ಬದುಕ ಬಾಗಿಲ ತೆರೆದ ಎಟಿಎಸ್
Team Udayavani, Feb 11, 2019, 12:30 AM IST
ಮುಂಬೈ: ಎರಡು ವರ್ಷಗಳ ಹಿಂದೆ ಕೊಂಚ ಯಾಮಾರಿದ್ದರೆ, ಐಸಿಸ್ ಭಯೋತ್ಪಾದಕ ಸಂಘಟನೆಯ ಕಬಂಧ ಬಾಹುಗಳಲ್ಲಿ ಸಿಲುಕಿ ನಲುಗಿ ಹೋಗಬೇಕಿತ್ತು ಈ ಯುವಕನ ಬಾಳು. ಆದರೆ, ಈಗ ಅದೇ ಹುಡುಗ ಮಹಾರಾಷ್ಟ್ರ ಬೀಡ್ ಜಿಲ್ಲೆಯಲ್ಲಿ ಸ್ವಂತ ಉದ್ಯಮ ಸ್ಥಾಪಿಸಿ ಸಂತೃಪ್ತ ಜೀವನ ನಡೆಸುತ್ತಿದ್ದಾನೆ. ಇದು ಒಬ್ಬ ಯುವಕನ ಕತೆಯಲ್ಲ; ಮಹಾರಾಷ್ಟ್ರದಲ್ಲಿ ದಾರಿ ತಪ್ಪಿದ್ದ ಇಂಥ ನೂರಾರು ಯುವಕರು ಈಗ ಹೊಸ ಬದುಕು ಕಂಡುಕೊಂಡಿದ್ದಾರೆ.ಇದೆಲ್ಲವೂ ಮಹಾರಾಷ್ಟ್ರ ಉಗ್ರ ನಿಗ್ರಹ ದಳ(ಎಟಿಎಸ್)ದ ಸತತ ಪ್ರಯತ್ನದ ಫಲ.
35 ವರ್ಷದ ಜಮೀಲ್ ಅನ್ಸಾರಿ (ಹೆಸರು ಬದಲಿಸಲಾಗಿದೆ) 2016ರಲ್ಲಿ ಉದ್ಯೋಗ ಕಳೆದುಕೊಂಡ ಬಳಿಕ, ಹೆಚ್ಚಿನ ಸಮಯವನ್ನು ಆನ್‌ಲೈನ್‌ನಲ್ಲಿ ಕಳೆಯುತ್ತಿದ್ದರು. ಅಲ್ಲಿ ಐಸಿಸ್ ಪರ ಮೃದುಧೋರಣೆ ಹೊಂದಿದವರ ಸಂಪರ್ಕ ಹೊಂದುವ ಮೂಲಕ ಅನ್ಸಾರಿ ಕೂಡ ತೀವ್ರಗಾಮಿಯಾಗಿ ಬದಲಾಗತೊಡಗಿದರು. ಇವರ ಆನ್‌ಲೈನ್ ಚಟುವಟಿಕೆ ಮೇಲೆ ನಿಗಾ ಇಟ್ಟಿದ್ದ ಎಟಿಎಸ್‌ಗೆ, ಅನ್ಸಾರಿ ಐಸಿಸ್‌ನ ದಾಳಕ್ಕೆ ಬಲಿಯಾಗುತ್ತಿದ್ದಾರೆ ಎಂಬ ಶಂಕೆ ಮೂಡಿತು. ಕೂಡಲೇ ಆತನನ್ನು ಸಂಪರ್ಕಿಸಿ, ಆಪ್ತ ಸಮಾಲೋಚನೆ ನೀಡಿದರು. ಹೀಗಾಗಿ, ಸಾವಿರಾರು ಕಿಲೋ ಮೀಟರ್ ದೂರದ ಇರಾಕ್‌ನಲ್ಲಿ ಐಸಿಸ್ ಎಂಬ ರಕ್ತಪಿಪಾಸುಗಳ ಸಮೂಹಕ್ಕೆ ಸೇರಿ, ಕುಟುಂಬಕ್ಕೂ, ದೇಶಕ್ಕೂ ಕುಖ್ಯಾತಿ ತರುವ ಹಂತದಲ್ಲಿದ್ದ ಯುವಕ ಈಗ ಮೊಬೈಲ್ ಫೋನ್ ರಿಪೇರಿ ಮಾಡುತ್ತಾ, ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.
ನಿರುದ್ಯೋಗವೇ ಪ್ರಮುಖ ಕಾರಣ: ನಿರುದ್ಯೋಗಿಗಳಾಗಿರುವ, ಉದ್ಯೋಗ ಕಳೆದುಕೊಂಡು ಆನ್‌ಲೈನ್‌ನಲ್ಲಿ ಜಾಲಾಡುತ್ತಿರುವವರೇ ಉಗ್ರರ ಟಾರ್ಗೆಟ್ ಆಗಿರುತ್ತಾರೆ. ಇಂಥವರನ್ನು ಆನ್‌ಲೈನ್ ಮೂಲಕ ತೀವ್ರಗಾಮಿಗಳಾಗಿ ಪರಿವರ್ತಿಸಿ, ತನ್ನ ಟ್ರ್ಯಾಪ್‌ಗೆ ಬೀಳಿಸುವ ತಂತ್ರ ಐಸಿಸ್‌ನದ್ದು.
ಕಂಡುಕೊಂಡ ಪರಿಹಾರವೇನು?: ಐಸಿಸ್ ಪ್ರಭಾವಕ್ಕೊಳಗಾದ ಯುವಕರನ್ನು ಮತ್ತೆ ಸಹಜ ಜೀವನಕ್ಕೆ ಕರೆತರುವುದು ಸವಾಲಿನ ಕೆಲಸವೇ ಆಗಿತ್ತು. ಧೃತಿಗೆಡದ ಅಧಿಕಾರಿಗಳು, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಡಿ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಗಳನ್ನು ಸಂಪರ್ಕಿಸಿ, ಈ ಯುವಕರಿಗೆ ಉದ್ಯೋಗದ ತರಬೇತಿ ನೀಡಿದರು. 2 ವರ್ಷಗಳಲ್ಲಿ 400 ಯುವಕರನ್ನು ಪತ್ತೆಹಚ್ಚಿ, ಉದ್ಯೋಗ ತರಬೇತಿ ನೀಡಲಾಗಿದೆ ಎನ್ನುತ್ತಾರೆ ಎಟಿಎಸ್ ಮುಖ್ಯಸ್ಥ ಅತುಲ್‌ಚಂದ್ರ ಕುಲಕರ್ಣಿ.
ಬ್ಯಾಂಕ್ ಜತೆ ಮಾತುಕತೆ
ಎಟಿಎಸ್ ಅಧಿಕಾರಿಗಳೇ ಸಿಂಡಿಕೇಟ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದ ಜೊತೆಗೆ ಮಾತುಕತೆ ನಡೆಸಿ, ಇಂಥ ಯುವಕರಿಗೆ ಸಾಲ ಸೌಲಭ್ಯ ಒದಗಿಸುವಂತೆ ಕೇಳಿಕೊಂಡಿದೆ. ಅದಕ್ಕೆ ಬ್ಯಾಂಕುಗಳು ಒಪ್ಪಿದ್ದು, ತರಬೇತಿ ಪಡೆದು ಸಿದ್ಧರಾದ ಯುವಕರಿಗೆ ಸಾಲ ನೀಡಲು ಮುಂದೆ ಬಂದಿವೆ. ಈಗಾಗಲೇ 270 ಯುವಕರಿಗೆ ಮೊಬೈಲ್ ಫೋನ್ ರಿಪೇರಿ ತರಬೇತಿ ನೀಡಲಾಗಿದೆ. ಇನ್ನೊಂದು ತಂಡವು ಎಲೆಕ್ಟ್ರಿಕ್ ವೈರ್ ಫಿಟ್ಟಿಂಗ್ ತರಬೇತಿ ಪಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.