ಝಾಕಿರ್ ನಾೖಕ್‌ಗೆ ಅನಾಮಿಕರಿಂದ ಹಣ!
Team Udayavani, May 27, 2019, 6:10 AM IST
ಹೊಸದಿಲ್ಲಿ: ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾೖಕ್‌ಗೆ ವಿವಿಧ ದೇಶಗಳಿಂದ ಅನಾಮಿಕ ವ್ಯಕ್ತಿಗಳು ಭಾರಿ ಪ್ರಮಾಣದ ಹಣವನ್ನು ನೀಡಿದ್ದಾರೆ ಎಂಬುದು ಜಾರಿ ನಿರ್ದೇಶನಾಲಯದ ತನಿಖೆಯ ವೇಳೆ ತಿಳಿದುಬಂದಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಬಹೆÅàನ್, ಕುವೈತ್, ಓಮನ್ ಮತ್ತು ಮಲೇಷ್ಯಾ ಸಹಿತ ಹಲವೆಡೆಯಿಂದ ಕೋಟ್ಯಂತರ ರೂ. ಬಂದಿದೆ. ಝಾಕಿರ್ ಇಸ್ಲಾಮಿಕ್ ರೀಸರ್ಚ್ ಫೌಂಡೇಶನ್ ಎಂಬ ಸಂಸ್ಥೆ ನಡೆಸುತ್ತಿದ್ದು, ಈ ಸಂಸ್ಥೆಯ ಬ್ಯಾಂಕ್ ಖಾತೆಗೆ ಮತ್ತು ನಾಯ್ಕ ಬ್ಯಾಂಕ್ ಖಾತೆಗೆ ದೇಣಿಗೆ ರೂಪದಲ್ಲಿ ಹಣ ನೀಡಲಾಗಿದೆ. ಹಲವು ಬ್ಯಾಂಕ್ ಖಾತೆಗಳನ್ನು ಸಂಸ್ಥೆ ಹಾಗೂ ನಾೖಕ್ ಹೊಂದಿದ್ದಾರೆ.
ನೇರವಾಗಿ ಬ್ಯಾಂಕ್ ಖಾತೆಗಳಿಗೆ ಬಂದ ಹಣವನ್ನು ಆಪೆ¤àಷ್ಟರಿಂದ ಬಂದ ಹಣ ಎಂದಷ್ಟೇ ನಮೂದಿಸಲಾಗಿದೆ. ಆದರೆ ನಗದು ರೂಪದಲ್ಲಿ ದೇಣಿಗೆ ನೀಡಿದವರು ಹೆಸರುಗಳನ್ನು ನಮೂದಿಸಲಾಗಿದ್ದು, ಅವರ ಇತರ ವಿವರಗಳು ಇಲ್ಲ. 2003-04 ರಿಂದ 2016-17ರ ವರೆಗೆ ಸ್ವೀಕರಿಸಿದ ಒಟ್ಟು 64. 86 ಕೋಟಿ ರೂ. ಆಗಿದ್ದು, ಹೆಚ್ಚಿನ ಮೊತ್ತವನ್ನು ಶಾಂತಿ ಸಮ್ಮೇಳನ ನಡೆಸಲು, ಸಲಕರಣೆಗಳನ್ನು ಖರೀದಿಸಲು, ಸಂಬಳ ಪಾವತಿಗೆ ವಿನಿಯೋಗಿಸಲಾಗಿದೆ.
ನಾೖಕ್ ಕೋಮು ಗಲಭೆಗೆ ಪ್ರಚೋದಿಸುತ್ತಿದ್ದರು ಮತ್ತು ದೇಶ ವಿರೋಧಿ ಕೃತ್ಯಗಳನ್ನು ಬೆಂಬಲಿಸುತಿದ್ದರು ಎಂದೂ ಇಡಿ ವರದಿಯಲ್ಲಿ ವಿವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.