ಮಕ್ಕಳಲ್ಲಿ ಕನ್ನಡಾಭಿಮಾನ ಬೆಳೆಸಿ: ಎಳತ್ತೂರುಗುತ್ತು ದಯಾನಂದ್ ಶೆಟ್ಟಿ
Team Udayavani, Mar 2, 2022, 10:51 AM IST
ಮುಂಬಯಿ: ಪ್ರಸ್ತುತ ದಿನಗಳಲ್ಲಿ ಇಂಗ್ಲಿಷ್ ಅಗತ್ಯವಾಗಿದ್ದರೂ ಇದರ ಜತೆಗೆ ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯೂ ಹೌದು. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಸಂಚಾಲಕತ್ವದಲ್ಲಿ ಕಾರ್ಯರೂಪದಲ್ಲಿರುವ ವಿದ್ಯಾಸಂಸ್ಥೆ ಯಲ್ಲಿ ಕನ್ನಡಕ್ಕೂ ಮಹತ್ವ ನೀಡಲಾಗಿದೆ. ಮಕ್ಕಳಿಂದ ಪ್ರವೇಶ ಶುಲ್ಕ ಪಡೆಯದೆ ಕನ್ನಡ ಕಲಿಕೆಗೆ ಅವಕಾಶ ನೀಡಲಾಗಿದೆ ಎಂದು ಥಾಣೆ ನವೋದಯ ಕನ್ನಡ ಸೇವಾ ಸಂಘದ ಥಾಣೆ ಅಧ್ಯಕ್ಷ ಮತ್ತು ನವೋದಯ ಇಂಗ್ಲಿಷ್ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಕಾರ್ಯಾಧ್ಯಕ್ಷ ಎಳತ್ತೂರುಗುತ್ತು ದಯಾನಂದ್ ಎಸ್. ಶೆಟ್ಟಿ ಹೇಳಿದರು.
ಥಾಣೆಯ ನವೋದಯ ಜೂನಿಯರ್ ಕಾಲೇಜಿನ ಸಭಾಂಗಣದಲ್ಲಿ ಫೆ. 26ರಂದು ನಡೆದ ನವೋದಯ ಕನ್ನಡ ಸೇವಾ ಸಂಘದ 53ನೇ ವಾರ್ಷಿಕೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ನಮ್ಮ ಶಿಕ್ಷಣ ಸಂಸ್ಥೆಯಲ್ಲಿ 1-5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲಾಗುತ್ತಿದೆ. ಈ ವರ್ಷ ಅದನ್ನು ಏಳನೇ ತರಗತಿ
ವರೆಗೆ ವಿಸ್ತರಿಸಲಾಗಿದೆ. ಪ್ರಸ್ತುತ 248 ವಿದ್ಯಾರ್ಥಿಗಳು ಕನ್ನಡ ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ 9ನೇ ತರಗತಿವರೆಗೆ ಕನ್ನಡ ಕಲಿಕೆ ಯೋಜನೆಯನ್ನು ಹಾಕಿ ಕೊಂಡಿದ್ದೇವೆ. ಹೆಚ್ಚು ಹೆಚ್ಚು ಮಕ್ಕಳು ಕನ್ನಡ ಕಲಿಯುವ ಅವಕಾಶ ಪಡೆಯು ವಂತಾಗಲಿ ಎನ್ನುವುದೇ ನಮ್ಮ ಉದ್ದೇಶ ವಾಗಿದೆ. ಇದರಲ್ಲಿ ಶಿಕ್ಷಕರ ಕೊಡುಗೆ ಮಹತ್ತರವಾಗಿದೆ. ಹೆತ್ತವರು ಕೂಡ ತಮ್ಮ ಮಕ್ಕಳಲ್ಲಿ ಕನ್ನಡದ ಬಗ್ಗೆ ಅಭಿರುಚಿ ಬೆಳೆಸುವ ಅಗತ್ಯವಿದೆ. ಸಂಘದ ಸಾಧನೆಗೆ ನೂತನವಾಗಿ ಕಾರ್ಯರೂಪಕ್ಕೆ ಬಂದಿರುವ ಮಹಿಳಾ ವಿಭಾಗ ಮತ್ತು ಯುವ ವಿಭಾಗದವರ ಸಹಕಾರ, ಹಿರಿಯರ ಮಾರ್ಗದರ್ಶನ, ಪದಾಧಿಕಾರಿಗಳ ಒಮ್ಮತದ ಸಹಕಾರ, ಪ್ರಾಂಶುಪಾಲೆ ಮತ್ತು ಶಿಕ್ಷಕ, ಶಿಕ್ಷಕೇತರ ಸಿಬಂದಿಯ ಪ್ರೋತ್ಸಾಹ ಕಾರಣವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮುಲುಂಡ್ ಬಂಟ್ಸ್ ಅಧ್ಯಕ್ಷ ಪಲಿಮಾರು ವಸಂತ್ ಎನ್. ಶೆಟ್ಟಿ ಉಪಸ್ಥಿತರಿದ್ದರು. ನವೋದಯ ಕನ್ನಡ ಸೇವಾ ಸಂಘದ ಗೌರವ ಪ್ರಧಾನ ಕೋಶಾಧಿಕಾರಿ ದಯಾನಂದ್ ಬಿ. ಹೆಗ್ಡೆ ಮಾತನಾಡಿ, 53 ವರ್ಷಗಳ ಇತಿಹಾಸ ಹೊಂದಿರುವ ನಮ್ಮ ನವೋದಯ ಕನ್ನಡ ಸೇವಾ ಸಂಘವು ಇಂಗ್ಲಿಷ್ ಮಾಧ್ಯಮದ ವಿದ್ಯಾಸಂಸ್ಥೆಯನ್ನು ಮುನ್ನಡೆಸುತ್ತಾ ಬಂದಿದ್ದರೂ ಕನ್ನಡ ಭಾಷೆ, ನಮ್ಮ ಎಲ್ಲ ರೀತಿಯ ಆಚಾರ – ವಿಚಾರ, ಕಲೆ, ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಕೊಡುಗೆ ನೀಡುತ್ತಾ ಬಂದಿದೆ ಎನ್ನಲು ಹೆಮ್ಮೆ ಎನಿಸುತ್ತಿದೆ. ಸಂಘವನ್ನು ಸ್ಥಾಪಿಸಿ, ಮುನ್ನಡೆಸುವಲ್ಲಿ ಎಲ್ಲ ಹಿರಿಯ, ಕಿರಿಯ ಪದಾಧಿಕಾರಿಗಳೆಲ್ಲರ ಒಮ್ಮತದ ಸಹಕಾರ ಅವಿಸ್ಮರಣೀಯ ಎಂದರು.
ನವೋದಯ ಇಂಗ್ಲಿಷ್ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಪ್ರಾಂಶುಪಾಲೆ ಡಾ| ಉಷಾವತಿ ಶೆಟ್ಟಿ ಮಾತನಾಡಿ, ನಮ್ಮ ಸೇವಾ ಸಂಘದ ಎಲ್ಲ ಪದಾಧಿಕಾರಿಗಳಲ್ಲಿರುವ ಒಗ್ಗಟ್ಟಿನ ಫಲವಾಗಿ ಸಂಸ್ಥೆಯು ಈ ಮಟ್ಟದಲ್ಲಿಂದು ಗುರುತಿಸಿಕೊಂಡು ಬೆಳೆದು ನಿಂತಿದೆ. ನಾವೆಲ್ಲರೂ ಇಲ್ಲಿ ಒಂದೇ ಪರಿವಾರದ ಸದಸ್ಯರಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಸಂಘದ ಎಲ್ಲ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಶಿಕ್ಷಕ-ಶಿಕ್ಷಕೇತರ ಸಿಬಂದಿಯ ಸಹಕಾರವನ್ನು ಸ್ಮರಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗ ಮುಂಬಯಿ ವಿವಿ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅವರು “ಕನ್ನಡವನ್ನು ಉಳಿಸಿ ಬೆಳೆಸಿ, ಪೋಷಿಸುವಲ್ಲಿ ತುಳು-ಕನ್ನಡಿಗರ ಪಾತ್ರ’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಶಾಲಾ ಮಕ್ಕಳು ಪ್ರಾರ್ಥನೆಗೈದರು. ಅಧ್ಯಕ್ಷರು, ಅತಿಥಿ-ಗಣ್ಯರು ಹಾಗೂ ಪದಾಧಿಕಾರಿಗಳು ದೀಪಪ್ರಜ್ವಲಿಸಿ ಕಾರ್ಯಕ್ರಮನ್ನು ಉದ್ಘಾಟಿಸಿದರು. 53 ವರ್ಷಗಳ ಇತಿಹಾಸ ಹೊಂದಿರುವ ನವೋದಯ ಕನ್ನಡ ಸೇವಾ ಸಂಘದ ಸಾಧನೆ, ಸಂಘದ ಆಶ್ರಯದಲ್ಲಿ ಕಾರ್ಯ ರೂಪದಲ್ಲಿರುವ ವಿದ್ಯಾಸಂಸ್ಥೆಯ ಜನಪ್ರಿಯತೆ, ಶಿಕ್ಷಕ ಮತ್ತು ಶಿಕ್ಷಕಿಯರ ಪರಿಶ್ರಮವನ್ನು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುನೀಲ್ ಎಸ್. ಶೆಟ್ಟಿ ಪ್ರಾಸ್ತಾ ವಿಕ ನುಡಿಗಳಲ್ಲಿ ತಿಳಿಸಿ, ಸ್ವಾಗತಿಸಿದರು.
ಉಪಾಧ್ಯಕ್ಷ ಶಶಿಧರ ಕೆ. ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯ ಪ್ರಶಸ್ಥ ಎಸ್. ಶೆಟ್ಟಿ ಅವರು ಮುಖ್ಯ ಅತಿಥಿ ಪಲಿಮಾರು ವಸಂತ್ ಎನ್. ಶೆಟ್ಟಿ ಮತ್ತು ವಿಚಾರ ಮಂಥನದ ಉಪನ್ಯಾಸಕರಾಗಿದ್ದ ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಜಿ. ಎನ್. ಉಪಾಧ್ಯ ಅವರನ್ನು ಪರಿಚಯಿಸಿದರು. ಅತಿಥಿಗಳನ್ನು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆ ನೀಡಿ ಗೌರವಿಸಿದರು.
ಕೊರೊನಾದಿಂದಾಗಿ ಆನ್‌ಲೈನ್ ಮೂಲಕ ಜರಗಿದ ಛದ್ಮವೇಷ, ಭಾಷಣ, ಭಾವಗೀತೆ ಮತ್ತು ಏಕಪಾತ್ರಾಭಿನಯಗಳ ನವೋದಯ ಪ್ರತಿಭೋತ್ಸವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಅತೀ ಹೆಚ್ಚು ಬಹುಮಾನ ಪಡೆದ ಹಿರಿಮೆಗೆ ಪಾತ್ರವಾದ ನವೋದಯ ಕನ್ನಡ ಸೇವಾ ಸಂಘವನ್ನು ಇದೇ ವೇಳೆ ಸ್ಪರ್ಧಾಳುಗಳ ಜತೆಯಲ್ಲಿ ಗೌರವ ಫಲಕದೊಂದಿಗೆ ಅಭಿನಂದಿಸಲಾಯಿತು. ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಕಾರ್ಯಕ್ರಮವನ್ನು ಶಿಕ್ಷಕಿ
ಸುಪ್ರೀತಾ ನಿರೂಪಿಸಿದರು. ಈ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಸಹಕರಿ ಸಿದ ಕುಮುದಾ ಆಳ್ವ, ಜಯಂತಿ ಎನ್. ಐಲ್, ವಿಜೇತಾ ಸುವರ್ಣ, ಶ್ರದ್ಧಾ ಬಂಗೇರ ಅವರನ್ನು ಗೌರವಿಸಲಾಯಿತು. ತೀರ್ಪುಗಾರರನ್ನು ಗೌರವ ಪ್ರಧಾನ ಕಾರ್ಯದರ್ಶಿ ಸುನೀಲ್ ಎಸ್. ಶೆಟ್ಟಿ ಪರಿಚಯಿಸಿದರು. 1-5ನೇ ತರಗತಿವರೆಗೆ ಕನ್ನಡ ಕಲಿಕೆ ವಿಭಾಗದಲ್ಲಿ ಸಾಧನೆಗೈದ ವಿಧ್ಯಾರ್ಥಿ ಗಳನ್ನು ಪುರಸ್ಕರಿಸಲಾಯಿತು. ಈ ಕಾರ್ಯ ಕ್ರಮವನ್ನು ಪ್ರತಿಭಾ ನಿರ್ವಹಿಸಿದರು.
ಜತೆ ಕೋಶಾಧಿಕಾರಿ ಕೀರ್ತಿ ಎಸ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಯನಾ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ದರ್ಶನ್ ಜೆ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾರ್ಯಕಾರಿ ಸಮಿತಿಯ ಸದಸ್ಯ ರವಿ ಹೆಗ್ಡೆ ನಿರೂಪಿಸಿದರು. ಜತೆ ಕಾರ್ಯದರ್ಶಿ ಪ್ರಶಾಂತ್ ಕೆ. ಶೆಟ್ಟಿ ವಂದಿಸಿದರು. ಮಕ್ಕಳಿಂದ ಮತ್ತು ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರಿಂದ ನವೋದಯ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ದಕ್Ò, ಅನುಷಾ ಹಾಗೂ ಸೀಮಾ ಯು. ನಿರ್ವಹಿಸಿದರು.
ಸಂಘದ ಎಲ್ಲ ಕಾರ್ಯಕ್ರಮಗಳಲ್ಲಿ ಸಹಕರಿಸುತ್ತಿದ್ದು, ಇತ್ತೀಚೆಗೆ ನಿಧನ ಹೊಂದಿದ ರಂಗ ಕಲಾವಿದ ಉಮೇಶ್ ಹೆಗ್ಡೆ ಕಡ್ತಲ ಮತ್ತು ಭಜನ ಕಲಾವಿದ ರಾಮಣ್ಣ ಶೆಟ್ಟಿ ಅವರಿಗೆ ಶ್ರದ್ಧಾಂ ಜಲಿ ಸಲ್ಲಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಕ್ಕರ್ ಬಳಗ ಪುತ್ತೂರು ಸದಸ್ಯರಿಂದ ಒಂತೆ ಬುಲಿಪುಗ-ಒಂತೆ ತೆಲಿಪುಗ ತುಳು ನಾಟಕಪ್ರದರ್ಶನಗೊಂಡಿತು. ಲಘು ಉಪಹಾ ರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಹೊಟ್ಟೆಪಾಡಿನ ಹಾದಿಯ ಅನ್ವೇಷಣೆಯಲ್ಲಿ ತವರೂರನ್ನು ತೊರೆದು ಮುಂಬಯಿ ಮಹಾನಗರವನ್ನು ಸೇರಿದ ನಮ್ಮ ಹಿರಿಯರ ದೂರದೃಷ್ಟಿಗೆ ತಲೆಬಾಗಲೇಬೇಕು. ಹಿರಿಯರು ನಮ್ಮ ನಾಡು -ನುಡಿ, ಭಾಷೆ, ಸಂಸ್ಕಾರ- ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅನೇಕ ಕನ್ನಡ ಸಂಘ-ಸಂಸ್ಥೆಗಳನ್ನು ಹುಟ್ಟು ಹಾಕಿ ಈ ಮುಂಬಯಿ ಮಹಾನಗರದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಅಂತಹ ಸಂಸ್ಥೆಗಳಲ್ಲಿ ನವೋದಯ ಕನ್ನಡ ಸೇವಾ ಸಂಘವೂ ಒಂದಾಗಿದ್ದು, ಇದಕ್ಕೆ 53 ವರ್ಷಗಳ ಇತಿಹಾಸವೇ ನಿದರ್ಶನವಾಗಿದೆ.–ಪಲಿಮಾರು ವಸಂತ್ ಎನ್. ಶೆಟ್ಟಿ ಅಧ್ಯಕ್ಷರು, ಮುಲುಂಡ್ ಬಂಟ್ಸ್
ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿ, ಎಂಟು ಜ್ಞಾನಪೀಠ ಪ್ರಶಸ್ತಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ಭಾಷೆ ಕನ್ನಡ ಭಾಷೆ ಎಂದು ಹೇಳಲು ನಾವು ಅಭಿಮಾನ ಪಡಬೇಕು. ಮುಂಬಯಿಯಲ್ಲಿ 150ಕ್ಕೂ ಹೆಚ್ಚು ತುಳು- ಕನ್ನಡಿಗರ ಮುಂದಾಳತ್ವದ ಸಂಘ-ಸಂಸ್ಥೆಗಳಿದ್ದು, ಇವುಗಳು ಮರಾಠಿ ಮಣ್ಣಿನಲ್ಲಿ ಕನ್ನಡದ ತೇರನ್ನು ಎಳೆಯುವ ಕಾಯಕದಲ್ಲಿ ತೊಡಗಿಸಿಕೊಂಡಿವೆ. ಮಹಾರಾಷ್ಟ್ರದ ಬೆಳವಣಿಗೆಯಲ್ಲಿ ತುಳು- ಕನ್ನಡಿಗರ ಪಾತ್ರ ಅವಿಸ್ಮರಣೀಯವಾಗಿದೆ. ತುಳು-ಕನ್ನಡ ಭಾಷೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೊರನಾಡಿನ ಮಕ್ಕಳು ಕನ್ನಡ ಕಲಿತಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸರಕಾರ ವಿಶೇಷ ಸೌಲಭ್ಯ ಕಲ್ಪಿಸಿಕೊಟ್ಟಿದೆ. ನಮ್ಮ ದೇಶವನ್ನು ಕಟ್ಟುವ ನಿಟ್ಟಿನಲ್ಲೂ ಈ ಭಾಷೆಯ ಪ್ರಾಮುಖ್ಯತೆ ಬಹಳಷ್ಟು ಇದೆ. ಈ ನಿಟ್ಟಿನಲ್ಲಿ ನವೋದಯ ಕನ್ನಡ ಸೇವಾ ಸಂಘವು ಶ್ರಮಿಸುತ್ತಿರುವುದು ಅಭಿನಂದನೀಯ.-ಡಾ| ಜಿ. ಎನ್. ಉಪಾಧ್ಯ ,ಮುಖ್ಯಸ್ಥರು, ಕನ್ನಡ ವಿಭಾಗ ಮುಂಬಯಿ ವಿವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.