ಅದಮಾರು ಮಠದಲ್ಲಿ 22ನೇ ವಾರ್ಷಿಕ ರಾಮ ನವಮಿ ಸಂಭ್ರಮಕ್ಕೆ ಸಿದ್ಧತೆ


Team Udayavani, Mar 20, 2018, 3:39 PM IST

1903mum04.jpg

ಮುಂಬಯಿ: ರಾಮಾಯಣ ಕಾಲದಲ್ಲಿ ಒಂದೇ ಬಣ್ಣದ ಚಿನ್ನದ ಜಿಂಕೆ ಎಷ್ಟೆಲ್ಲಾ ಕೆಲಸ ಮಾಡಿತ್ತು. ಆದರೆ ಇಂದು ನಮ್ಮ ಮನೆಗಳಲ್ಲಿ ಚಿನ್ನದ ಜಿಂಕೆಯ ಜಾಗದಲ್ಲಿ ಬಣ್ಣದ ಪೆಟ್ಟಿಗೆ ನೆಲೆಸಿದೆ. ಇದು ನಮ್ಮ ಮನೆ ಮನಗಳನ್ನೆಲ್ಲಾ ಆಕ್ರಮಿಸಿದೆ. ಆಗಿನ ಕಾಲದಲ್ಲಿ ರಾಮನಿಂತ ಹತನಾಗಿರತಕ್ಕಂತಹ ಚಿನ್ನದ ಜಿಂಕೆ ಪುನರ್ಜನ್ಮ ಪಡಕೊಂಡು ಹೊಸ ರೂಪಾವತರಿಸಿ ಬಂದಿದೆ. ಅವಾಗ ರಾಮನಿಂದ ಸೀತೆಯನ್ನು ಅಪಹರಿಸಿ ಬೇರ್ಪಡಿಸಿದಂತೆ ಈಗಿನ ಕಾಲದ ಚಿನ್ನದ ಜಿಂಕೆ ಎಂಬ ಟಿವಿಯು ಮನುಕುಲದಲ್ಲಿನ ಅಭಿ ಮನ್ಯವಾದ ಶಬ್ದಗಳನ್ನೇ ಅಪಹರಿಸಿದೆ. ಆಗಿನ ಕಾಲದಲ್ಲಿ ತಾಳಕಟ್ಟಿ ಪ್ರತಿಯೊಂದೂ ಮನೆಯಲ್ಲಿ ಭಜನೆ ಮಾಡಿಕೊಳ್ಳುತ್ತಿದ್ದರು. ಹೆಣ್ಣುಮಕ್ಕಳು ಭಜನೆ ಮಾಡುತ್ತಿದ್ದರು.  ಗಂಡಸರು ವಿಷ್ಣುಸಹಸ್ರ ನಾಮವನ್ನು ಸಂಧ್ಯಾವಂದನೆ ಮಾಡಿಕೊಂಡು ಪೂಜೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಯಾವಾಗ ಬಣ್ಣದ ಪೆಟ್ಟಿಗೆ ಎಂಬ ಚಿನ್ನದ ಜಿಂಕೆ ರೂಪಿತ ಟಿವಿ ಬಂತೋ ಅವಾಗಲೇ ಎಲ್ಲಾ ವೈದಿಕ ಶಬ್ದಗಳು ಮಾಯವಾಗಿ ಮನುಜ ಬದುಕೇ ಆಧುನೀಕರಣವಾಯಿತು ಎಂದು ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಇವರು ನುಡಿದರು.

ಮಾ. 18ರಂದು  ಸಂಜೆ  ಅಂಧೇರಿ ಪಶ್ಚಿಮದ ಇರ್ಲಾದ ಶ್ರೀ  ಅದಮಾರು ಮಠದ ಮುಂಬಯಿ ಶಾಖೆಯಲ್ಲಿ 2018ನೇ ವಾರ್ಷಿಕ ಶ್ರೀ ರಾಮನವಮಿ ಉತ್ಸವದ ಪೂರ್ವ ಸಿದ್ಧತಾ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ವಾರ್ಷಿಕ ರಾಮಾಯಣ ಪ್ರವಚನ ನೀಡಿದ ಶ್ರೀಗಳು, ಮಾನವ ಜೀವನ ಸಂಚಾರವೇ ರಾಮಾಯಣ ಆಗಿದೆ. ಇಡೀ ರಾಮಚಂದ್ರನ ಚಿತ್ರಣ ಮಾಡಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ. ಆದರೆ ಅದರ ಸತ್‌ಚಿಂತನೆ ದಿನಾ ಮಾಡುವ ಮೂಲಕ ಶ್ರೀ  ದೇವರನ್ನು ಗ್ರಾಮಿÂಬಹುದು. ಜೀವನ ತಿದ್ದಲು ಬೇಕಾದ ಲಕ್ಷ್ಮಣವನ್ನು ರೂಪಿಸಿರಿ. ಸದ್ಯ ಜನತೆ ಆಲಸ್ಯ ಸಹಜವಾಗಿ ಬಿಟ್ಟಿದ್ದಾರೆ. ಇದರಿಂದ ಮುಕ್ತರಾಗಿ ಚಟುವಟಿಕೆಗಳಿಂದ ಕಾರ್ಯಾಚರಿಸಿ ಉತ್ಸುಕರಾಗಿ ಜೀವನ ಪಾವನಗೊಳಿಸಿ ಎಂದರು.

ಕಾರ್ಯಕ್ರಮದಲ್ಲಿ ವಾಸುದೇವ ಉಡುಪ, ಸಾಬಕ್ಕ ಖೇಡ್ಕರ್‌, ಜ್ಯೋತಿ ಆರ್‌.ಎಲ್‌. ಭಟ್‌, ಸುಧೀರ್‌ ಎಲ್‌. ಶೆಟ್ಟಿ, ಅನಂತ ಪದ್ಮನಾಭನ್‌ ಕೆ. ಪೋತಿ, ಕಲ್ಲಾಜೆ ರಾಧಾಕೃಷ್ಣ ಭಟ್‌, ವಿಜಯಲಕ್ಷ್ಮೀ ಸುರೇಶ್‌ ರಾವ್‌, ವಾಣಿ ರಾಜೇಶ್‌ ಭಟ್‌, ಮಾ|  ಶ್ರೀಶ ಆರ್‌. ಭಟ್‌, ರಾಜೇಶ್‌ ಭಟ್‌ ಜೆರಿಮೆರಿ, ಹರಿದಾಸ ಜೋಯಿಸ, ವಸಂತ್‌ ಸಾಲ್ಯಾನ್‌, ಜನಾರ್ದನ ಅಡಿಗ, ಗೀತಾ ಆರ್‌.ಎಲ್‌ ಭಟ್‌, ಪುರಂದರ್‌ ಜೋಯಿಸ, ಗೋಪಾಲ ಭಟ್‌ ಭಾಯಂದರ್‌ ಸಹಿತ  ಪುರೋಹಿತರು, ಗಣ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಪ್ರವಚನ ಕಾರ್ಯಕ್ರಮದ ಮುನ್ನ ನೃತ್ಯ ರಂಜನಿ ಫೈನ್‌ ಆರ್ಟ್ಸ್ ಕಾಂದಿವಲಿ ಇದರ ಗುರು ರೇವತಿ ಶ್ರೀನಿವಾಸನ್‌ ರಾಘವನ್‌ ನಿರ್ದೇಶನದಲ್ಲಿ ಪ್ರತಿಭಾನ್ವಿತ ಕಲಾವಿದರಿಂದ ಭರತನಾಟ್ಯ ಪ್ರದರ್ಶನಗೊಂಡಿತು. ಶ್ರೀಗಳು ಮಠದಲ್ಲಿನ ಶ್ರೀದೇವರಿಗೆ ಪೂಜೆ ನೆರವೇರಿಸಿ ಉಪಸ್ಥಿತ ಭಕ್ತರಿಗೆ ಮಂತ್ರಾಕ್ಷತೆ ನೀಡಿ ಹರಸಿದರು. ಅದಮಾರು ಮಠ ಮುಂಬಯಿ ಶಾಖಾ ಪ್ರಬಂಧಕ ಪಡುಬಿದ್ರಿ ವಿ. ರಾಜೇಶ್‌ ರಾವ್‌ ಶ್ರೀಗಳನ್ನು ಸ್ವಾಗತಿಸಿದರು. ಶ್ರೀನಿವಾಸ ಭಟ್‌ ಪರೇಲ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ರಾಮನವಮಿ ಪೂರ್ವ ಸಿದ್ಧತೆಯಾಗಿಸಿ ಮಾ. 18ರಿಂದ 25ರವರೆಗೆ ಪ್ರವಚನ ಕಾರ್ಯಕ್ರಮ ನಡೆಯಲಿದೆ. ರಾಮನವಮಿ ದಿನ ಬೆಳಗ್ಗೆ ಪಂಚಾಮೃತ ಅಭಿಷೇಕ, ಪೂರ್ವಾಹ್ನ ಚಾರೊRàಪ್‌ ಕನ್ನಡಿಗರ ಬಳಗದಿಂದ ಹರಿ ಭಜನೆ, ವಾಗೆªàವಿ ಭಜನ ಮಂಡಳಿಯಿಂದ ದೇವರ ನಾಮ. ಮಧ್ಯಾಹ್ನ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಮತ್ತು ಅಮಿತಾ ಕಲಾ ಮಂದಿರ ಮೀರಾರೊಡ್‌ ಸಂಸ್ಥೆಯಿಂದ ಭರತನಾಟ್ಯ, ದಿನೇಶ್‌ ಕೋಟ್ಯಾನ್‌ ಅವರಿಂದ ಸ್ಯಾಕೊÕಫೋನ್‌ ವಾದನ, ಅರ್ಪಿತಾ ಪೂಜಾರಿ ಅವರಿಂದ ಭರತನಾಟ್ಯ, ಸಂಜೆ ನಾಗೇಶ್‌ ಮೀರಾರೋಡ್‌ ಅವರಿಂದ ಲವಕುಶ ಯಕ್ಷಗಾನ ಪ್ರಸಂಗ, ವಿಠಲ ಭಜನಾ ಮಂಡಳಿಯಿಂದ ಹರಿ ಭಜನೆ, ಶ್ರೀನಿವಾಸ ಭಟ್‌ ಪರೇಲ್‌ ಅವರಿಂದ ರಾಮಾಯಣ ಹರಿಕಥೆ, ಸಂಜೆ  ಪಲ್ಲಕಿ ಉತ್ಸವ, ಸಂಜೆ 7ರಿಂದ ರಾತ್ರಿ 8ರ ವರೆಗೆ ಶ್ರೀ ವಿಶ್ವಪ್ರಿಯತೀರ್ಥರಿಂದ ವಿಶೇಷ ಪ್ರವಚನ ಅನಂತರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.   ಆ ಪ್ರಯುಕ್ತ ಮಹಾನಗರದಲ್ಲಿನ ಭಕ್ತರೆಲ್ಲರೂ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಗಳಾಗಿ ಸಹಕರಿಸುವಂತೆ ಶ್ರೀ  ಅದಮಾರು ಮಠ ಮುಂಬಯಿ ಶಾಖೆಯ ದಿವಾಣ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.