ಮೀರಾಗಾಂವ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 27ನೇ ವಾರ್ಷಿಕ ಮಹೋತ್ಸವ
Team Udayavani, Jun 17, 2018, 5:10 PM IST
ಮುಂಬಯಿ: ದೇವರ ಉತ್ಸವಗಳು ಜಾತಿ, ಮತ, ಪಂಥಗಳನ್ನು ಒಗ್ಗೂಡಿಸುವ ವಿಶೇಷತೆ ಹೊಂದಿವೆ. ನಾಡಿನ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿರಿಮೆಯ ದೇವಸ್ಥಾನ ಶಕ್ತಿ ಕೇಂದ್ರವಾಗಿದೆ. ಇಲ್ಲಿನ ಯಜ್ಞ, ಯಾಗಾದಿಗಳು ಪ್ರಕೃತಿ ಶುದ್ಧೀಕರಣದೊಂದಿಗೆ ಮಾನವನ ಧನಾತ್ಮಕ ಚಿಂತನೆಗಳನ್ನು ವೃದ್ಧಿಸುತ್ತವೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾಗಾಂವ್ ಇದರ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾದìನ್ ಭಟ್ ಅವರು ನುಡಿದರು.
ಜೂ. 14ರಂದು ಮೀರಾರೋಡ್ ಪೂರ್ವದ ಮೀರಾಗಾಂವ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 27 ನೇ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಮೀರಾರೋಡ್ ಪರಿಸರದ ಭಕ್ತಾದಿಗಳ ಅಪೂರ್ವ ಸಹಕಾರದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಪವಿತ್ರ ಕ್ಷೇತ್ರ ವಾಗಿ ಬಿಂಬಿತವಾಗಿದೆ. ತವರೂರ ಸಂಸ್ಕೃತಿಯಂತೆ ಇಲ್ಲಿ ಪ್ರತಿಯೊಂದು ದೇವತಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 27 ವರ್ಷಗಳನ್ನು ಪೂರೈಸಿದ ದೇವಸ್ಥಾನದ ಭಕ್ತಾದಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರು, ಪರಿವಾರ ದೇವರುಗಳಾದ ಶ್ರೀದುರ್ಗೆ, ಶ್ರೀಮಹಾಗಣಪತಿ, ಶ್ರೀ ಆಂಜನೇಯ ಮತ್ತು ನವಗ್ರಹಗಳು ಸುಖ, ಸಮೃದ್ಧಿ, ಶಾಂತಿಯನ್ನು ಕರುಣಿಸಲಿ ಎಂದು ನುಡಿದು ಹಾರೈಸಿದರು.
ದೇವಸ್ಥಾನದ ಸ್ಥಾಪಕ ಕೃಷ್ಣ ಶೆಟ್ಟಿ, ಆಡಳಿತ ಟ್ರಸ್ಟಿ ಶಿಮಂತೂರು ಮಜಲಗುತ್ತು ರಂಜನ್ ಶೆಟ್ಟಿ ಬಾಬಾ, ಸಾಣೂರು ಸಾಂತಿಂಜ ಜನಾದìನ ಭಟ್ ಅವರ ಮುಂದಾಳತ್ವದಲ್ಲಿ ವೇದಮೂರ್ತಿ ಕಾಪು ಕಲ್ಯ ರಜನೀಶ್ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಗಣಹೋಮ, ದುರ್ಗಾ ಹೋಮ, ನವಕ ಪ್ರಧಾನ ಹೋಮ, ಅಭಿಷೇಕ, ಪ್ರಸನ್ನ ಪೂಜೆ, ರುದ್ರಾಭಿಷೇಕ, ನವಕ ಪ್ರಧಾನ ಹೋಮ, ಪ್ರಸನ್ನ ಪೂಜೆ, ಮಹಾರಂಗ ಪೂಜೆ ಇನ್ನಿತರ ಪೂಜಾ ಕೈಂಕರ್ಯಗಳು ಪ್ರಧಾನ ಅರ್ಚಕ ಮಾಧವ ಭಟ್ ಅವರ ಪೌರೋಹಿತ್ಯದಲ್ಲಿ ನೆರವೇರಿತು. ಸಮಾರಂಭದಲ್ಲಿ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಮಾಧವ ಭಟ್ ಅವರು ನೀಡಿರುವ ಶ್ರೀದೇವರ ಪಾಣಿ ಪೀಠಕ್ಕೆ ಬೆಳ್ಳಿ ಕವನ ಸಮರ್ಪಿಸಲಾಯಿತು.
ರಾತ್ರಿ ಕುಂಟಾಡಿ ಸುರೇಶ್ ಭಟ್ ಅವರಿಂದ ದೇವರ ಬಲಿ ಉತ್ಸವ ನಡೆಯಿತು.
ಕೊನೆಯಲ್ಲಿ ಜರಗಿದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಶ್ರೀ ಮಹಾಲಿಂಗೇಶ್ವರ ಟ್ರಸ್ಟ್ನ ಸರ್ವ ಸದಸ್ಯರು, ಮೀರಾರೋಡ್ ಪರಿಸರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕನ್ನಡೇತರರು, ರಾಜಕೀಯ ಮುಖಂಡರು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಅರ್ಚಕ ವೃಂದದಲ್ಲಿ ಸಾಂತಿಂಜ ಸುಬ್ರಹ್ಮಣ್ಯ ಭಟ್, ವಿಟuಲ್ ಭಟ್, ವಾಸುದೇವ ಭಟ್, ದೇವರಾಜ್ ನೆಲ್ಲಿ, ನಾಗರಾಜ ಭಟ್, ರಾಘವೇಂದ್ರ ಭಟ್, ಬಾಲಚಂದ್ರ ಭಟ್, ಅನಂತ ಭಟ್, ಮಧ್ವರಾಜ್ ಭಟ್, ಶ್ರೀನಿವಾಸ ಭಟ್, ಯತಿರಾಜ ಉಪಾಧ್ಯಾಯ, ಯಕ್ಷಗಾನ ಭಾಗವತಿಕೆಯಲ್ಲಿ ಎಳ್ಳಾರೆ ಶಂಕರನಾರಾಯಣ ನಾಯಕ್, ಭರತನಾಟ್ಯನಲ್ಲಿ ಖುಷಿ ಶೆಟ್ಟಿ, ಭಜನೆಯಲ್ಲಿ ಶ್ರೀಧರ ಶೆಟ್ಟಿ ತಂಡದವರು ಸಹಕರಿಸಿದರು.
ಚಿತ್ರ-ವರದಿ : ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.