ಗ್ರಾಹಕಸ್ನೇಹಿ ಸೇವೆಯಿಂದ ಸೊಸೈಟಿ ಅಭಿವೃದ್ಧಿಯತ್ತ: ರತ್ನಾಕರ ಶೆಟ್ಟಿ ಮುಂಡ್ಕೂರು
ಬಂಟರ ಸಂಘ ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ 32ನೇ ವಾರ್ಷಿಕ ಮಹಾಸಭೆ
Team Udayavani, Mar 9, 2021, 6:28 PM IST
ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಸಂಚಾಲಕತ್ವದ ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಇದರ 32ನೇ ವಾರ್ಷಿಕ ಮಹಾಸಭೆಯು ಮಾ. 7ರಂದು ಮಾತೃಭೂಮಿಯ ಕೋ-ಆಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ಮುಂಡ್ಕೂರು ರತ್ನಾಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕುರ್ಲಾ ಪೂರ್ವದ ಬಂಟರ ಭವನದ ಸಭಾಗೃಹದಲ್ಲಿ ನಡೆಯಿತು.
ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಝೂಮ್‌ಆ್ಯಪ್ ಮುಖಾಂತರ ಸದಸ್ಯರಿಗೆ ಪಾಲ್ಗೊ ಳ್ಳಲು ಅವಕಾಶ ನೀಡಲಾಗಿತ್ತು. ಪ್ರಾರಂಭದಲ್ಲಿ ಮುಂಡ್ಕೂರು ರತ್ನಾಕರ ಶೆಟ್ಟಿ ದೀಪಪ್ರಜ್ವಲಿಸಿ ಉದ್ಘಾ ಟಿಸಿ ಮಾತನಾಡಿ, ಸಂಪೂರ್ಣ ತೃಪ್ತಿಕರವಾದ ಸೇವೆ ನೀಡುವುದ ರೊಂದಿಗೆ ಬ್ಯಾಂಕ್‌ಗಳು ಗ್ರಾಹಕರಿಗೆ ನೀಡುವ ಸೇವೆ ರೀತಿಯಲ್ಲಿ ಸಂಪೂರ್ಣ ಸೌಲಭ್ಯಗಳನ್ನು ಮಾತೃ ಭೂಮಿ ಕೋ-ಆಪರೇಟಿವ್ ಸೊಸೈಟಿ ನೀಡುತ್ತಿದೆ. ಈ ಉದ್ದೇಶ ದಿಂದಲೇ ಸಂಸ್ಥೆಯ ಕಾರ್ಯ ವ್ಯಾಪ್ತಿಯನ್ನು ಮುಂಬಯಿ ಮಹಾನಗರ, ಉಪನಗರದ ವಿವಿಧ ಕಡೆಗಳಲ್ಲಿ ಮಾತ್ರವಲ್ಲದೆ ಥಾಣೆ, ಕಲ್ಯಾಯ್, ಪುಣೆ, ನಾಸಿಕ್, ರಾಯ ಘಡ ಜಿಲ್ಲೆಗಳಲ್ಲೂ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಕೋವಿಡ್ ಸಂದರ್ಭದಲ್ಲೂ ಮಾತೃ ಭೂಮಿ ಸೊಸೈಟಿ ಗ್ರಾಹಕ ರಿಗೆ ಉತ್ತಮ ಸೇವೆಯನ್ನು ನೀಡುವುದ ರೊಂದಿಗೆ ಹೆಚ್ಚಿನ ಠೇವಣಿ ಸಂಗ್ರಹಿ ಸುವಲ್ಲೂ ಯಶಸ್ವಿಯಾಗಿದೆ. ಅಗತ್ಯ ಇರುವವರಿಗೆ ಠೇವಣಿಯನ್ನು ಹಿಂದಿರುಗಿಸಲಾಗಿದೆ. ಈ ವರ್ಷ ಗ್ರಾಹಕರಿಗೆ ಶೇ. 10ರಷ್ಟು ಡಿವಿ ಡೆಂಡ್ ಘೋಷಿಸಲಾಗಿದೆ. ಇನ್ನು ಮುಂದೆಯೂ ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ಎಲ್ಲರ ಸಹಕಾರ, ಮಾರ್ಗದರ್ಶನಗಳ ಅಗತ್ಯವಿದ್ದು, ಇದು ದೇಶದಲ್ಲೇ ಅತ್ಯುತ್ತಮ ಕೋ- ಆಪರೇಟಿವ್ ಕ್ರೆಡಿಟ್ ಸೊಸೈಟಿಯಾ ಗುವುದರಲ್ಲಿ ಎಲ್ಲರ ಸಹಕಾರವನ್ನು ಮರೆಯುವಂತಿಲ್ಲ ಎಂದರು.
ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಮಾತನಾಡಿ, ಸಾಮಾನ್ಯ ಜನರಿಗೆ ಸಹಾಯವಾಗುವ ರೀತಿಯಲ್ಲಿ ಮಾತೃಭೂಮಿ ಕ್ರೆಡಿಟ್ ಸೊಸೈಟಿಯಿಂದ ಸೇವೆಗಳು ದೊರೆಯಬೇಕು. ಈ ನಿಟ್ಟಿನಲ್ಲಿ ನಾವು ನಮ್ಮ ಕಾರ್ಯ ಯೋಜನೆಗಳನ್ನು ನಿರ್ವಹಿಸಬೇಕಾದ ಅಗತ್ಯವಿದೆ ಎಂದು ತಿಳಿಸಿ ಸೊಸೈಟಿಯ ಅಭಿವೃದ್ಧಿಗೆ ಸಮಾಜ ಬಾಂಧ ವರ ಸಹಕಾರ ಸದಾ ಇರಲಿ ಎಂದರು.
ಕಾರ್ಯದರ್ಶಿ ಸಿಎ ರಮೇಶ್ ಎ. ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಪ್ರವೀಣ್ ಬಿ. ಶೆಟ್ಟಿ ವಾರ್ಷಿಕ ಲೆಕ್ಕಪತ್ರದ ವರದಿ ಮಂಡಿಸಿದರು. ಪ್ರಸ್ತುತ ಹಣಕಾಸು ವರ್ಷದ ಆಂತರಿಕ ಲೆಕ್ಕ ಪರಿಶೋಧಕ ರನ್ನಾಗಿ ಆರ್. ಜಿ. ಶೆಟ್ಟಿ ಆ್ಯಂಡ್ ಕಂಪೆನಿ ಹಾಗೂ ಲೆಕ್ಕ ಪರಿಶೋಧಕರನ್ನಾಗಿ ಸಿಎ ಹರೀಶ್ ಡಿ. ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಬಂಟರ ಸಂಘದ ನೂತನ ಪದಾಧಿಕಾರಿಗಳಿಗೆ, ಮಾತೃಭೂಮಿ ಕೋ – ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಯಶಸ್ಸಿಗೆ ಸಹಕರಿ ಸಿದ ಮಹನೀಯರನ್ನು ಶಾಲು ಹೊದೆಸಿ, ಪುಷ್ಪಗುತ್ಛವನ್ನಿತ್ತು ಗೌರವಿಸಲಾಯಿತು.
ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಮುರಳಿ ಕೆ. ಶೆಟ್ಟಿ , ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಉಪಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ , ನಿರ್ದೇಶಕರಾದ ಮಹೇಶ್ ಎಸ್. ಶೆಟ್ಟಿ, ಡಾ| ಆರ್. ಕೆ. ಶೆಟ್ಟಿ, ಉಮಾ ಕೆ. ಶೆಟ್ಟಿ , ಸುಜಾತಾ ಜಿ. ಶೆಟ್ಟಿ, ಸಂತೋಷ್ ಎಂ. ಜವಾಂದಲೆ, ರಿಕವರಿ ಸಮಿತಿಯ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಶೆಟ್ಟಿ ಬೊಳ ಮೊದಲಾದವರು ಉಪಸ್ಥಿತರಿದ್ದರು.
ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಮಾಜಿ ಕಾರ್ಯಾಧ್ಯಕ್ಷರಾದ ಕೆ. ಡಿ. ಶೆಟ್ಟಿ , ಸಿಎ ಶಂಕರ್ ಶೆಟ್ಟಿ ಹಾಗೂ ಸಿಎ ಐ. ಆರ್. ಶೆಟ್ಟಿ, ಮುಂಡಪ್ಪ ಎಸ್. ಪಯ್ಯಡೆ ಮೊದಲಾದವರು ಸಲಹೆ-ಸೂಚನೆಗಳನ್ನು ನೀಡಿದರು. ಕಾರ್ಯದರ್ಶಿ ಸಿಎ ರಮೇಶ್ ಎ. ಶೆಟ್ಟಿ ವಂದಿಸಿದರು.
ಪ್ರಸಕ್ತ ಸಾಲಿನಲ್ಲಿ ಬ್ಯಾಂಕೋ ಅವಾರ್ಡ್ :
2020ರ ಮಾ. 31ರ ವರೆಗಿನ ಮಾತೃಭೂಮಿಯ ಷೇರು ಬಂಡವಾಳ 2,420.11 ಲಕ್ಷ ರೂ. ಗಳಿಗೆ ಏರಿದ್ದು, ಒಟ್ಟು ಸಂಗ್ರಹ 2,081.36 ಲಕ್ಷ ರೂ., ಒಟ್ಟು ಠೇವಣಿ 9,554.92 ಲಕ್ಷ ರೂ.ಗಳಿಗೆ ತಲುಪಿದೆ. ಒಟ್ಟು ಮುಂಗಡ ಮೊತ್ತ 10,550.16 ಲಕ್ಷ ರೂ., ವರ್ಕಿಂಗ್ ಕ್ಯಾಪಿಟಲ್ 14,780.81 ಲಕ್ಷ ರೂ., ನಿವ್ವಳ ಲಾಭ 395.09 ಲಕ್ಷ ರೂ., ನೆಟ್ ಎನ್‌ಪಿಎ ಶೇ. 14.75ರಷ್ಟಿದೆ. ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ಮುಂಬಯಿ ಮಹಾನಗರ ಅಲ್ಲದೆ ಇನ್ನಿತರ ಉಪನಗರ, ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಎಲ್ಲ ಶಾಖೆಗಳಿಗೆ ಮಾತೃಭೂಮಿ ಆಡಳಿತವು ಈಗಾಗಲೇ ಸ್ವತಂತ್ರ ಅಧಿಕಾರ ನೀಡಿರುವುದಲ್ಲದೆ, ಯಾವುದೇ ಬ್ಯಾಂಕ್ ಗ್ರಾಹಕರಿಗೆ ನೀಡುವ ಸೇವೆಗೆ ಅನುಗುಣವಾಗಿ ಸಂಪೂರ್ಣ ಸೌಲಭ್ಯ ಒದಗಿಸಲು ಶಾಖೆಗಳಿಗೆ ಸ್ವಾಯತ್ತತೆ ಕಲ್ಪಿಸಲಾಗಿದೆ. ಸೊಸೈಟಿ ಪ್ರಸಕ್ತ ಸಾಲಿನಲ್ಲಿ ಬ್ಯಾಂಕೋ ಅವಾರ್ಡ್ ಅನ್ನು ಅತೀ ಹೆಚ್ಚಿನ ಠೇವಣಿ ಸಂಗ್ರಹಿಸಿದಕ್ಕಾಗಿ ಪಡೆದಿದೆ. ಸಂಸ್ಥೆಯನ್ನು ಆರ್ಥಿಕವಾಗಿ ಸಶಕ್ತಗೊಳಿಸಿ, ಅದರ ಅಭ್ಯುದಯಕ್ಕಾಗಿ ಕಾರಣರಾದ ಪ್ರಾರಂಭದ ದಿನಗಳಿಂದ ಇಂದಿನವರೆಗಿನ ಕಾರ್ಯಾಧ್ಯಕ್ಷರು, ಆಡಳಿತ ನಿರ್ದೇಶಕರು, ಸಲಹಾ ಸಮಿತಿಯ ಸದಸ್ಯರ ಸೇವೆ ಮರೆಯುವಂತಿಲ್ಲ.
ಚಿತ್ರ-ವರದಿ : ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.