ಸೊನ್ನೆ, 3-4ನೇ ಶತಮಾನದ್ದು!
Team Udayavani, Sep 15, 2017, 7:30 AM IST
ನವದೆಹಲಿ: ಸೊನ್ನೆ (0)ಇಲ್ಲದೆ ಗಣಿತವೇ ಇಲ್ಲ. ಎಲ್ಲ ಲೆಕ್ಕಗಳ ಅಪ್ಪ ಎಂದು ಕರೆಸಿಕೊಳ್ಳುವ ಸೊನ್ನೆಯನ್ನು ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದ್ದು ಎಂದು ಭಾರತೀಯರು ಹೆಮ್ಮೆಪಡುತ್ತಾರೆ. ಇದನ್ನು ಇಡೀ ಜಗತ್ತೂ ಒಪ್ಪಿಕೊಂಡಾಗಿದೆ. ಆದರೆ ಈಗ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಂಶೋಧನೆ, ಹೊಸ ವಿಷಯವೊಂದನ್ನು ಬೆಳಕಿಗೆ ತಂದಿದೆ!
ಇದೀಗ ಸೊನ್ನೆಯ ಆವಿಷ್ಕಾರದ ಕಾಲಘಟ್ಟದ ಬಗ್ಗೆ ಹೊಸ ಜಿಜ್ಞಾಸೆ ಮೂಡಿದೆ. ಆದರೆ ಈ ಸೊನ್ನೆ ಮೂರು ಅಥವಾ ನಾಲ್ಕನೇ ಶತಮಾನದ ಆದಿಯಲ್ಲಿ ಭಾರತೀಯ ಗ್ರಂಥವೊಂದರಲ್ಲಿ ಬಳಕೆಯಾಗಿತ್ತು ಎಂದು ಆಕ್ಸ್‌ಫರ್ಡ್ ವಿವಿ ಹೇಳಿದೆ. ಅದರೆ ಪ್ರಸ್ತುತ ಎಲ್ಲರೂ ಇಷ್ಟುದಿನ ಹೇಳುತ್ತಿದ್ದ ಕಾಲಕ್ಕಿಂತ ಐದು ಶತಮಾನಗಳಷ್ಟು ಹಿಂದೆಯೇ ಅಂದರೆ, ಹಿಂದೆಯೇ ಸೊನ್ನೆಯನ್ನು ಭಾರತೀಯರು ಆವಿಷ್ಕರಿಸಿದ್ದರು ಎಂದು ವಿವಿಯು ಸಾಕ್ಷಿಸಹಿತ ಹೇಳಿದೆ. ವಿವಿ ನಡೆಸಿದ ಕಾರ್ಬನ್ ಡೇಟಿಂಗ್ ಪರೀಕ್ಷೆಯಲ್ಲಿ ಈ ಅಂಶ ತಿಳಿದುಬಂದಿದೆ.
ವಿವಿ ಹೇಳಿರುವ ಪ್ರಕಾರ 1881ರಲ್ಲಿ ಪೇಶಾವರ ಸಮೀಪದ ಬಕಾÏಲಿಯಲ್ಲಿ ದೊರೆ ತಿದ್ದ ಮನುಸ್ಮತಿ ಪುಸ್ತಕದಲ್ಲಿ ನೂರಾರು ಬಾರಿ ಸೊನ್ನೆಯನ್ನು ಬಳಸಲಾಗಿದೆ. ಅಲ್ಲದೆ 3 ಅಥವಾ 4ನೇ ಶತಮಾನದ ಅವಧಿಯಲ್ಲೇ ಭಾರತದಲ್ಲಿ ಸೊನ್ನೆ ಬಳಕೆಯಲ್ಲಿತ್ತು ಎಂಬುದು ಈ ಕೃತಿಯಿಂದ ತಿಳಿದುಬಂದಿದೆ. 9ನೇ ಶತಮಾನದಲ್ಲಿ ಸೊನ್ನೆಯ ಆವಿಷ್ಕಾರವಾಗಿರಬಹುದು ಎಂದು ಈ ಹಿಂದೆ ಇತಿಹಾಸ ತಜ್ಞರು ಹೇಳಿದ್ದರು. ಆದರೆ ಅವರು ಹೇಳಿದ ಅವಧಿಗಿಂತಲೂ ಐದು ಶತಮಾನಗಳಷ್ಟು ಹಿಂದೆಯೇ ಸೊನ್ನೆಯ ಆವಿಷ್ಕಾರವಾಗಿದೆ ಎಂದು ಆಕ್ಸ್‌ಫರ್ಡ್ ವಿವಿ ಹೇಳಿದೆ. 1881ರಲ್ಲಿ ದೊರೆತಿದ್ದ ಮನುಸ್ಮತಿ 1902ರಿಂದಲೂ ಆಕ್ಸ್‌ಫರ್ಡ್‌ನ ಬೋಡ್ಲಿಯನ್ ಲೈಬ್ರರಿಯಲ್ಲಿದ್ದು, ಸುಮಾರು ಮೂರನೇ ಶತಮಾನದಲ್ಲಿ ರಚಿಸಿರುವ ಈ ಪುಸ್ತಕದಲ್ಲಿ 10, 100, 1000 ಎಂಬ ಅಂಕಿಗಳನ್ನು ಬಳಸಲಾಗಿದೆ ಎಂದು ಆಕ್ಸ್ ಫರ್ಡ್ ವಿವಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.