ಯಾಕೆ ಇಂದು ಪ್ಲಾಸ್ಟಿಕ್ ಬ್ಯಾನ್ ಆಗಿಲ್ಲ ಗೊತ್ತಾ…
ಪ್ಲಾಸ್ಟಿಕ ನಿಷೇಧದಿಂದ ಸರಕಾರ ಹಿಂದೆ ಸರಿದಿದ್ಯಾಕೆ ಗೊತ್ತಾ
Team Udayavani, Oct 2, 2019, 10:02 PM IST
ಹೊಸದಿಲ್ಲಿ: ಈಗಾಗಲೇ ಘೋಷಿಸಲಾದಂತೆ ಅಕ್ಟೋಬರ್ 1ರ ಬಳಿಕ ಗಾಂಧೀಜೀ ಅವರ 150ನೇ ಜನ್ಮ ದಿನಾಚರಣೆ ದಿನ ದೇಶಾದ್ಯಂತ ಪ್ಲಾಸ್ಟಿಕ್ ಬ್ಯಾನ್ ಗೊಳ್ಳುತ್ತವೆ ಎಂಬುದನ್ನು ಅಭಿಯಾನವಾಗಿ ಮಾರ್ಪಡಿಸಲಾಗಿದೆ. ಇದಕ್ಕೆ ಪೂರಕವಾಗಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿಯೂ ಪ್ರಧಾನ ಮಂತ್ರಿಗಳು ಪ್ಲಾಸ್ಟಿಕ್ ಮುಕ್ತ ಭಾರತದ ಸಂಕಲ್ಪವನ್ನು ಪುನರುಚ್ಚರಿಸಿದ್ದರು. ಬಳಿಕ ಮನ್ ಕೀ ಬಾತ್ ಕಾರ್ಯಕ್ರಮದಲ್ಲೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿಗಳು ಜನರಲ್ಲಿ ಕೇಳಿಕೊಂಡಿದ್ದರು. ಆದರೆ ಇಂದು ಅಧಿಕೃತವಾಗಿ ದೇಶಾದ್ಯಂತ ಪ್ಲಾಸ್ಟಿಕ್ ಬ್ಯಾನ್ಗೊಂಡಿಲ್ಲ. ಇದಕ್ಕೆ ಕಾರಣವೂ ಇದೆ.
ಈಗಾಗಲೇ ದೇಶ ಆರ್ಥಿಕ ಸಂಕಷ್ಟದಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮುಖ್ಯವಾಗಿ ಕೈಗಾರಿಕ ವಲಯಗಳು ತೀವ್ರ ಹಾನಿಗೊಳಗಾಗಿದೆ. ಇನ್ನು ಒಂದು ವೇಳೆ ಪ್ಲಾಸ್ಟಿಕ್ ಬ್ಯಾನ್ ಮಾಡಿ ಮತ್ತಷ್ಟು ಸಮಸ್ಯೆಯನ್ನು ಸರಕಾರ ಮೈಮೇಲೆ ಎಳೆದುಕೊಳ್ಳಲು ಇಷ್ಟವಿಲ್ಲದೇ ಇರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಈಗಾಗಲೇ ಪ್ಲಾಸ್ಟಿಕ್ ನಿಷೇಧ ಕುರಿತಾದ ಸ್ಪಷ್ಟವಾದ ಕಾನೂನು ರೂಪುಗೊಳ್ಳದೇ ಇರುವುದರಿಂದ ಸರಕಾರ ಈ ಕ್ರಮ ಕೈಗೊಂಡಿದೆ.
ಉದ್ಯೋಗ ಕಡಿತದ ಭೀತಿ
ಪ್ಲಾಸ್ಟಿಕ್ ಸಹಾಯದಿಂದ ಈಗಾಗಲೇ ಹಲವಾರು ವಸ್ತುಗಳನ್ನು ಉತ್ಪಾದಿಸಲಾಗುತ್ತಿದ್ದು, ಅಧ್ಯಯನವೊಂದರ ಪ್ರಕಾರ ಸುಮಾರು 50 ಸಾವಿರ ಕಾರ್ಖಾನೆಗಳು ಪ್ಲಾಸ್ಟಿಕ್ ಉತ್ಪಾದಿಸುತ್ತವೆ. ಇದರಲ್ಲಿ ಸುಮಾರು 40 ರಿಂದ 50 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈಗ ಒಂದು ವೇಳೆ ಸರಕಾರ ಪ್ಲಾಸ್ಟಿಕ್ ಬ್ಯಾನ್ ಮಾಡಿದರೆ ಅದು ಭಾರೀ ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನು ಕಡಿತಗೊಳಿಸಲಿದೆ. ಮಾತ್ರವಲ್ಲದೆ ಕೈಗಾರಿಗೆಗಳು ನೆಲ ಕಚ್ಚಲಿವೆ. ಇನ್ನು ಸಿಂಗಲ್ ಯೂಸ್ ಪ್ಲಾಸ್ಟಿಕ್ ತಯಾರಿಸುವ 10 ಸಾವಿರ ಕಾರ್ಖಾನೆಗಳು ಇದ್ದು, ಅವುಗಳಲ್ಲಿ 5 ಲಕ್ಷಜನರು ಕೆಲಸ ಮಾಡುತ್ತಿದ್ದಾರೆ. ಈ ಕಾರಣದಿಂದ ಸದ್ಯದ ಮಟ್ಟಿಗೆ ಪ್ರಮಾಣ ಕಡಿತಗೊಳಿಸಲಷ್ಟೇ ಸರಕಾರ ತೀರ್ಮಾನಿಸಿದೆ.
ಪರ್ಯಾಯ ಏನು?
ಈಗಾಗಲೇ ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ನಿರವಾಗಿರುವ ಸಂಸ್ಥೆಗಳನ್ನು ಗುರುತಿಸಿ, ಪ್ಲಾಸ್ಟಿಕ್ ಬದಲು ಪರ್ಯಾಯ ವಸ್ತುವನ್ನು ಉತ್ಪಾದಿಸುವತ್ತ ಅವುಗಳನ್ನು ಪರಿವರ್ತಿಸಬೇಕಿದೆ. ಇವುಗಳಿಗೆ ಪರ್ಯಾಯವಾಗಿ ಕೈಗೊಳ್ಳಬಹುದಾದ ಕ್ರಮದ ಕುರಿತು ಸರಕಾರ ಚಿಂತಿಸುತ್ತಿದೆ.
ಸಿಂಗಲ್ ಯೂಸ್ ಪ್ಲಾಸ್ಟಿಕ್ ಕುರಿತು ವ್ಯಖ್ಯಾನವಿಲ್ಲ
ಪ್ಲಾಸ್ಟಿಕ್ ನಿಜೂಕ್ಕೂ ಬ್ಯಾನ್ ಆಗುವುದೇ ಆದರೆ ಆದರೆ ಬ್ಯಾನ್ ಆಗಲಿದೆ ಎಂಬುದು ಅಂತಿಮವಾಗಿರಲಿಲ್ಲ. ಸಿಂಗಲ್ ಪ್ಲಾಸ್ಟಿಕ್ ಗಳ ಸಾಲಿಗೆ ಯಾವೆಲ್ಲಾ ವಸ್ತುಗಳು ಸೇರುತ್ತವೆ? ಅವುಗಳಿಗೆ ಪರ್ಯಾಯವಾಗಿ ಯಾವುದನ್ನು ಬಳಸಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ. ಒಂದು ವೇಳೆ ಸಿಂಗಲ್ ಯೂಸ್ ಪ್ಲಾಸ್ಟಿಕ್ ಆದರೆ, ಈಗಾಗಲೇ ನಮ್ಮ ನಡುವೆ ಇರುವ ಪ್ಲಾಸ್ಟಿಕ್ ಅನ್ನು ಏನು ಮಾಡಬೇಕು? ಪೆನ್ನು, ಬ್ಯಾಗು ಸೇರಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುತ್ತಿರುವ ಪ್ಲಾಸ್ಟಿಕ್ ಅನ್ನು ಏನು ಮಾಡುವುದು ಮೊದಲಾದ ಗೊಂದಲಗಳು ಅಂತಿಮ ಕ್ಷಣದವರೆಗೆ ಗೊಂದಲವಾಗಿಯೇ ಉಳಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.