ಸೇನೆಗಿಂತಲೂ ಹೆಚ್ಚು ಪಟಾಕಿ ಇಟ್ಟಿದ್ದೀರಾ?: ಸುಪ್ರೀಂ ಪ್ರಶ್ನೆ
Team Udayavani, Aug 29, 2017, 6:30 AM IST
ಹೊಸದಿಲ್ಲಿ: “ನೀವು ಸೇನೆಗಿಂತಲೂ ಹೆಚ್ಚು ಪಟಾಕಿ ಇಟ್ಟು ಕೊಂಡಿದ್ದೀರಿ. ಇದರಿಂದ ಇಡೀ ದೇಶವನ್ನೇ ಸುಡಬಹುದು.’ ಈ ರೀತಿ ಸುಪ್ರೀಂ ಕೋರ್ಟ್ ಟೀಕಾತ್ಮಕ ತಪರಾಕಿ ಕೊಟ್ಟಿದ್ದು ದಿಲ್ಲಿಯ ಪಟಾಕಿ ಮಾರಾಟಗಾರರಿಗೆ.
ರಾಜಧಾನಿಯಲ್ಲಿ ಪಟಾಕಿಗಳಿಂದ ತೀವ್ರ ಮಾಲಿನ್ಯವಾಗುತ್ತಿದೆ. ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಹೀಗೆ ಹೇಳಿದೆ. ವಿಚಾರಣೆ ವೇಳೆ ವಕೀಲರು ದಿಲ್ಲಿ ಒಂದರಲ್ಲೇ 50 ಲಕ್ಷ ಕೇಜಿಯಷ್ಟು ಪಟಾಕಿ ದಾಸ್ತಾನು ಇಡಲಾಗಿದೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ನ ನ್ಯಾ| ಮದನ್ ಬಿ ಲೋಕೂರ್, ದೀಪಕ್ ಗುಪ್ತಾ ಅವರಿದ್ದ ನ್ಯಾಯಪೀಠ,
“ದೀಪಾವಳಿ 5 ದಿನಗಳ ಕಾಲ ಆಚರಿಸಲಾಗುತ್ತದೆ. ಅಂದರೆ ದಿನಕ್ಕೆ 10 ಲಕ್ಷ ಕೇಜಿ ಸುಟ್ಟಂತಾಗುತ್ತದೆ’ ಎಂದು ಆತಂಕ ವ್ಯಕ್ತ ಪಡಿಸಿತು. ಜತೆಗೆ ಚೀನ ಪಟಾಕಿ ನಿಷೇಧಕ್ಕೆ ಕೈಗೊಂಡ ಕ್ರಮಗಳೇನು ಎಂದು ಕೇಂದ್ರವನ್ನು ಪ್ರಶ್ನಿಸಿತು. ಚೀನ ಪಟಾಕಿಗಳಲ್ಲಿ ನಿಷೇಧಿತ ವಸ್ತುಗಳು ಅತಿಯಾಗಿರುತ್ತವೆ. ಇದರ ನಿಯಂತ್ರಣಕ್ಕೆ ಏನು ಮಾಡಿದ್ದೀರಿ ಎಂದೂ ಕೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್ಶೂಟರ್ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.