ಸೆಪ್ಟೆಂಬರ್ ವರೆಗೂ ಅವಧಿ ಮೀರಿದ ಡ್ರೈವಿಂಗ್ ಲೈಸೆನ್ಸ್, ಆರ್ ಸಿ ಬಳಸಬಹುದು!
Team Udayavani, Jul 1, 2021, 8:29 AM IST
ಹೊಸದಿಲ್ಲಿ: ಕೋವಿಡ್ -19 ಸೋಂಕಿನ ಕಾರಣದಿಂದ ನಿಮ್ಮ ಡ್ರೈವಿಂಗ್ ಲೈಸನ್ಸ್, ಆರ್ ಸಿ ನವೀಕರಣ ಮಾಡಲು ಪರದಾಡುತ್ತಿದ್ದೀರಾ? ಹಾಗಾದರ ಅಂತಹವರಿಗೆ ಕೇಂದ್ರ ಸರಕಾರ ಉತ್ತಮ ಸುದ್ದಿಯೊಂದನ್ನು ನೀಡಿದೆ.
ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮತ್ತು ಇತರ ಪರವಾನಗಿಗಳಂತಹ ದಾಖಲೆಗಳ ಸಿಂಧುತ್ವ (ವ್ಯಾಲಿಡಿಟಿ) ವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಸರ್ಕಾರ ಈ ಮೊದಲು ಜೂನ್ 30 ರವರೆಗೆ ಗಡುವು ನೀಡಿತ್ತು. ಇದನ್ನು ಈಗ ಸೆ.30ರವರೆಗೆ ವಿಸ್ತರಿಸಲಾಗಿದೆ.
2021 ಫೆಬ್ರವರಿ 1ರ ಬಳಿಕ ಅವಧಿ ಮುಗಿದ ದಾಖಲೆಗಳು, ಸೆ. 30ರೊಳಗೆ ಅವಧಿ ಮುಕ್ತಾಯವಾದ ದಾಖಲೆಗಳು ಅಥವಾ ಲಾಕ್ ಡೌನ್ ಕಾರಣದಿಂದ ನವೀಕರಣ ಮಾಡಲಾಗದ ದಾಖಲೆಗಳು 2021ರ ಸೆಪ್ಟೆಂಬರ್ 30ರವರೆಗೆ ಉಪಯೋಗಿಸಬಹುದಾಗಿದೆ.
ಕೋವಿಡ್ ನಂತಹ ಕಠಿಣ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಫೆ.1ರಿಂದ ಸೆ.30ರವರೆಗೆ ಅವಧಿ ಮುಗಿದ ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ ದಾಖಲೆಗಳ ಸಿಂಧುತ್ವವನ್ನು ಸೆ.30ರವರೆಗೂ ವಿಸ್ತರಣೆ ಮಾಡಲಾಗುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ಎರಡನೇ ಅಲೆ : ಜು.30ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿಷೇಧ ವಿಸ್ತರಣೆ
ಈ ಹಿಂದೆ ಫೆ.1ರಿಂದ ಜೂ.30ರವರೆಗಿನ ದಾಖಲೆಗಳ ಮಾನ್ಯತೆಯನ್ನು ನೀಡಿ ಪ್ರಕಟಣೆ ನೀಡಲಾಗಿತ್ತು. ಇದೀಗ ಇದರ ಗಡುವು ಅವಧಿಯನ್ನು ಮತ್ತೆ ಎರಡು ತಿಂಗಳಿಗೆ ಸಚಿವಾಲಯವು ವಿಸ್ತರಣೆ ಮಾಡಿದೆ.
ಲಾಕ್ ಡೌನ್ ಕಾರಣದಿಂದ ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು 1989 ಕ್ಕೆ ಸಂಬಂಧಿಸಿದ ದಾಖಲೆಗಳ ನವೀಕರಣದಲ್ಲಿ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸೂಚನೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಸರ್ಕಾರಿ ಸಾರಿಗೆ ಕಚೇರಿಗಳ ಮುಂದೆ ಉದ್ದದ ಸರತಿ ಸಾಲುಗಳಲ್ಲಿ ಈ ಸಮಯದಲ್ಲಿ ಜನರು ನಿಲ್ಲುವುದನ್ನು ತಪ್ಪಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಅಧಿಸೂಚನೆ ಹೊರಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.