ಫೇಸ್‌ಬುಕ್ ಭಾರೀ ವಿಶ್ವಾಸ ದ್ರೋಹ: ಝುಕರ್ ಬರ್ಗ್ ಕ್ಷಮೆಯಾಚನೆ
Team Udayavani, Mar 22, 2018, 11:26 AM IST
ವಾಷಿಂಗ್ಟನ್ : ಎರಡು ಶತಕೋಟಿ ಫೇಸ್ ಬುಕ್ ಬಳಕೆದಾರರಿಗೆ ಆಗಿರುವ ಭಾರೀ ವಿಶ್ವಾಸ ದ್ರೋಹಕ್ಕಾಗಿ ಮಾರ್ಕ್ ಝುಕರ್‌ಬರ್ಗ್ ಇಂದು ಕ್ಷಮೆಯಾಚಿಸಿದ್ದಾರೆ. ಫೇಸ್ ಬುಕ್ ಬಳಕೆದಾರರ ಅತ್ಯಮೂಲ್ಯ ಖಾಸಗಿ ಮಾಹಿತಿಗಳನ್ನು ರಕ್ಷಿಸುವುದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ.
ಬಳಕೆದಾರರ ಖಾಸಗಿ ಮಾಹಿತಿಗಳನ್ನು ಬೃಹತ್ ಪ್ರಮಾಣದಲ್ಲಿ ಚೌರ್ಯ ಮಾಡಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮದ ದಿಗ್ಗಜ ಫೇಸ್ ಬುಕ್ ವಿಶ್ವಾದ್ಯಂತ ಟೀಕೆ, ಖಂಡನೆಗೆ ಗುರಿಯಾಗಿದ್ದು ಇದೊಂದು ಭಾರೀ ದೊಡ್ಡ ವಿಶ್ವಾಸ ದ್ರೋಹದ ಹಗರಣವೆಂಬ ಹಣೆಪಟ್ಟಿಗೆ ಗುರಿಯಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 2016ರ ಅಧ್ಯಕ್ಷೀಯ ಚುನಾವಣಾ ಪ್ರಚಾರಾಭಿಯಾನದ ವೇಳೆ ಮತದಾರರ ಮೇಲೆ ಪ್ರಭಾವ ಬೀರುವ ಸಲುವಾಗಿ ಕ್ಯಾಂಬ್ರಿಜ್ ಆ್ಯನಲಿಟಿಕಾ ಎಂಬ ಬ್ರಿಟಿಷ್ ಸಂಸ್ಥೆ 5 ಕೋಟಿ ಫೇಸ್ ಬುಕ್ ಬಳಕೆದಾರರ ಖಾಸಗಿಯ ಮಾಹಿತಿಯ ಅನಧಿಕೃತ ಕೊಯ್ಲು ನಡೆಸಿದೆ ಎಂಬ ಆರೋಪಕ್ಕೆ ಗುರಿಯಾಗಿರುವುದು ಫೇಸ್ ಬುಕ್ ಗೆ ಭಾರೀ ದೊಡ್ಡ ಕಳಂಕವಾಗಿ ಪರಿಣಮಿಸಿದೆ.
ಫೇಸ್ ಬುಕ್ ಸಿಇಓ ಆಗಿರುವ ಮಾರ್ಕ್ ಝುಕರ್‌ಬರ್ಗ್, ಫೇಸ್ ಬುಕ್‌ನಿಂದ ತಪ್ಪಾಗಿದೆ; ನಾವದನ್ನು ಖಂಡಿತವಾಗಿಯೂ ಸರಿಪಡಿಸುತ್ತೇವೆ’ ಎಂದಿರುವರಲ್ಲದೆ ಅಮೆರಿಕ ಸಂಸತ್ತಿನ ಮುಂದೆ ಈ ವಿಶ್ವಾಸ ದ್ರೋಹದ ಪ್ರಕರಣಕ್ಕೆ ಸಂಬಂಧಪಟ್ಟು ಯಾವುದೇ ಪ್ರಶ್ನೆಗಳನ್ನು ಎದುರಿಸಲು ತಾನು ಇಷ್ಟಪಡುವುದಾಗಿ ಹೇಳಿದ್ದಾರೆ.
“ಈಗಿನ್ನು ನಮ್ಮ ಜವಾಬ್ದಾರಿ ಏನೆಂದರೆ ಈ ರೀತಿಯ ತಪ್ಪುಗಳು ಭವಿಷ್ಯದಲ್ಲಿ ಎಂದೂ ಆಗದಂತೆ ಎಚ್ಚರವಹಿಸುವುದು. ನಾವು ಈಗಾಗಲೇ ಈ ಬಗ್ಗೆ ಬಹು ಮುಖ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ; ಈ ರೀತಿಯ ತಪ್ಪುಗಳು ಮತ್ತೆ ಸಂಭವಸಿದಂತೆ ಎಚ್ಚರಿಕೆಯ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಝುಕರ್ ಬರ್ಗ್ ಹೇಳಿದರು.
ಫೇಸ್ ಬುಕ್ ತನ್ನ ಬಳಕೆದಾರರ ಖಾಸಗಿತನದ ರಕ್ಷಣೆಗಾಗಿ ಸಹಸ್ರಾರು ಆ್ಯಪ್‌ಗ್ಳ ಕೂಲಂಕಷ ಪರೀಕ್ಷೆಯ ಪ್ರಕ್ರಿಯೆಯನ್ನು ಕೈಗೊಂಡಿದೆ ಎಂದವರು ಹೇಳಿದರು.
33ರ ಹರೆಯದ ಝುಕರ್‌ಬರ್ಗ್ ಅವರು ಸುದೀರ್ಘ ಫೇಸ್ ಬುಕ್ ಪೋಸ್ಟ್ ಮೂಲಕ ಖಾಸಗಿ ಮಾಹಿತಿ ಚೌರ್ಯದ ಹಗರಣದ ಬಗ್ಗೆ ಸ್ಪಷ್ಟೀಕರಣ ನೀಡಿದರು.
ಫೇಸ್ ಬುಕ್ ಕಂಪೆನಿ ತಪ್ಪು ಮಾಡಿದೆ ಮತ್ತು ಇದನ್ನು ನಿವಾರಿಸುವ ನಿಟ್ಟಿನಲ್ಲಿ ತನ್ನ ನೀತಿಗಳನ್ನು ಸೂಕ್ತವಾಗಿ ಮಾರ್ಪಡಿಸಿದೆ ಎಂದು ಝುಕರ್ ಬರ್ಗ್ ಹೇಳಿದರು.
“ಫೇಸ್ ಬುಕ್ ಆರಂಭಿಸಿದವನು ನಾನು. ಈ ವೇದಿಕೆಯಲ್ಲಿ ಏನೇ ಆದರೂ ಅದಕ್ಕೆ ನಾನು ಜವಾಬ್ದಾರನಾಗಿರುತ್ತೇನೆ. ನಮ್ಮ ಸಮುದಾಯದ ಹಿತ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಾನು ಗಂಭೀರನಾಗಿದ್ದೇನೆ’ ಎಂದು ಝುಕರ್‌ಬರ್ಗ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.