ಅಧ್ಯಾತ್ಮದ ಜೀರ್ಣೋದ್ಧಾರದಿಂದ ಸಂಸ್ಕಾರಯುತ ಬಾಳು: ರಘುನಾಥ ಕೆ. ಕೊಟ್ಟಾರಿ
Team Udayavani, Feb 28, 2021, 6:56 PM IST
ಮುಂಬಯಿ: ಧರ್ಮ ಮತ್ತು ರಾಷ್ಟ್ರದ ಭವಿಷ್ಯದ ರಕ್ಷಣೆಗೆ ಯುವ ಪೀಳಿಗೆಯಲ್ಲಿ ಪೂರ್ವಜರ ಆದರ್ಶ ಜೀವನದ ಅರಿವು ಮೂಡಿಸಬೇಕು. ಮಕ್ಕಳಲ್ಲಿ ಆಧ್ಯಾತ್ಮದ ಜ್ಞಾನವನ್ನು ರೂಢಿಸುವುದರೊಂದಿಗೆ ಧರ್ಮ ರಕ್ಷಣೆಯ ನಿಟ್ಟಿನಲ್ಲಿ ಈ ದೇವಸ್ಥಾನದ ಸಮಿತಿ ಶ್ರಮಿಸುತ್ತಿದೆ. ಸಚ್ಚಾರಿತ್ರÂದ ಕಲಶಾಭಿಷೇಕ ಮತ್ತು ಅಧ್ಯಾತ್ಮದ ಜೀರ್ಣೋದ್ಧಾರ ಆದಾಗಲೇ ಸಂಸ್ಕಾರಯುತ ಬಾಳು ಸಾಧ್ಯ. ಆದ್ದರಿಂದ ಯುವ ಪೀಳಿಗೆಗೆ ಎಲ್ಲ ಆಚರಣೆಗಳನ್ನು ತಿಳಿಯುವ ಧರ್ಮಾಚರಣೆ ಪದ್ಧತಿ ತಿಳಿ ಹೇಳಿದಾಗಲೇ ಸಮಗ್ರ ಜೀವರಾಶಿಯ ಉದ್ಧಾರ ಸಾಧ್ಯ ಎಂದು ಮಲಾಡ್ ಪೂರ್ವದ ಕುರಾರ್ ವಿಲೇಜ್‌ನ ಶ್ರೀ ದುರ್ಗಾಪರಮೇಶ್ವರೀ ಸಮಿತಿಯ ಅಧ್ಯಕ್ಷ ರಘುನಾಥ ಕೆ. ಕೊಟ್ಟಾರಿ ತಿಳಿಸಿದರು.
ಮಲಾಡ್ ಪೂರ್ವದ ಕುರಾರ್ ವಿಲೇಜ್ ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ಸಮಿತಿ ಸಂಚಾಲಕತ್ವದ ಶ್ರೀ ದುರ್ಗಾಪರಮೇಶ್ವರೀ ಮಂದಿರದಲ್ಲಿ ನಡೆದ ಮಂದಿರದ 43ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮಹಾನಗರದಲ್ಲಿನ ಭಕ್ತರ ಪುಣ್ಯಕ್ಷೇತ್ರವಾಗಿದೆ. ಕಳೆದ ಸುಮಾರು ನಾಲ್ಕೂವರೆ ದಶಕಗಳಿಂದ ಇಲ್ಲಿ ತುಳುನಾಡ ವೈಭವದ ಸಂಸ್ಕೃತಿ, ಸಂಪ್ರದಾಯಗಳೊಂದಿಗೆ ಭ್ರಮಾರಂಭಿಕೆಯ ಆರಾಧನೆಯನ್ನು ಶಾಸ್ತ್ರೋಕ್ತವಾಗಿ ನಡೆಸಲಾಗುತ್ತಿದೆ. ಆ ಮೂಲಕ ಅದೆಷ್ಟೋ ಭಕ್ತರು ಶ್ರೀ ದುರ್ಗೆಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ ಎಂದು ತಿಳಿಸಿ, ಶುಭ ಹಾರೈಸಿದರು.
14 ವಾರ್ಷಿಕ ಪುನಃಪ್ರತಿಷ್ಠಾಪನ ವರ್ಧಂತ್ಯುತ್ಸವದ ಅಂಗವಾಗಿ ಶನಿವಾರ ಬೆಳಗ್ಗೆಯಿಂದ ಸಂಪ್ರೋಕ್ಷಣೆ, ಪ್ರಧಾನ ಹೋಮ, ನವಕಲಶಾರಾಧನೆ, ಕಲಶಾಭಿಷೇಕ, ಮಹಾ ಮಂತ್ರಾಕ್ಷತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಬ್ರಹ್ಮಶ್ರೀ ಶಂಕರನಾರಾಯಣ ತಂತ್ರಿ ಡೊಂಬಿವಲಿ ಅವರ ಪ್ರಧಾನ ಪೌರೋಹಿತ್ಯದಲ್ಲಿ ನಡೆಸಲಾಯಿತು. ಮಂದಿರದ ಪ್ರಧಾನ ಅರ್ಚಕ ಸೂಡ ರಾಘವೇಂದ್ರ ಭಟ್ ಅವರು ಮಂದಿರದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿದ್ದ ಪ್ರೇಮನಾಥ ಎಸ್. ಸಾಲ್ಯಾನ್ ಮತ್ತು ಕವಿತಾ ಪ್ರೇಮನಾಥ್ ದಂಪತಿಯನ್ನು ವಿಶೇಷವಾಗಿ ಹಾಗೂ ಮತ್ತಿತರ ಗಣ್ಯರನ್ನು ಮಹಾ ಪ್ರಸಾದವನ್ನಿತ್ತು ಗೌರವಿಸಿದರು. ಪುರೋಹಿತ ವರ್ಗದವರು ವಿವಿಧ ಪೂಜೆಗಳನ್ನು ನಡೆಸಿ ಭಕ್ತರನ್ನು ಹರಸಿದರು.
ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಎಸ್. ಬಿ. ಕೋಟ್ಯಾನ್ ಪ್ರಾರ್ಥನೆಗೈದರು. ಗಿರೀಶ್ ಬಿ. ಸುವರ್ಣ ಮತ್ತು ನೀಶಾ ಗಿರೀಶ್ ದಂಪತಿ ಪೂಜಾವಿಧಿಗಳ ಯಜಮಾನತ್ವ ವಹಿಸಿದ್ದರು. ಮಹಿಳಾ ಮಂಡಳಿಯ ಸದಸ್ಯೆಯರಿಂದ ಮತ್ತು ಭಕ್ತರಿಂದ ಭಜನ ಕಾರ್ಯಕ್ರಮ ನಡೆಯಿತು.
ಸಮಿತಿಯ ಅಧ್ಯಕ್ಷ ರಘುನಾಥ ಕೆ. ಕೊಟ್ಟಾರಿ ಮತ್ತು ಆಶಾ ರಘುನಾಥ್ ದಂಪತಿ, ಸಮಿತಿಯ ಗೌರವ ಕೋಶಾಧಿಕಾರಿ ಬಾಬು ಎಂ. ಸುವರ್ಣ ಮತ್ತಿತರ ಪದಾಧಿಕಾರಿಗಳ, ಕಾರ್ಯಕಾರಿ ಸಮಿತಿಯ ಸದಸ್ಯರು, ವಿಶೇಷ ಆಮಂತ್ರಿತ ಸದಸ್ಯರು, ಸಲಹೆಗಾರರು, ಮಹಿಳಾ ಮಂಡಳಿಯ ಸದಸ್ಯೆಯರು, ಸದಸ್ಯರು ವಿವಿಧ ಪೂಜಾ ಸೇವೆಗಳನ್ನು ನೆರವೇರಿಸಿದರು. ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ತೀರ್ಥಪ್ರಸಾದ ಸ್ವೀಕರಿಸಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಮತ್ತು ಶ್ರೀ ಗಣಪತಿ ದೇವರ ಕೃಪೆಗೆ ಪಾತ್ರರಾದರು. ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ವಿವಿಧ ಪೂಜಾ ಕಾರ್ಯಗಳು ನಡೆದವು.
ಚಿತ್ರ – ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.