ಸಿದ್ಧ ಮಾಂಸದಲ್ಲಿ ಇರುತ್ತೆ ಹಾನಿಕಾರಕ ಬ್ಯಾಕ್ಟೀರಿಯಾ!
Team Udayavani, Aug 22, 2017, 8:45 AM IST
ಮುಂಬಯಿ: ನೀವು ಮನೆಯಲ್ಲಿ ರೆಡಿ ಟು ಕುಕ್ (ಅಡುಗೆ ಮಾಡಲು ಸಿದ್ಧವಾಗಿರುವ) ಚಿಕನ್ ಅಥವಾ ಗರಿಷ್ಠ ಘನೀಭವಿಸಿದ (ಫ್ರೀಜರ್) ಪರಿಸ್ಥಿತಿಯಲ್ಲಿ ಇರಿಸಿದ ಕಚ್ಚಾ ಮಾಂಸ ಬಳಸುತ್ತೀರಾ? ಹಾಗಾದರೆ ಇನ್ನು ಮುಂದೆ ಇಂಥ ಉತ್ಪನ್ನ ಬಳಸುವಾಗ ಎಚ್ಚರದಿಂದಿರಿ!
ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ರೆಡಿ ಟು ಕುಕ್ ಚಿಕನ್ ಮತ್ತು ಕಚ್ಚಾ ಮಾಂಸದ ಉತ್ಪನ್ನಗಳು ಸಾಲ್ಮೊನೆಲ್ಲಾ ಎಂಬ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಒಳಗೊಂಡಿರುತ್ತವೆ. ಈ ಬ್ಯಾಕ್ಟೀರಿಯಾ ಆಹಾರವನ್ನು ವಿಷವಾಗಿಸುವ ಜೊತೆಗೆ ಹಲವು ರೀತಿಯ ಅನಾರೋಗ್ಯಗಳನ್ನು ತಂದೊಡ್ಡಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಈ ಕುರಿತು ಅಧ್ಯಯನ ನಡೆಸಿರುವ ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್, ಮುಂಬಯಿನ ವಿವಿಧ ಭಾಗಗಳಲ್ಲಿರುವ ಸೂಪರ್ ಮಾರ್ಕೆಟ್ ಮತ್ತು ಡಿಪಾರ್ಟ್ಮೆಂಟಲ್ ಸ್ಟೋರ್ಗಳಿಂದ ರೆಡಿ ಟು ಕುಕ್ ಚಿಕನ್ ಹಾಗೂ ಫ್ರೀಜರ್ನಲ್ಲಿ ಇರಿಸಿದ ಕಚ್ಚಾ ಮಾಂಸದ 87 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ ಈ ಉತ್ಪನ್ನಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಅಡಗಿರುವುದು ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.