![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 29, 2022, 7:04 PM IST
ಪಣಜಿ: ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಜಿಲ್ಲೆಗಳನ್ನು ಸಂಪರ್ಕಿಸುವ ಹೊಸ ಜುವಾರಿ ಸೇತುವೆಯನ್ನು (ಇಂದು) ಗುರುವಾರ ಸಂಜೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಉಧ್ಘಾಟನೆ ನೆರವೇರಿಸಿದರು. ಗುರುವಾರ ಮಧ್ಯಾಹ್ನ ಈ ಸೇತುವೆ ಮೇಲೆ ಕಾಲ್ನಡಿಗೆಯ ಮೂಲಕ ಕೇಂದ್ರ ಸಚಿನ ನಿತಿನ್ ಗಡ್ಕರಿ ಸೇತುವೆ ಪರಿಶೀಲನೆ ನಡೆಸಿದರು.
ಗಡ್ಕರಿ ಅವರು ಈ ಸೇತುವೆಯ ಪರಿಶೀಲನೆಯ ಫೋಟೋಗಳನ್ನು ಗಡ್ಕರಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಈ ಹೊಸ ಸೇತುವೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದೇ ಹೇಳಲಾಗುತ್ತದೆ. ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರಿಕ್ಕರ್ ಅವರ ಮಾತಿನ ಪ್ರಕಾರ, ನಿತಿನ್ ಗಡ್ಕರಿ ಅವರು ಈ ಸಂಪೂರ್ಣ ಯೋಜನೆಗೆ ಎರಡು ಸಾವಿರ ಕೋಟಿ ನಿಧಿಯನ್ನು ಸುಲಭವಾಗಿ ಅನುಮೋದಿಸಿದ್ದಾರೆ ಎನ್ನಲಾಗಿದೆ.
ಅಟಲ್ ಸೇತು ನಂತರ, ಗೋವಾದಲ್ಲಿ ಜುವಾರಿ ಸೇತುವೆಯಂತಹ ದೊಡ್ಡ ಯೋಜನೆಯನ್ನು ನಿತಿನ್ ಗಡ್ಕರಿ ಪ್ರಾರಂಭಿಸಿದರು. ಈ ಸೇತುವೆಯು ಗೋವಾದ ಅಭಿವೃದ್ಧಿಗೆ ಪೂರಕವಾಗಲಿದೆ. ಈ ಸೇತುವೆಯು ಭಾರೀ ವಾಹನಗಳ ಸಂಚಾರಕ್ಕೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ. ಕಳೆದ ಹಲವು ವರ್ಷಗಳಿಂದ ಇಲ್ಲಿ ಭಾರೀ ವಾಹನಗಳು ಕಂಡು ಬರುತ್ತಿದ್ದು, ಈ ಭಾಗದ ನಾಗರಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು. ಇದೀಗ ಜುವಾರಿ ಸೇತುವೆ ಉಧ್ಘಾಟನೆಯಿಂದಾಗಿ ಸಾರಾಗವಾಗಿ ವಾಹನ ಓಡಾಟಕ್ಕೆ ಹೆಚ್ಚಿನ ಅನುಕೂಲವಾದಂತಾಗಿದೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಆಹ್ವಾನ :ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ಎಂದ ಅಖಿಲೇಶ್
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.