![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 4, 2019, 6:55 PM IST
ಮುಂಬಯಿ, ಅ. 3: ಗೌಡ ಸಾರಸ್ವತ್ ಬ್ರಾಹ್ಮಣ್ ಸಭಾ ದಹಿಸರ್-ಬೊರಿವಲಿ ಸಂಸ್ಥೆಯ ವಾರ್ಷಿಕ ನವರಾತ್ರಿ ಉತ್ಸವವು ಸೆ. 29ರಂದು ಪ್ರಾರಂಭಗೊಂಡಿದ್ದು, ಅ. 8ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ.
ಕುಲಗುರು ದೈವಕ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳ ಕೃಪೆ ಮತ್ತು ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದಗಳೊಂದಿಗೆ ದಹಿಸರ್ ಪೂರ್ವದ ಎನ್. ಎಲ್. ಕಾಂಪ್ಲೆಕ್ಸ್‌ನ ಸಾರಸ್ವತ ಕಲ್ಚರಲ್ ಆ್ಯಂಡ್ ರಿಕ್ರಿಯೇಷನ್ ಸೆಂಟರ್ ಜಿಎಸ್‌ಬಿ ಗಾರ್ಡನ್‌ನ ಮಾಧವೇಂದ್ರ ಸಭಾ ಮಂಟಪದಲ್ಲಿ ನಿರ್ಮಾಣಗೊಂಡಿರುವ ಪುಷ್ಪಾಲಂಕೃತ ಭವ್ಯ ಮಂಟಪದಲ್ಲಿ ರಜತ ಪ್ರಭಾವಳಿಯೊಂದಿಗೆ ಸ್ವರ್ಣಮುಕುಟ, ವಜ್ರ, ಚಿನ್ನಾಭರಣಗಳೊಂದಿಗೆ ಮಾತೆ ದುರ್ಗಾದೇವಿಯನ್ನು ಆರಾಧಿಸಲಾಗುತ್ತಿದೆ. ಉತ್ಸವದ ಒಂಬತ್ತು ದಿನಗಳಲ್ಲೂ ದೇವಿಯನ್ನು ವಿಭಿನ್ನ ರೂಪಳಿಂದ ಶೃಂಗಾರಿಸಲಾಗುತ್ತಿದೆ.
ಸರಸ್ವತಿದೇವಿ, ಶಾಂತಾದುರ್ಗಾ, ಚಾಮುಂಡೇಶ್ವರಿ, ಅನ್ನಪೂರ್ಣೆಶ್ವರಿ ಮಾತೆಯನ್ನು ಪೂಜಿಸಲಾಯಿತು. ಅ. 3ರಂದು ಲಕ್ಷ್ಮೀ ನಾರಾಯಣ ಹೃದಯ ಹವನ, ಪಂಚಾಮೃತ ಅಭಿಷೇಕ, ಚಂಡಿಕಾ ಹವನ, ತುಲಾಭಾರ ಸೇವೆ, ಪಂಚನೈವೇದ್ಯ ಮಹಾಭೋಗ, ಮಧ್ಯಾಹ್ನ ಪೂಜೆ, ದುರ್ಗಾ ನಮಸ್ಕಾರ, ದೀಪಾರಾಧನೆ, ಪುಷ್ಪಾಲಂಕಾರ ಸೇವೆ, ರಂಗಪೂಜೆ, ರಾತ್ರಿ ಪೂಜೆ ಇತ್ಯಾದಿಗಳೊಂದಿಗೆ ಸಂಪ್ರದಾಯಿಕವಾಗಿ ಚಂಡಿಕಾ ದೇವಿಯನ್ನು ಆರಾಧಿಸಲಾಯಿತು. ವೇದಮೂರ್ತಿ ಲಕ್ಷ್ಮೀ ನಾರಾಯಣ ಭಟ್ ಅವರು ವಿವಿಧ ಪೂಜಾಧಿಗಳನ್ನು ನೆರವೇರಿಸಿ ಸದ್ಭಕ್ತರನ್ನು ಹರಸಿದರು. ಪುರೋಹಿತರಾದ ವೇದ ಮೂರ್ತಿ ಉಲ್ಲಾಸ್ ಭಟ್, ವೇದಮೂರ್ತಿ ಮಂಜುನಾಥ್ ಪುರಾಣಿಕ್, ವೇದಮೂರ್ತಿ ಪ್ರಶಾಂತ್ ಭಟ್, ವೇದಮೂರ್ತಿ ವಿನಾಯಕ ಭಟ್, ವೇದಮೂರ್ತಿ ಹರೀಶ್ ಭಟ್ ಬೆಳಗಾವಿ, ಮತ್ತಿತರ ವಿದ್ವಾನರು ಪೂಜಾಧಿಗಳ ಸಹಭಾಗಿತ್ವ ವಹಿಸಿದ್ದರು. ರಾಜಾರಾವ್ ದಂಪತಿ ಹಾಗೂ ಎಚ್. ಪಿ. ಪ್ರಭು ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.
ಜಿಎಸ್‌ಬಿ ಸಭಾದ ಸಂಚಾಲಕರಾದ ಕೆ. ಶ್ರೀನಿವಾಸ ಪ್ರಭು, ಜಿ. ಡಿ. ರಾವ್, ಗಣೇಶ್ ವಿ. ಪೈ, ಶೋಭಾ ವಿ. ಕುಲ್ಕರ್ಣಿ, ಸುಗುಣಾ ಕೆ. ಕಾಮತ್, ಗೌರವ ಕಾರ್ಯಾಧ್ಯಕ್ಷ ಕೆ. ಆರ್. ಮಲ್ಯ, ಅಧ್ಯಕ್ಷ ಎಂ. ಉದಯ ಪಡಿಯಾರ್, ಉಪಾಧ್ಯಕ್ಷ ಸಾಣೂರು ಮನೋಹರ್ ವಿ. ಕಾಮತ್, ಗೌರವ ಪ್ರಧಾನ ಕಾರ್ಯದರ್ಶಿ ವಿಷ್ಣು ಆರ್. ಕಾಮತ್, ಗೌರವ ಕೋಶಾಧಿಕಾರಿ ಮೋಹನ್ ಎ. ಕಾಮತ್, ಜೊತೆ ಕಾರ್ಯದರ್ಶಿಗಳಾದ ಗುರುಪ್ರಸಾದ್ ವಿ. ಪೈ ಮತ್ತು ಜಯೇಶ್ ಎಚ್. ಪ್ರಭು, ಜತೆ ಕೋಶಾಧಿಕಾರಿ ಪಿ. ಎಸ್. ಕಾಮತ್ ಹಾಗೂ ಸದಸ್ಯರ ಸೇವೆಯೊಂದಿಗೆ ನಡೆಯುತ್ತಿರುವ ಈ ಉತ್ಸವದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸೇವಾಕರ್ತರು, ಸಾವಿರಾರು ಭಕ್ತರು ಆಗಮಿಸಿ ಗಂಧಪ್ರಸಾದ ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
You seem to have an Ad Blocker on.
To continue reading, please turn it off or whitelist Udayavani.