ಮಹಾಕಾಲ್ ದೇವಸ್ಥಾನವಲ್ಲ: ಜಾಹೀರಾತು ವಿವಾದದ ಬಗ್ಗೆ ಕ್ಷಮೆಯಾಚಿಸಿದ ಝೊಮ್ಯಾಟೊ
Team Udayavani, Aug 21, 2022, 5:03 PM IST
ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ಒಳಗೊಂಡ ಝೊಮ್ಯಾಟೊ ಜಾಹೀರಾತಿಗೆ ಮಧ್ಯಪ್ರದೇಶದ ದೇವಸ್ಥಾನವೊಂದರ ಅರ್ಚಕರು ಆಕ್ಷೇಪ ವ್ಯಕ್ತಪಡಿಸಿದ ಒಂದು ದಿನದ ನಂತರ, ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಝೊಮ್ಯಾಟೊ ‘ಭಾವನೆಗಳನ್ನು ನೋಯಿಸುವ ಉದ್ದೇಶವಿಲ್ಲ’ ಎಂದು ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದೆ.
ಮಹಾಕಾಳೇಶ್ವರ ದೇವಸ್ಥಾನದ ಇಬ್ಬರು ಅರ್ಚಕರು ಶನಿವಾರ ಝೊಮ್ಯಾಟೊ ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.
ಜಾಹೀರಾತಿನಲ್ಲಿ, ನಟ ಹೃತಿಕ್ ರೋಷನ್ ಅವರು ಉಜ್ಜಯಿನಿಯಲ್ಲಿ ಥಾಲಿ ಬೇಕೆಂದು ಅನಿಸಿದಾಗ ಅವರು ಅದನ್ನು ‘ಮಹಾಕಾಲ್’ ನಿಂದ ಆರ್ಡರ್ ಮಾಡಿದ್ದಾರೆ ಎಂದು ಹೇಳುತ್ತಾರೆ. ಇದು ವಿವಾದಕ್ಕೆ ಕಾರಣವಾಗಿದೆ.
ಇದರ ಬಗ್ಗೆ ಝೊಮ್ಯಾಟೊ ಸ್ಪಷ್ಟನೆ ನೀಡಿದೆ. ಜಾಹೀರಾತಿನಲ್ಲಿ ಹೇಳಲಾದ ‘ಮಹಾಕಾಲ್’, ಉಜ್ಜಯಿನಿಯ ಮಹಾಕಾಲ್ ರೆಸ್ಟೋರೆಂಟ್ ಆಗಿದೆ. ಇದು ಮಹಾಕಾಳೇಶ್ವರ ದೇವಸ್ಥಾನವಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ.. ವಿಡಿಯೋ ಮಾಡಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಡಾಲಿ
ಈ ಜಾಹೀರಾತನ್ನು ಇನ್ನು ಮುಂದೆ ಪ್ರಸಾರ ಮಾಡುವುದಿಲ್ಲ ಎಂದು ಝೊಮ್ಯಾಟೊ ಹೇಳಿಕೊಂಡಿದೆ.
“ಈ ವೀಡಿಯೋ ಪ್ಯಾನ್-ಇಂಡಿಯಾ ಅಭಿಯಾನದ ಭಾಗವಾಗಿದೆ. ಇದಕ್ಕಾಗಿ ನಾವು ಪ್ರತಿ ನಗರದಲ್ಲಿನ ಜನಪ್ರಿಯತೆಯ ಆಧಾರದ ಮೇಲೆ ಉನ್ನತ ಮಟ್ಟದಲ್ಲಿರುವ ಸ್ಥಳೀಯ ರೆಸ್ಟೋರೆಂಟ್‌ಗಳು ಮತ್ತು ಅವುಗಳ ಉತ್ತಮ ತಿಂಡಿಗಳನ್ನು ಗುರುತಿಸಿದ್ದೇವೆ. ಉಜ್ಜಯಿನಿಯಲ್ಲಿ ಪ್ರಚಾರಕ್ಕಾಗಿ ಆಯ್ಕೆ ಮಾಡಲಾದ ರೆಸ್ಟೋರೆಂಟ್‌ಗಳಲ್ಲಿ ಮಹಾಕಾಲ್ ರೆಸ್ಟೋರೆಂಟ್ ಒಂದಾಗಿದೆ” ಎಂದು ಝೊಮ್ಯಾಟೊ ಸಂಸ್ಥೆ ತಿಳಿಸಿದೆ.
“ನಾವು ಉಜ್ಜಯಿನಿಯ ಜನರ ಭಾವನೆಗಳನ್ನು ಗೌರವಿಸುತ್ತೇವೆ. ಈ ಜಾಹೀರಾತನ್ನು ಇನ್ನು ಮುಂದೆ ಪ್ರಸಾರ ಮಾಡುವುದಿಲ್ಲ. ಯಾರ ನಂಬಿಕೆಗಳು ಮತ್ತು ಭಾವನೆಗಳನ್ನು ಎಂದಿಗೂ ನೋಯಿಸಬಾರದು ಎಂಬ ಉದ್ದೇಶಕ್ಕಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ” ಎಂದು ಸಂಸ್ಥೆ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.