ಪುಣೆ ಶ್ರೀ ಗುರುದೇವ ಸೇವಾ ಬಳಗದ 15ನೇ ವಾರ್ಷಿಕೋತ್ಸವ 


Team Udayavani, Nov 13, 2018, 12:36 PM IST

1111mum05.jpg

ಪುಣೆ: ತಾಯ್ನಾಡಿನ ಭಾಷೆ,   ಕಲೆ, ಸಂಸ್ಕೃತಿ, ಆಚಾರ, ವಿಚಾರಗಳಿಗೆ ಮಹತ್ವವನ್ನು ನೀಡಿ, ಅದರ ಬೆಳವಣಿಗೆಗೆ ಪೂರಕವಾಗಿ ಕಾರ್ಯಗೈದು, ಸಮಾಜದ  ಪ್ರತಿಯೊಬ್ಬ ಬಡ ವ್ಯಕ್ತಿಯು  ಯಾವುದೇ ಅವಕಾಶದಿಂದ ವಂಚಿತನಾಗದೇ   ಸಮಾಜದ ಮುಖ್ಯವಾಹಿನಿಗೆ  ಬರಬೇಕು ಎಂಬ ಧ್ಯೇಯವನ್ನಿಟ್ಟುಕೊಂಡು  ಆಧ್ಯಾತ್ಮಿಕ ಚಿಂತನೆಯೊಂದಿಗೆ  ಸಮಾಜ ಮುಖೀ ಸೇವೆಗೈಯುತ್ತಿರುವ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಂದ ಸ್ಥಾಪನೆಗೊಂಡ ಸಂಸ್ಥೆ   ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರವಾಗಿದೆ ಎಂದು ಪುಣೆ ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ   ಹೇಳಿದರು.

ಶ್ರೀ  ಗುರುದೇವ ಸೇವಾ ಬಳಗ ಪುಣೆಯ ಘಟಕವು ಸ್ಥಾಪನೆಗೊಂಡು 15 ವರ್ಷಗಳು ಕಳೆದಿವೆ. ಸ್ವಾಮೀಜಿಯವರ  ಮುಖಾಂತರ, ಸಮಾಜಮುಖೀ ಸೇವಾ ಕಾರ್ಯಗಳು, ಬಡ ಜನರ ಉನ್ನತಿಗೆ ಸಹಕಾರ, ಶಿಕ್ಷಣ, ಆಯು ರ್ವೇದ ಔಷಧೋಪಚಾರ, ಧಾರ್ಮಿಕ, ಕಲಾ ಸೇವೆಗಳು ಇನ್ನಿತರ ಜನೋಪಯೋಗಿ ಸೇವಾ ಕಾರ್ಯಗಳು ನಮ್ಮ ತಾಯ್ನಾಡಿನಲ್ಲಿ ನಿರಂತರ ವಾಗಿ ನಡೆಯುತ್ತಿದೆ. ಈ ಕಾರ್ಯಗಳಿಗೆ  ಪುಣೆಯ  ಬಳಗದ ಮುಖಾಂತರ ಗುರು ಭಕ್ತರು ಹಲವಾರು  ವರ್ಷಗಳಿಂದ ಸಹಕರಿಸುತ್ತಿದ್ದಾರೆ. ಒಡಿಯೂರು ಶ್ರೀಗಳ ಮೂಲಕ ಸಮಾಜ  ಸೇವೆಯನ್ನು ಮನಃಪೂರ್ವಕವಾಗಿ ಮಾಡಿ ಕೊಂಡು ಬಂದಿದ್ದೇವೆ. ಈ ರೀತಿಯ ಸೇವೆ ಯಿಂದ ತೃಪ್ತಿಯನ್ನು ಪಡೆದಿದ್ದೇವೆ.  ಇದು ಪ್ರತಿಷ್ಠೆಯ ಮಾತಲ್ಲ, ಸ್ವಾಮೀಜಿಯವರಿಗೆ ಸಮಾಜದ ಬಗ್ಗೆ ಇರುವ ತುಡಿತವನ್ನು ಶ್ರೀಕ್ಷೇತ್ರ ದಲ್ಲಿ ಕಾಣಬಹುದು. ಇಂತಹ ಕಾರ್ಯಗಳಲ್ಲಿ ಇನ್ನಷ್ಟು ಬಂಧುಗಳು ಪಾಲುದಾರರಾಗಬೇಕು. ಪುಣೆಯ ಎಲ್ಲ ತುಳು ಕನ್ನಡಿಗರ ಸಹಕಾರ ಇಂಥ ಕಾರ್ಯಗಳಿಗೆ ಸಿಗಬೇಕು ಎನ್ನುವುದೇ ನಮ್ಮ ಆಶಯವಾಗಿದೆ ಎಂದು ಅವರು ಹೇಳಿದರು.

ಪುಣೆ ಶ್ರೀ ಗುರುದೇವಾ ಸೇವಾ ಬಳಗದ ವಾರ್ಷಿಕೊತ್ಸವವು ನ. 22ರಂದು ಪುಣೆಯ ತಿಲಕ್‌ ಸ್ಮಾರಕ ರಂಗ ಮಂದಿರದಲ್ಲಿ  ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಇದರ  ಪೂರ್ವ ತಯಾರಿ ಸಭೆಯು ನ. 8ರಂದು  ಶಿವಾಜಿನಗರದ ಕೃಷ್ಣ ಪ್ರಸಿಡೆನ್ಸಿ ಹೊಟೇಲ್‌ ಕಿರು ಸಭಾ ಭವನದಲ್ಲಿ  ನಡೆಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿದ ಅವರು, ಪ್ರತಿ ವರ್ಷವೂ ಪೂಜ್ಯ ಶ್ರೀ ಗುರುವರ್ಯರು, ಸಾಧ್ವಿ ಮಾತಾನಂದಮಯಿ ಯವರು   ಪುಣೆ  ಬಳಗದ ವಾರ್ಷಿಕೋತ್ಸವ ಸಂದರ್ಭ ಪುಣೆಗೆ ಭೇಟಿ ನೀಡಿ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ಸಮಾಜಕ್ಕೆ ಬೇಕಾಗುವ ಉತ್ತಮ  ಸಂದೇಶದೊಂದಿಗೆ ಆಶೀರ್ವಚನ ನೀಡಿ ಹರಸಿ¨ªಾರೆ. ಅಂತೆಯೇ ನಮ್ಮ ಈ ವರ್ಷದ ವಾರ್ಷಿಕೋತ್ಸವವು ನ. 22ರಂದು ನಡೆಯಲಿದ್ದು, ಪೂಜ್ಯ ಸ್ವಾಮೀಜಿಯವರು ಅಗಮಿಸಲ್ಲಿ¨ªಾರೆ.  ಕಾರ್ಯಕ್ರಮಕ್ಕೆ ಪುಣೆಯ  ಎಲ್ಲ ಭಕ್ತ ಜನರು ಆಗ ಮಿಸಿ  ಯಶಸ್ವಿಗೊಳಿಸಬೇಕು ಎಂದರು. 

ಅಧ್ಯಕ್ಷರು, ಪದಾಧಿಕಾರಿಗಳು ದೇವರಿಗೆ ಆರತಿ ಬೆಳಗಿಸಿ ಸಭೆಗೆ ಚಾಲನೆ ನೀಡಿದರು. ವಜ್ರಮಾತಾ ಮಹಿಳಾ ವಿಕಾಸ  ಕೇಂದ್ರದ ಅಧ್ಯಕ್ಷೆ  ಪ್ರೇಮಾ ಎಸ್‌. ಶೆಟ್ಟಿ, ಬಳಗದ ಕಾರ್ಯದರ್ಶಿ ಎನ್‌. ರೋಹಿತ್‌ ಶೆಟ್ಟಿ ನಗ್ರಿಗುತ್ತು ಉಪಸ್ಥಿತರಿದ್ದರು. 

ಬಳಗದ  ಗೌರವ ಕಾರ್ಯದರ್ಶಿ ಎನ್‌. ರೋಹಿತ್‌ ಶೆಟ್ಟಿ ಅವರು ಸ್ವಾಗತಿಸಿ ಬಳಗದ 15ನೇ ವಾರ್ಷಿಕೋತ್ಸವದ ತಯಾರಿಯ ಬಗ್ಗೆ ಹಾಗು ಕಾರ್ಯಕ್ರಮದ ರೂಪುರೇಷೆಗಳು ಮತ್ತು ಸದಸ್ಯರು  ನಿರ್ವಹಿಸಲಿರುವ  ಜವಾಬ್ದಾರಿಗಳ ಬಗ್ಗೆ ಸಭೆಗೆ ತಿಳಿಸಿ, ಪುಣೆಯಲ್ಲಿ  ಸ್ವಾಮೀಜಿಯವರ  ನಾಲ್ಕು ದಿನಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಎಲ್ಲರ ಸಹಕಾರ ಬಯಸಿದರು.

ಬಳಗದ  ಪ್ರಮುಖರಾದ  ಸಲಹೆಗಾರ ಉಷಾ ಕುಮಾರ್‌ ಶೆಟ್ಟಿ ಅವರು ಕಾರ್ಯಕ್ರಮದ ಖರ್ಚು ವಿವರವನ್ನು ಸಭೆಯಲ್ಲಿ ಮಂಡಿಸಿದರು. ಸಭೆಯಲ್ಲಿ  ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. 
ಬಳಗದ ಪ್ರಮುಖರಾದ  ಕೋಶಾಧಿಕಾರಿ ರಂಜಿತ್‌ ಶೆಟ್ಟಿ, ಉಮೇಶ್‌ ಶೆಟ್ಟಿ ಸ್ಲಿàಪ್‌ ವೆಲ್‌, ಸುಧಾಕರ ಶೆಟ್ಟಿ, ನಾಗರಾಜ್‌ ಶೆಟ್ಟಿ ಹಡಪ್ಸರ್‌, ಪ್ರಮೋದ್‌ ರಾವುತ್‌, ವಿಠuಲ್‌ ಶೆಟ್ಟಿ,  ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ ಜಯಲಕ್ಷಿ¾à ಪಿ. ಶೆಟ್ಟಿ,  ಶೋಭಾ ಯು. ಶೆಟ್ಟಿ, ಪುಷ್ಪಾ ಎಲ್‌. ಪೂಜಾರಿ, ವೀಣಾ ಪಿ. ಶೆಟ್ಟಿ, ವೀಣಾ ಡಿ. ಶೆಟ್ಟಿ, ಸುಮನಾ ಎಸ್‌. ಹೆಗ್ಡೆ, ಸಂಧ್ಯಾ ಶೆಟ್ಟಿ, ರಜನಿ  ಹೆಗ್ಡೆ,  ಶ್ವೇತಾ ಎಚ್‌. ಮೂಡಬಿದಿರೆ ಹಾಗೂ ಇತರೆ ಸದಸ್ಯರು  ತಮ್ಮ  ಸಲಹೆಗಳನ್ನು ನೀಡಿದರು. ರೋಹಿತ್‌ ಶೆಟ್ಟಿ ವಂದಿಸಿದರು. 

ಚಿತ್ರ-ವರದಿ: ಹರೀಶ್‌ ಮೂಡಬಿದ್ರೆ ಪುಣೆ

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.