ಸಂಘದ ಯೋಜನೆಗಳ ಕಾರ್ಯರೂಪಕ್ಕೆ ಎಲ್ಲರ ಸಹಕಾರ ಅಗತ್ಯ: ಜಗದೀಶ್‌ ಹೆಗ್ಡೆ


Team Udayavani, Nov 23, 2021, 11:18 AM IST

ಸಂಘದ ಯೋಜನೆಗಳ ಕಾರ್ಯರೂಪಕ್ಕೆ ಎಲ್ಲರ ಸಹಕಾರ ಅಗತ್ಯ: ಜಗದೀಶ್‌ ಹೆಗ್ಡೆ

ಮಲಾಡ್‌: ನಿರಂತರ ಕಾರ್ಯ ಚಟುವಟಿಕೆಗಳ ಮೂಲಕ ಮಲಾಡ್‌ ಉಪನಗರದಲ್ಲಿ  ಹೆಸರಾಂತ ಜಾತ್ಯತೀತ ಸಂಸ್ಥೆಯಾಗಿ ಬೆಳೆದುಬಂದ ಮಲಾಡ್‌ ಕನ್ನಡ ಸಂಘವನ್ನು ಸಾಂಘಿಕ, ನಿಸ್ವಾರ್ಥ ಸೇವೆ ಮೂಲಕ ಮಹಾನಗರದಲ್ಲಿ  ಮತ್ತೂಮ್ಮೆ ವೈವಿಧ್ಯಪೂರ್ಣ ಸಾಂಸ್ಕೃತಿಕ ಸಂಸ್ಥೆಯನ್ನಾಗಿ ಬೆಳೆಸುವ ಜವಾಬ್ದಾರಿ ನಮ್ಮ ಮುಂದಿದೆ. ಇದಕ್ಕೆ ಸದಸ್ಯರೆಲ್ಲರ ಒಗ್ಗಟ್ಟು, ಸಹಕಾರ ಅತೀ ಮುಖ್ಯ. ಕಳೆದ ಇಪ್ಪತ್ತು ವರ್ಷಗಳ ಸುದೀರ್ಘ‌ ಅವಧಿಯವರೆಗೆ ಅಧ್ಯಕ್ಷರಾಗಿ ಈ ಸಂಸ್ಥೆಯನ್ನು ನಿರಂತರ ಕಾರ್ಯನಿರತ ಸಂಸ್ಥೆಯನ್ನಾಗಿ ಬೆಳೆಸಿದ ಹರೀಶ್‌ ಎನ್‌. ಶೆಟ್ಟಿ ಅವರ ಕೊಡುಗೆ ಹಾಗೂ ಗೌರವಾಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರ ಸಹ ಕಾರ ದಿಂದ ಮಲಾಡ್‌ ಕನ್ನಡ ಸಂಘದ ಕೀರ್ತಿ ಅತೀ ಎತ್ತರಕ್ಕೆ ಬೆಳೆದಿದೆ. ನಾವೆಲ್ಲ ಸಂಘಟಿ ತರಾಗಿ ಮತ್ತೆ ವೈವಿಧ್ಯಮಯ ಕಾರ್ಯ ಕ್ರಮ ಗಳೊಂದಿಗೆ ಸಂಘಕ್ಕೆ ಹೊಸತನ ನೀಡುವ ಸಂಕಲ್ಪವನ್ನು ಮಾಡೋಣ ಎಂದು ಮಲಾಡ್‌ ಕನ್ನಡ ಸಂಘದ ಅಧ್ಯಕ್ಷ, ನ್ಯಾಯವಾದಿ ಜಗದೀಶ್‌ ಹೆಗ್ಡೆ ತಿಳಿಸಿದರು.

ಮಾರ್ವೇ ರೋಡ್‌ ಲೋವರ್‌ ಖಾರೋಡಿ ಸೈಂಟ್‌ ಜ್ಯೂಡ್ಸ್‌ ಹೈಸ್ಕೂಲ್‌ನಲ್ಲಿ  ನ. 21ರಂದು ಜರಗಿದ ಮಲಾಡ್‌ ಕನ್ನಡ ಸಂಘದ 20ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಮಾಡುವ ಕೆಲಸದಲ್ಲಿ ಪಾರದರ್ಶಕತೆ, ಸಮಯ ಮತ್ತು ಮನಸ್ಸುಗಳ ಹೊಂದಾಣಿಕೆ ಅತೀ ಮುಖ್ಯ. ನ್ಯಾಯವಾದಿ ವೃತ್ತಿಯ ಅನುಭವವನ್ನು ಸಂಸ್ಥೆಯ ಚಟುವಟಿಕೆಗಳಲ್ಲಿ ಬಳಸುವ ಮೂಲಕ ಕೆಲವು ಬದಲಾವಣೆಗಳು ಸಂಘದ ಒಳಿತಿಗಾಗಿ ಎಂದು ಪರಿಗಣಿಸಬೇಕು. ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಈ ಸಂಘದ ನೂತನ ಅಧ್ಯಕ್ಷ ಹು¨ªೆ ದೊರೆತಿದೆ. ನಿಮ್ಮೆಲ್ಲರ ಉಪಯುಕ್ತ ಸಲಹೆ, ಸೂಚನೆ ಮೂಲಕ ಸಂಸ್ಥೆಯನ್ನು ಉನ್ನತಿಯತ್ತ ಕೊಂಡೊಯ್ಯುತ್ತೇನೆ. ಸಂಘ ಬೆಳೆಯುವುದರ ಜತೆಗೆ ಸದಸ್ಯರಿಗೆ, ಸದಸ್ಯರ ಮಕ್ಕಳಿಗೆ ಇದರ ಉಪಯೋಗ ದೊರೆ ಯಬೇಕೆಂಬ ಅಪೇಕ್ಷೆ ನನ್ನದು. ಸಂಘದ ಮೂಲಕ ದಾನಿಗಳ ಸಹಾಯದಿಂದ ಆ್ಯಂಬುಲೆನ್ಸ್‌, ಮಕ್ಕಳ ಶೈಕ್ಷಣಿಕ ದತ್ತು ಸ್ವೀಕಾರ, ಅಸಹಾಯಕರಿಗೆ ವೀಲ್‌ಚೇರ್‌ ವಿತರಣೆ ಇತ್ಯಾದಿ ಮಹತ್ವಪೂರ್ಣ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಕ್ಕೆ ಸದಸ್ಯರೆಲ್ಲ ಸಹಕಾರ ಅಗತ್ಯ. ಸಂಘದ ಪಾರದರ್ಶಕತೆ, ಇನ್ನಿತರ ಕಾರ್ಯ ಕಲಾಪಗಳ ಚರ್ಚೆಗೆ ಸಹಕರಿಸುವಂತೆ ಸಲಹೆ ನೀಡಿದರು.

ಗತ ವರ್ಷದಲ್ಲಿ  ನಿಧನ ಹೊಂದಿದ ಸದಸ್ಯರು ಮತ್ತವರ ಸಂಬಂಧಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಗತ ವರ್ಷದ ವಾರ್ಷಿಕ ವರದಿಯನ್ನು ಜತೆ ಕಾರ್ಯದರ್ಶಿ ಅನಿಲ್‌ ಎಸ್‌. ಪೂಜಾರಿ ಸಭೆಯಲ್ಲಿ  ಮಂಡಿಸಿ ಅಂಗೀಕರಿಸಿದರು. ಗೌರವ ಕೋಶಾಧಿಕಾರಿ ಪ್ರಕಾಶ್‌ ಎಸ್‌. ಶೆಟ್ಟಿ  ವಾರ್ಷಿಕ ಲೆಕ್ಕಪತ್ರ ವಾಚಿಸಿದರು. 2021-2022ನೇ ಸಾಲಿನ ಆಂತರಿಕ ಲೆಕ್ಕ ಪರಿಶೋಧಕರಾಗಿ ರಘುನಾಥ ಪೂಜಾರಿ ಮತ್ತು ಲೆಕ್ಕ ಪರಿಶೋಧಕರಾಗಿ ಸಿಎ ಸುರೇಂದ್ರ ಶೆಟ್ಟಿ, ಎಸ್‌. ಕೆ. ಶೆಟ್ಟಿ ಕಂಪೆನಿ ಚಾರ್ಟರ್ಡ್‌ ಅಕೌಂಟೆಂಟ್‌ ಅವರನ್ನು ನೇಮಿಸಲಾಯಿತು.

ಸಾಧಕರಿಗೆ ಸಮ್ಮಾನ:

ಈ ಸಂದರ್ಭ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸಂಘದ ಸದಸ್ಯರಾದ ಪ್ರಶಾಂತ್‌ ಶೆಟ್ಟಿ  ಮತ್ತು ರಾಧಿಕಾ ಶೆಟ್ಟಿ  ದಂಪತಿಯ ಪುತ್ರಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಆ್ಯತ್ಲೆಟಿಕ್‌ ಕ್ರೀಡಾಪಟು ಪ್ರಾಪ್ತಿ ಪ್ರಶಾಂತ್‌ ಶೆಟ್ಟಿ  ಮತ್ತು ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್‌ ಕ್ರೀಡೆಯಲ್ಲಿ ಕಂಚಿನ ಪದಕ, ಮಹಾರಾಷ್ಟ್ರ ರಾಜ್ಯ ಹಾಗೂ ಮುಂಬಯಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 7 ಬಾರಿ ಚಾಂಪಿಯನ್‌ ಪ್ರಶಸ್ತಿಗೆ ಭಾಜನರಾದ ಸಂಘದ ಸದಸ್ಯರಾದ ಬಾಬು ಶೆಟ್ಟಿ ಮತ್ತು ಇಂದಿರಾ ಶೆಟ್ಟಿ ದಂಪತಿಯ ಪುತ್ರ ಪ್ರಸಾದ್‌ ಬಾಬು ಶೆಟ್ಟಿ ಅವರನ್ನು ಪದಾಧಿಕಾರಿಗಳು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛವನ್ನಿತ್ತು ಗೌರವಿಸಿದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ಸಂಘದ ವತಿಯಿಂದ ಆಯೋಜಿಸಲಾದ ಕೇರಂ, ಚೆನ್ನೆಮಣೆ ಒಳಾಂಗಣ ಕ್ರೀಡಾಕೂಟದಲ್ಲಿ ವಿಜೇತರಾದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಸದಸ್ಯ ಸೂರಪ್ಪ ಕುಂದರ್‌ ವಿಜೇತರ ಹಾಗೂ ಪ್ರತಿಭಾನ್ವಿತರ ಹೆಸರು ವಾಚಿಸಿದರು. ರಂಜನ್‌ ಪೂಜಾರಿ ಸಹಕರಿಸಿದರು.

ಜತೆ ಕೋಶಾಧಿಕಾರಿ ಶಂಕರ್‌ ಆರ್‌. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್‌ ಕೆ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತಿ ಬಾಲಚಂದ್ರ ರಾವ್‌ ಉಪಸ್ಥಿತರಿದ್ದರು. ಬಂಟ್ಸ್‌ ಲಾ ಫೋರಂನ ಅಧ್ಯಕ್ಷ ಅಡ್ವೊಕೇಟ್‌ ಡಿ. ಕೆ. ಶೆಟ್ಟಿ, ನ್ಯಾಯವಾದಿ ರಾಮ್‌ಪ್ರಸಾದ್‌ ಸಿ. ಶೆಟ್ಟಿ, ಜೋಸೆಫ್‌ ರೋಡ್ರಿಗಸ್‌ ಇನ್ನಿತರ ಹಲವಾರು ಗಣ್ಯ ಸದಸ್ಯರು ಸಭೆಯಲ್ಲಿ  ಭಾಗವಹಿಸಿದ್ದರು.

ಸಂಘದ ಕನ್ನಡ ಕಲಿಕೆ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಗೌರವ ಪ್ರಧಾನ ಕಾರ್ಯದರ್ಶಿ ಶಂಕರ್‌ ಡಿ. ಪೂಜಾರಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಅನಿಲ್‌ ಎಸ್‌. ಪೂಜಾರಿ ವಂದಿಸಿದರು.

ಕಳೆದ 20 ವರ್ಷಗಳಲ್ಲಿ  ಮಲಾಡ್‌ ಕನ್ನಡ ಸಂಘದ ವೆಶಿಷ್ಟ್ಯಪೂರ್ಣ ಕಾರ್ಯಕ್ರಮಗಳ ಬಗ್ಗೆ ಅಭಿಮಾನವಾಗುತ್ತದೆ. ಭವಿಷ್ಯದಲ್ಲಿ ಇನ್ನಷ್ಟು ಜನಪರ ಕಾರ್ಯಕ್ರಮಗಳು ನಡೆಯಲು ನಾವೆಲ್ಲರೂ ಸಹಕರಿಸೋಣ.ಪ್ರೇಮ್‌ನಾಥ್‌ ಸಾಲ್ಯಾನ್‌ ಆಡಳಿತ ನಿರ್ದೇಶಕರು, ಅಭ್ಯುದಯ ಕೋ-ಆಪರೇಟಿವ್‌ ಬ್ಯಾಂಕ್‌

ಮಲಾಡ್‌ ಕನ್ನಡ ಸಂಘವು ಪ್ರಾರಂಭದಿಂದಲೂ ಜನಪ್ರಿಯ ಕಾರ್ಯಕ್ರಮಗಳೊಂದಿಗೆ ಪ್ರಶಂಸೆಗೆ ಪಾತ್ರವಾದ ಸಂಸ್ಥೆಯಾಗಿದೆ. ನೂತನ ಅಧ್ಯಕ್ಷರ ಸಾರಥ್ಯದಲ್ಲಿ ಇನ್ನಷ್ಟು ಅಭಿವೃದ್ಧಿಪರ ಕೆಲಸಗಳು ಜರಗಲಿ.ಜಯಂತ್‌ ಎಸ್‌. ಶೆಟ್ಟಿ ಮಾಜಿ ಅಧ್ಯಕ್ಷರು, ಬಾಂಬೆ ಬಂಟ್ಸ್‌ ಅಸೋಸಿಯೇಶನ್‌

-ಚಿತ್ರ-ವರದಿ : ರಮೇಶ್‌ ಉದ್ಯಾವರ

ಟಾಪ್ ನ್ಯೂಸ್

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

School-Chikki

Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.