿದೆ.
ತನ್ನ ಭದ್ರಕೋಟೆ ಅಮೇಥಿಯಲ್ಲೇ ಬಿಜೆಪಿ ಜಯ ಸಾಧಿಸಿರುವುದು ಕಾಂಗ್ರೆಸ್ ನಾಯಕರ ಬೆವರಿಳಿಸುವಂತೆ ಮಾಡಿದೆ. ಬಿಜೆಪಿಗೆ ಅತ್ಯಂತ ಪ್ರಮುಖವಾಗಿದ್ದ ಅಯೋಧ್ಯೆ ಮತ್ತು ವಾರಾಣಸಿಯಲ್ಲೂ ಬಿಜೆಪಿ ಗೆಲುವು ಸಾಧಿಸಿದ್ದು, 16 ನಗರಗಳ ಪೈಕಿ 14ರಲ್ಲಿ ಜಯ ಸಾಧಿಸಿದೆ.
ಪಕ್ಷದ ಪರ ತೀವ್ರವಾಗಿ ಪ್ರಚಾರ ನಡೆಸಿದ್ದ ಸಿಎಂ ಯೋಗಿ ಆದಿತ್ಯನಾಥ್ ಈ ಬಗ್ಗೆ ಪ್ರತಿಕ್ರಿಯಿಸಿ, “2019ರ ಚುನಾವಣೆಯಲ್ಲಿ ಬಿಜೆಪಿ ಶೇ.100ರಷ್ಟು ಜಯ ಸಾಧಿಸುವ ಮುನ್ಸೂಚನೆ ಇದಾಗಿದೆ. ಅಮೇಥಿಯೇ ಕೈತಪ್ಪಿರುವುದು ನೆಹರೂ ಕುಟುಂಬದ ಚಿಂತೆಗೆ ಕಾರಣವಾಗಿದೆ’ ಎಂದಿದ್ದಾರೆ.
ಅಯೋಧ್ಯೆಯಲ್ಲಿ ಬಿಜೆಪಿಯ ರಿಷಿಕೇಶ್ ಉಪಾಧ್ಯಾಯ 44,642 ಮತಗಳನ್ನು ಪಡೆದು, ಸಮಾಜವಾದಿ ಪಕ್ಷದ ಗುಲÒನ್ ಬಿಂದುರನ್ನು 3601 ಮತಗಳಿಂದ ಸೋಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಕ್ಷೇತ್ರ ವಾರಾಣಸಿಯಲ್ಲಿ ಬಿಜೆಪಿಯ ಮೃದುಲಾ ಜೈಸ್ವಾಲ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಶಾಲಿನಿಯವರನ್ನು 78,843 ಮತಗಳ ಭಾರಿ ಅಂತರದಿಂದ ಸೋಲಿಸಿದ್ದಾರೆ.
ಬಿಎಸ್‌ಪಿ ಚೇತರಿಕೆ:
ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ನೆಲಕಚ್ಚಿದ್ದ ಮಾಜಿ ಸಿಎಂ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಚೇತರಿಸಿಕೊಳ್ಳುತ್ತಿದ್ದು, ಮೀರತ್ ಮತ್ತು ಅಲಿಗಢದಲ್ಲಿ ಅಧಿಕಾರಕ್ಕೇರಿದೆ. ಅಲಿಗಢದಲ್ಲಿ ಮಹಮ್ಮದ್ ಫುರ್ಕಾನ್ ಮೇಯರ್ ಆಗಲಿದ್ದು, ಬಿಜೆಪಿಯ ಅಭ್ಯರ್ಥಿ ರಾಜೀವ್ ಅಗರ್ವಾಲ್ ಸೋಲು ಅನುಭವಿಸಿದ್ದಾರೆ.
ಲಖನೌಗೆ ಮೊದಲ ಮಹಿಳಾ ಮೇಯರ್:
ಲಖನೌನಲ್ಲಿ ಇದೇ ಮೊದಲ ಬಾರಿಗೆ ಮಹಿಳೆ ಮೇಯರ್ ಆಗಲಿದ್ದಾರೆ. ಮಹಿಳೆಯರಿಗೆ ಈ ಕ್ಷೇತ್ರವನ್ನು ಮೀಸಲಿಡಲಾಗಿದ್ದು, ಬಿಜೆಪಿ ಸಂಯುಕ್ತಾ ಭಾಟಿಯಾ, ಸಮಾಜವಾದಿ ಪಕ್ಷದ ಮೀರಾ ವರ್ಧನ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಯೋಗಿ ಪ್ರಚಾರ: ಉತ್ತರ ಪ್ರದೇಶದ ಸ್ಥಳೀಯ ಚುನಾವಣೆಗಳನ್ನು ಬಿಜೆಪಿ ಈ ಬಾರಿ ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಮರ್ಥ್ಯ ಪ್ರದರ್ಶನವೂ ಈ ಚುನಾವಣೆಯಾಗಿತ್ತು. ಹೀಗಾಗಿ ಅವರು ನೇರವಾಗಿ ಪ್ರಚಾರ ಕಣಕ್ಕೇ ಇಳಿದಿದ್ದರು. ಹಿಂದೆಂದೂ ಉತ್ತರಪ್ರದೇಶದಲ್ಲಿ ಸ್ಥಳೀಯ ಚುನಾವಣೆಗಳಿಗೆ ಮುಖ್ಯಮಂತ್ರಿ ಪ್ರಚಾರ ನಡೆಸಿದ ಉದಾಹರಣೆಯಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಹಲವು ಕ್ಷೇತ್ರಗಳಿಗೆ ತೆರಳಿ ಯೋಗಿ ಪ್ರಚಾರ ನಡೆಸಿದ್ದರು.
ಅಯೋಧ್ಯೆಗೆ ಮೊದಲ ಮೇಯರ್: ಇದೇ ಮೊದಲ ಬಾರಿ ಅಯೋಧ್ಯೆ, ಮಥುರಾ-ಬೃಂದಾವನಕ್ಕೆ ಸ್ಥಳೀಯ ಚುನಾವಣೆ ನಡೆಸಲು ಯೋಗಿ ಆದಿತ್ಯನಾಥ ಸರ್ಕಾರ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 22ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ರಿಷಿಕೇಶ್ ಉಪಾಧ್ಯಾಯ ಇಲ್ಲಿನ ಮೇಯರ್ ಆಗಲಿದ್ದಾರೆ. ಬಿಜೆಪಿಗೆ ಇದು ಅತ್ಯಂತ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಮಥುರಾದಲ್ಲಿ ಬಿಜೆಪಿ ಅಭ್ಯರ್ಥಿ ಲಕ್ಕಿ ಡ್ರಾ ಮೂಲಕ ಗೆದ್ದಿದ್ದಾರೆ.
ರಾಹುಲ್ ಗಾಂಧಿ ಕ್ಷೇತ್ರವೇ ಅಭದ್ರ!
ಅಮೇಥಿ ನಗರ ಪಂಚಾಯಿತಿ ಹಿಂದಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ ಈ ಸನ್ನಿವೇಶ ಈಗ ಬದಲಾಗುತ್ತಿದೆ. ಬಿಜೆಪಿಯ ಅಭ್ಯರ್ಥಿ ಚಂದ್ರಮ್ಮ ದೇವಿ 1035 ಮತಗಳಿಂದ ಕಾಂಗ್ರೆಸ್‌ಗೆ ಸೋಲುಣಿಸಿದ್ದಾರೆ. ಇನ್ನೊಂದೆಡೆ ಸ್ಪರ್ಧಿಸಿದ್ದ ಎಲ್ಲ ನಾಲ್ಕು ಕ್ಷೇತ್ರಗಳಾದ ತಿಲೋಯಿ, ಜಗದೀಶ್‌ಪುರ, ಗೌರಿಗಂಜ್ ಮತ್ತು ಸಲೋನ್‌ನಲ್ಲೂ ಕಾಂಗ್ರೆಸ್ ಸೋಲುಂಡಿದೆ. ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಅಮೇಥಿಯಲ್ಲಿ ಉಂಟಾದ ಅಭಿವೃದ್ಧಿ ಕಾರ್ಯದ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಹೆಚ್ಚು ಪ್ರಚಾರ ನಡೆಸಿದ್ದರು ಎನ್ನಲಾಗಿದೆ.
ಯೋಗಿ ಕ್ಷೇತ್ರದಲ್ಲೇ ಸೋಲು!
ಇಡೀ ರಾಜ್ಯದಲ್ಲಿ ಸ್ಥಳೀಯ ಚುನಾವಣೆಯನ್ನು ಗೆದ್ದ ಸಿಎಂ ಯೋಗಿ ಆದಿತ್ಯನಾಥ ತಮ್ಮ ವಾರ್ಡ್‌ನಲ್ಲೇ ಸೋಲುಂಡಿದ್ದಾರೆ. ಗೋರಖ್‌ಪುರದ ವಾರ್ಡ್ ನಂ.68ರಲ್ಲಿ ಬಿಜೆಪಿಯ ಮಾಯಾ ತ್ರಿಪಾಠಿಯವರನ್ನು ಸ್ವತಂತ್ರ ಮುಸ್ಲಿಂ ಅಭ್ಯರ್ಥಿ ನಾದಿರಾ ಖಾತೂನ್ ಸೋಲಿಸಿದ್ದಾರೆ. ಇದೇ ವಾರ್ಡ್‌ನ ವ್ಯಾಪ್ತಿಯಲ್ಲಿರುವ ಜನಪ್ರಿಯ ಗೋರಖನಾಥ ದೇಗುಲದಲ್ಲಿ ಆದಿತ್ಯನಾಥ್ ಮಹಾಂತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.