ವಾಪಿ ಕನ್ನಡ ಸಂಘದ 39ನೇ ವಾರ್ಷಿಕೋತ್ಸವ ಸಮಾರಂಭ
Team Udayavani, Feb 26, 2019, 1:18 PM IST
ವಾಪಿ: ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣವಾಗುತ್ತದೆ. ನಮ್ಮ ಸ್ವಯಂ ಆಚರಣೆಯೇ ನಮ್ಮ ವ್ಯಕ್ತಿತ್ವದ ಹೆಗ್ಗುರುತಾಗಿದೆ. 39 ವರ್ಷಗಳ ಅಮೋಘ ಸಂಸ್ಕೃತಿಯ ಹಾಗೂ ಭಾಷೆ ನುಡಿಯ ರಥವನ್ನು ಎಳೆಯುತ್ತಿರುವ ಹಿರಿಯ ಹಾಗೂ ಎಲ್ಲ ಪದಾಧಿಕಾರಿಗಳಿಗೆ ನನ್ನ ಅನಂತಾನಂತ ಕೃತಜ್ಞತೆಗಳು ಎಂದು ಬೆಂಗಳೂರು ಹೊಟೇಲ್ ಉದ್ಯಮಿ ವಸಂತ ಕುಮಾರ ಶೆಟ್ಟಿ ಬೆಳ್ವೆ ಅವರು ನುಡಿದರು.
ಇತ್ತೀಚೆಗೆ ವಾಪಿ ಕನ್ನಡ ಸಂಘದ ವಿವಿಧೋದ್ದೇಶ ಸಭಾಗೃಹದಲ್ಲಿ ನಡೆದ ವಾಪಿ ಕನ್ನಡ ಸಂಘದ 39ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಜಾತಿ ಮತ ಭೇದವಿಲ್ಲದೆ ಒಗ್ಗಟ್ಟಿನಿಂದ ಸ್ವಂತ ಕಟ್ಟಡದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಡೆಸುತ್ತಿರುವುದು ಶ್ಲಾಘನೀಯ. ಮುಖ್ಯವಾಗಿ ನಾಡು-ನುಡಿಯ ಬಗ್ಗೆ ಮಕ್ಕಳಲ್ಲಿ ಅಭಿಮಾನ ಮೂಡಿಸುವ ಕಾರ್ಯ ಸಂಘ-ಸಂಸ್ಥೆಗಳಿಂದಾಗಬೇಕು ಎಂದರು.
ವಾಪಿ ಕನ್ನಡ ಸಂಘದ ಅಧ್ಯಕ್ಷ ವಿಶ್ವನಾಥ ಭಂಡಾರಿ, ವಿಶ್ವಸ್ಥ ಸಂಜಯ ಮರ್ಬಳ್ಳಿ, ಮಹಿಳಾ ಮುಖ್ಯಸ್ಥೆ ಪ್ರಫುಲ್ಲಾ ಶೆಟ್ಟಿ, ಕೋಶಾಧಿಕಾರಿ ಉದಯ ಸೊಗಲಿ, ಸಂಚಾಲಕ ನಾಗರಾಜ ಶೆಟ್ಟಿ ಮತ್ತು ಗೌರವ ಕಾರ್ಯದರ್ಶಿ ಮಮತಾ ಮಲ್ಹಾರ ಹಾಗೂ ಅತಿಥಿಯಾಗಿ ಪಾಲ್ಗೊಂಡ ವಸಂತ ಬೆಳ್ಳೆ ಅವರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
ಅರ್ಪಿತಾ ಚಿಕ್ಕೆರೂರ ಅವರ ಪ್ರಾರ್ಥನೆಯ ನಂತರ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರ ಹೀನಾಯ ಕೃತ್ಯಕ್ಕೆ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿಯನ್ನು ಅರ್ಪಿ ಸಲಾಯಿತು.
ಸಮಾರಂಭದ ಅಧ್ಯಕ್ಷ ವಿಶ್ವನಾಥ ಭಂಡಾರಿ ಅವರು ಸ್ವಾಗತಿಸಿದರು. ಪ್ರತಿಭಾ ಪ್ರಯಾಗ ಅವರು ಈ ವರ್ಷದಲ್ಲಿ ಅಗಲಿದ ಕನ್ನಡದ ಮಹಾನ್ ವ್ಯಕ್ತಿಗಳನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಗೌರವ ಕಾರ್ಯದರ್ಶಿ ಮಮತಾ ಮಲ್ಹಾರ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿಗಳಾದ ಉದಯ ಸೊಗಲಿಯವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಮುಖ್ಯ ಅತಿಥಿಗಳನ್ನು ನಿಶಾ ಶೆಟ್ಟಿ ಪರಿಚಯಿಸಿದರು. ಅತಿಥಿ -ಗಣ್ಯರುಗಳನ್ನು ಶಾಲು, ಫಲತಾಂಬೂಲ, ನೆನಪಿನ ಕಾಣಿಕೆ ಮತ್ತು ಸಮ್ಮಾನ ಪತ್ರವನ್ನು ನೀಡಿ ಸಂಘದ ವತಿಯಿಂದ ಗೌರವಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳ ಸಮ್ಮಾನವನ್ನು ಪರಮೇಶ್ವರ ಬೆಳಮಗಿ ಅವರು ನಡೆಸಿ ಕೊಟ್ಟರು. ವರ್ಷವಿಡೀ ನಡೆದ ಎಲ್ಲ ಕಾರ್ಯಕ್ರಮಗಳ ಸಂಚಾಲಕರುಗಳಿಗೆ ಅಧ್ಯಕ್ಷರು ಪುಷ್ಪ ಗುತ್ಛವನ್ನಿತ್ತು ಅಭಿನಂದಿಸಿದರು. ಈ ಸಂದರ್ಭ 2017 -2019ನೇ ಸಾಲಿನ ಎರಡು ವರ್ಷಗಳ ಕಾಲ ಸಂಘಕ್ಕೆ ಸೇವೆ ಸಲ್ಲಿಸಿ ನಿವೃತ್ತರಾಗಲಿರುವ ಪದಾಧಿಕಾರಿಗಳಿಗೆ ವಿಶ್ವಸ್ಥರಾದ ಪಿ. ಎಸ್. ಕಾರಂತ ಮತ್ತು ಮಲ್ಹಾರ ನಿಂಬರಗಿಯವರು ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು. ಆನಂತರ 2019-2021ರ ಅವಧಿಗಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಪುಷ್ಪಗುತ್ಛವನ್ನಿತ್ತು ಸ್ವಾಗತಿಸಲಾಯಿತು.
ನೂತನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸಭೆಗೆ ಪರಿಚಯಿಸಲಾಯಿತು. ಸಂಘದ ಹಿರಿಯ ಸದಸ್ಯರಾದ ಮಾಸಮ್ಮ ಪ್ಯಾಟೆ ಮತ್ತು ಪರ್ಯಾವರಣ ಸಂರಕ್ಷಣೆಗಾಗಿ ಗೌರವ ಡಾಕ್ಟರೇಟ್ ಪಡೆದ ಸಾಮಾಜಿಕ ಕಾರ್ಯಕರ್ತ ರಾಧಾಕೃಷ್ಣ ಪಿ.ನಾಯರ್ ಅವರನ್ನು ಶಾಲು ಫಲಪುಷ್ಪವನ್ನಿತ್ತು ಗೌರವಿಸಲಾಯಿತು. ಚಿತ್ರಕಲೆ, ರಂಗೋಲಿ ಸ್ಪರ್ಧೆ ಮತ್ತು ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮಹಿಳಾ ಮುಖ್ಯಸ್ಥೆ ಪ್ರಫುಲ್ಲಾ ಶೆಟ್ಟಿ, ಸಂಚಾಲಕ ನಾಗರಾಜ ಶೆಟ್ಟಿ ಮತ್ತು ಅಧ್ಯಕ್ಷ ವಿಶ್ವನಾಥ ಭಂಡಾರಿ ಸಂಘದೊಂದಿಗಿನ ಅಮರ ಬಾಂಧವ್ಯ, ಎಲ್ಲರ ಸಹಕಾರವನ್ನು ಸ್ಮರಿಸಿದರು. ಸಭಾ ಕಾರ್ಯಕ್ರಮವನ್ನು ರಾಜೀವ ಶೆಟ್ಟಿ ಮತ್ತು ಟಿ. ಕೆ. ವಿನಯಕುಮಾರ್ ನಿರ್ವಹಿಸಿ ಶುಭಕೋರಿ ಬಂದ ಸಂದೇಶಗಳನ್ನು ಸಭೆಗೆ ತಿಳಿಸಿದರು. ಭೋಜನದನಂತರ ಸಂಘದ ಸದಸ್ಯರು, ಮಹಿಳೆಯರು ಮತ್ತು ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಕಾರ್ಯಕ್ರಮಕ್ಕೆ ಸೆಲ್ವಾಸ್ ದಮನ್, ಉಮರಗಾಮ್ ನಿಂದ ನೂರಾರು ಕನ್ನಡಿಗರಲ್ಲದೇ ಹಿರಿಯರಾದ ಪಿ. ಎಸ್. ಕಾರಂತ್, ನಾರಾಯಣ ಶೆಟ್ಟಿ, ಮಲ್ಹಾರ ನಿಂಬರಗಿ, ಸಂಜಯ ಮರ್ಬಳ್ಳಿ, ಎನ್. ಪಿ. ಕಾಂಚನ್, ಗಣೇಶ ಶೆಟ್ಟಿ, ಎ. ಎನ್. ರಾವ್, ಶಶಿಧರ್ ಗೋಸಿ, ಚಂದ್ರಶೇಖರ ಗೋಸಿ, ಕೆ. ಪಿ. ಹೆಬ್ಳೆ, ಬಾಲಕೃಷ್ಣ ಶೆಟ್ಟಿ, ಚಂದ್ರಿಕಾ ಕೋಟ್ಯಾನ್, ವಿನಯಾ ಭಂಡಾರಿ, ಕರುಣಾ ಪಿಂಗೆÛ, ವೇದಾ ಕಾಂಚನ್, ಪ್ರತಿಭಾ ಪ್ರಯಾಗ, ಸದಾಶಿವ ಪೂಜಾರಿ, ರಾಜು ಶೇರೇಗಾರ್, ಮುಕುಂದ ಹಂದಿಗೋಳ್, ಹರ್ಷವ ರ್ಧನ್ ಭಟ್, ದಾûಾಯಣಿ ರಾವ್, ರಜನಿ ಶೆಟ್ಟಿ, ಸುಭಾಶ್ಚಂದ್ರ ಶೆಣೈ ಮುಂತಾದವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಾನಕಿ ರಾವ್, ಸಂಧ್ಯಾ ವಿನಯ ಕುಮಾರ್ ಮತ್ತು ವಾಣಿ ಭಟ್ ನಡೆಸಿಕೊಟ್ಟರು. ಮಹಿಳಾ ವಿಭಾಗದ ಕಾರ್ಯದರ್ಶಿ ಲಲಿತಾ ಕಾರಂತ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.