ಕೆಸಿಎ ನಲಸೋಪರ ಸಂಸ್ಥೆಯಿಂದ 20ನೇ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ

Team Udayavani, Jun 7, 2017, 4:23 PM IST

34.jpg

ಮುಂಬಯಿ: ಕೊಂಕಣಿ ಕಥೊಲಿಕ್‌ ಅಸೋಸಿಯೇಶನ್‌ ನಲಸೋಪರ (ಕೆಸಿಎ) ಸಂಸ್ಥೆಯು 20 ನೇ ವಾರ್ಷಿಕ  ಆರ್ಥಿಕವಾಗಿ ಹಿಂದುಳಿದ ಶಾಲಾ ವಿದ್ಯಾರ್ಥಿಳಿಗೆ ವಿದ್ಯಾರ್ಥಿ ವೇತನ, ಶೈಕ್ಷಣಿಕ ಪರಿಕರಗಳ ವಿತರಣ ಕಾರ್ಯಕ್ರಮವು ಜೂ. 4 ರಂದು ಪೂರ್ವಾಹ್ನ ನಡೆಯಿತು.

ಹೆಲ್ಪಿಂಗ್‌ ಹ್ಯಾಂಡ್ಸ್‌ಡಾಟ್‌ಗಿವ್ಸ್‌ ಸಂಸ್ಥೆಯ ಸಹಯೋಗದೊಂದಿಗೆ ನಲಸೋಪರ ಪೂರ್ವದ  ಕೆಸಿಎ ಕಚೇರಿಯಲ್ಲಿ ಕೆಸಿಎ ಅಧ್ಯಕ್ಷ ಹ್ಯಾರಿ ಬಿ. ಕುಟಿನ್ಹೊ ಕಲ್ಲಮುಂಡ್ಕೂರು ಅಧ್ಯಕ್ಷತೆಯಲ್ಲಿ ಜರಗಿದ ಸರಳ ಕಾರ್ಯಕ್ರಮದಲ್ಲಿ ನಲಸೋಪರ ಪರಿಸರದ ವಿವಿಧ ಸಮುದಾಯಗಳ ಆರ್ಥಿಕವಾಗಿ ಹಿಂದುಳಿದ ನೂರಾರು ಶಾಲಾ ಮಕ್ಕಳಿಗೆ ವಿವಿಧ ರೀತಿಯಲ್ಲಿ ಶೈಕ್ಷಣಿಕ ನೆರವು ನೀಡಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹೆಲ್ಪಿಂಗ್‌ಹ್ಯಾಂಡ್ಸ್‌ಡಾಟ್‌ಗಿವ್ಸ್‌ ಸಂಸ್ಥೆಯ ಸ್ಥಾಪಕರಲ್ಲೋರ್ವರಾದ ಜೀವನ್‌ ಕೋಟ್ಯಾನ್‌, ಪೀಟರ್‌ ಫೆರ್ನಾಂಡಿಸ್‌, ಇಮೆಲ್ಡಾ ಸಿಕ್ವೇರಾ ಉಪಸ್ಥಿತರಿದ್ದು ವಿವಿಧ ರೀತಿಯ ನೆರವನ್ನು ಹಸ್ತಾಂತರಿಸಿ ಮಕ್ಕಳಿಗೆ ಶುಭಹಾರೈಸಿದರು. ಈ ಬಾರಿ ಸುಮಾರು 200ಕ್ಕೂ ಅಧಿಕ ಮಕ್ಕಳಿಗೆ ಉಚಿತವಾಗಿ ಶೈಕ್ಷಣಿಕ ಪರಿಕರಗಳನ್ನು ಹಾಗೂ 50ಕ್ಕೂ ಹೆಚ್ಚು ಮಕ್ಕಳಿಗೆ ಸಮವಸ್ತ್ರ, 20 ವಿದ್ಯಾರ್ಥಿಗಳ ಶಾಲಾ ವಾರ್ಷಿಕ ಶುಲ್ಕವನ್ನು ವಿತರಿಸಲಾಯಿತು.

ಮಕ್ಕಳನ್ನು ಶಿಕ್ಷಣದತ್ತ ಆಕರ್ಷಿಸಿ ಅವರನ್ನು ಸುಶಿಕ್ಷಿತರನ್ನಾಗಿಸುವ ಅಗತ್ಯ ಮಕ್ಕಳ ಪಾಲಕರ ಜವಾಬ್ದಾರಿಯಾಗಬೇಕು. ಮಕ್ಕಳಲ್ಲಿನ ದೋಷಗಳನ್ನು ತಿದ್ದಿ ತೀಡುವ ಶಿಕ್ಷಕರಲ್ಲಿ ಅನ್ಯೋನತೆ ಬೆಳೆಸಿಕೊಳ್ಳುವ ಅಗತ್ಯ ಪ್ರಸಕ್ತ ಪಾಲಕರಿಗೆ ಮತ್ತು ಸಮಾಜಕ್ಕಿದೆ. ವಿದ್ಯಾಭ್ಯಾಸವನ್ನು ದೋಷಮುಕ್ತ ಗೊಳಿಸಿದಾಗಲೇ ವಿದ್ಯಾರ್ಥಿಗಳ ಬಾಳು ಬಂಗಾರವಾಗುತ್ತದೆ. ಆದ್ದರಿಂದ ಮಕ್ಕಳು ಸುಶಿಕ್ಷಿತರಾಗಿ ಜೀವನವನ್ನು ಸಾರ್ಥಕವಾಗಿಸಿಕೊಳ್ಳಬೇಕು ಎಂದು ಅತಿಥಿಯಾಗಿ ಪಾಲ್ಗೊಂಡ ಜೀವನ್‌ ಕೋಟ್ಯಾನ್‌ ಅವರು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಹ್ಯಾರಿ ಬಿ. ಕುಟಿನ್ಹೋ ಕಲ್ಲಮುಂಡ್ಕೂರು ಅವರು ಮಾತನಾಡಿ, ಶಿಕ್ಷಣದಲ್ಲಿ ಆಸಕ್ತ ಮಕ್ಕಳಿಗೆ ಸದ್ಯ ಶೈಕ್ಷಣಿಕ ಪರಿಕರ ಅಥವಾ ಹಣಕಾಸು ನೆರವಿನ ಕೊರತೆ ಎಂದೂ  ಬಾಧಿಸಲಾರದು. ಆದ್ದರಿಂದ ಶೈಕ್ಷಣಿಕ ನೆರವು, ಅನುದಾನ ಪಡೆಯುವುದರ ಬಗ್ಗೆ ಮಕ್ಕಳಾಗಲೀ ಪಾಲಕರಾಗಲಿ ಸಣ್ಣತನ ಎನ್ನುವುದನ್ನು ತಿಳಿಯಬಾರದು. ಫಲಾನುಭವ ಪಡೆಯುವುದರಲ್ಲಿ ಎಂದಿಗೂ ಕೀಳರಿಮೆ ಮಾಡದಿರಿ. ಬದಲಾಗಿ  ಇಂತಹ ಸೇವಾ ಫಲಾನುಭವ ಪಡೆದು ಸುಶಿಕ್ಷಿರತರಾಗಿ ಉತ್ತಮ ಭವಿಷ್ಯ ರೂಪಿಸಲು ಪ್ರೋತ್ಸಾಹಿಸಬೇಕು. ಮಕ್ಕಳೂ ಸಂಸ್ಕಾರಯುತ ಜೀವನ ಮೈಗೂಡಿಸಿ ತಾವೂ ಸ್ವಯಂ ಉದ್ಯಮಿಗಳಾಗಿ ಇದೇ ರೀತಿಯ ನೆರವು ನೀಡುವ ಹೃದಯಶೀಲರಾಗಬೇಕು. ರಾಷ್ಟ್ರದ ಸತøಜೆಗಳಾಗಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಬೆಳೆಸಿದಾಗ ಬಡತನ ನಿರ್ಮೂಲನ ಸಾಧ್ಯವಾಗುವುದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಲಿಲ್ಲಿ ಕ್ವಾಡ್ರಸ್‌, ರೋನಿ ಪಾಯಸ್‌, ಇನೇಝ್ ಡಿ’ಸೋಜಾ, ಲವಿನಾ ಡಾಯಸ್‌, ಜೋನ್‌ ಆಳ್ವ, ಡೈನಾ ಮೋರಸ್‌, ರೊವಿನ್‌ಟನ್‌ ಕಾಕ, ವಿಲ್ಡಾ ಡಿ’ಸೋಜಾ, ರಿಚಾರ್ಡ್‌ ಪಿಂಟೊ, ರೊಮಿಯೋ ಫೆರ್ನಾಂಡಿಸ್‌, ಲವಿನಾ ಡಾಯಸ್‌, ಜೋನ್‌ ಆಳ್ವ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ಕೆಸಿಎ ಗೌರವ ಪ್ರಧಾನ ಕಾರ್ಯದರ್ಶಿ ಕ್ಲೋಡ್‌ ಡಿ’ಸಿಲ್ವಾ ಸ್ವಾಗತಿಸಿದರು. ಗೌರವ  ಕೋಶಾಧಿಕಾರಿ ಆಲ್ವಿನ್‌ ಫ್ರಾನ್ಸಿಸ್‌ ಡಿ’ಸೋಜಾ ಮುದರಂಗಡಿ ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಲಿಲ್ಲಿ ಕ್ವಾಡ್ರಸ್‌, ರೋನಿ ಪಾಯಸ್‌, ಇನೇಝ್ ಡಿ’ಸೋಜಾ  ಅತಿಥಿಗಳನ್ನು ಪುಷಗುತ್ಛವನ್ನಿತ್ತು ಗೌರವಿಸಿ ದರು. ಉಪಾಧ್ಯಕ್ಷೆ ಗ್ರೇಸಿ ಪಿಂಟೋ ವಂದಿಸಿ ದರು.        

 ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Padubidri; ಖಾಸಗಿ ಬಸ್‌ ಢಿಕ್ಕಿ: ವಿದ್ಯಾರ್ಥಿಗೆ ಗಂಭೀರ ಗಾಯ

Padubidri; ಖಾಸಗಿ ಬಸ್‌ ಢಿಕ್ಕಿ: ವಿದ್ಯಾರ್ಥಿಗೆ ಗಂಭೀರ ಗಾಯ

rain

Tamil Nadu;ಸೈಕ್ಲೋನ್‌ ದುರ್ಬಲವಾದ್ರೂ ಭಾರೀ ಮಳೆ?

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

NItin Gadkari

2000 ಇಸವಿಯಿಂದ 1.44 ಲಕ್ಷ ಕೋಟಿ ರೂ. ಟೋಲ್‌ ಸಂಗ್ರಹ: ಗಡ್ಕರಿ

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Mangaluru: ಹಂಪನಕಟ್ಟೆ; ಬೇಕರಿ ಕೆಲಸಗಾರ ನಾಪತ್ತೆ

Mangaluru: ಹಂಪನಕಟ್ಟೆ; ಬೇಕರಿ ಕೆಲಸಗಾರ ನಾಪತ್ತೆ

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Kumbla: ಬುರ್ಖಾಧಾರಿ ಯುವಕ ಪೊಲೀಸ್‌ ವಶಕ್ಕೆ

Kumbla: ಬುರ್ಖಾಧಾರಿ ಯುವಕ ಪೊಲೀಸ್‌ ವಶಕ್ಕೆ

Padubidri; ಖಾಸಗಿ ಬಸ್‌ ಢಿಕ್ಕಿ: ವಿದ್ಯಾರ್ಥಿಗೆ ಗಂಭೀರ ಗಾಯ

Padubidri; ಖಾಸಗಿ ಬಸ್‌ ಢಿಕ್ಕಿ: ವಿದ್ಯಾರ್ಥಿಗೆ ಗಂಭೀರ ಗಾಯ

rain

Tamil Nadu;ಸೈಕ್ಲೋನ್‌ ದುರ್ಬಲವಾದ್ರೂ ಭಾರೀ ಮಳೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.