ಮೀನುಗಾರರಿಗೆ 60 ಕೋ. ರೂ. ನಿಧಿ ಜಾರಿ: ರಾಜ್ಯ ಸರಕಾರ
Team Udayavani, Aug 29, 2020, 8:57 PM IST
ಸಾಂದರ್ಭಿಕ ಚಿತ್ರ
ಸಿಂಧುದುರ್ಗ ಆ. 28: ಚಂಡಮಾರುತ ಮತ್ತು ಕೋವಿಡ್ ದಿಂದಾಗಿ ತೊಂದರೆಗಳನ್ನು ಎದುರಿಸುತ್ತಿರುವ ಮೀನುಗಾರರಿಗೆ ರಾಜ್ಯ ಸರಕಾರದ ವತಿಯಿಂದ 60 ಕೋಟಿ ರೂ. ನಿಧಿ ಜಾರಿಗೊಳಿಸಿದ್ದು, ಇದರಿಂದ ರಾಜ್ಯದ ಕರಾವಳಿಯ ರತ್ನಾಗಿರಿ ಸಿಂಧುದುರ್ಗ ಸೇರಿದಂತೆ 7 ಜಿಲ್ಲೆಗಳ 55,000 ಮೀನುಗಾರರಿಗೆ ಅನುಕೂಲವಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಾಮಂತ್ ಅವರು ಈ ಹಿಂದೆ ಸಿಂಧುದುರ್ಗದಲ್ಲಿ ನಡೆದ ಸಭೆಯಲ್ಲಿ ಮೀನುಗಾರರಿಗೆ ನಿಧಿ ಜಾರಿಗೊಳಿಸಬೇಕೆಂಬ ನಿರ್ಣಯ ತೆಗೆದುಕೊಳ್ಳಲಾಗಿದ್ದು ಅದರಂತೆ ಮುಖ್ಯಮಂತ್ರಿ ಅವರಲ್ಲಿ ಬೇಡಿಕೆಯನ್ನು ಇರಿಸಲಾಯಿತು ಎಂದರು. ಅದರಂತೆ ಸಿಂಧುದುರ್ಗ ರಾಪಣಕರ್ ಸಂಘದ 4,171 ಸದಸ್ಯರಿಗೆ 10,000 ರೂ. ಗಳ ಅನುದಾನ ಮತ್ತು ಇತರ ಮೀನುಗಾರರಲ್ಲಿ 1,564 ಯಾಂತ್ರಿಕವಲ್ಲದ ದೋಣಿ ಮಾಲಿಕರಿಗೆ ಪ್ರತ್ಯೇಕ 20,000 ರೂ. ಒಂದರಿಂದ ಎರಡು ಸಿಲಿಂಡರ್ ದೋಣಿ ಹೊಂದಿರುವವರಿಗೆ ತಲಾ 20,000 ರೂ., 3ರಿಂದ 4 ಸಿಲಿಂಡರ್ ಮತ್ತು 6 ಸಿಲಿಂಡರ್ ಬೋಟ್‌ಗಳಿಗೆ ಪ್ರತ್ಯೇಕ 30,000 ರೂ. ಘೋಷಿಸಲಾಗಿದೆ.
ಕೊಂಕಣದಲ್ಲಿ ಮೀನುಗಾರಿಕೆ ಉದ್ಯಮವನ್ನು ಅವಲಂಬಿಸಿ 35,000 ಮಹಿಳಾ ಮೀನುಗಾರರಿದ್ದು ಅವರಿಗೆ ಎರಡು ಕೋಲ್ಡ್ ಸ್ಟೌವ್‌ಗಳನ್ನು ಖರೀಸಲು 3,000 ರೂ. ನೀಡಲಾಗುವುದು ಎಂದು ಹೇಳಿದ್ದಾರೆ. ಫಲಾನುಭವಿಗಳ ಆಯ್ಕೆಗಾಗಿ ಜಿಲ್ಲಾ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಮೀನುಗಾರಿಕೆ ತರಬೇತಿ ಅಧಿಕಾರಿ ಮತ್ತು ಇಬ್ಬರು ಕಾರ್ಯನಿರ್ವಾಹಕ ಸದಸ್ಯರನ್ನು ಒಳಗೊಂಡಿದೆ. ಬಯೋಮೆಟ್ರಿಕ್, ಆಧಾರ್ ಅಥವಾ ಕಿಸಾನ್ ಕ್ರೆಡಿಟ್ ಕಾರ್ಡ್ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಮಹಿಳಾ ಮೀನು ಮಾರಾಟಗಾರರು ಮಹಾನಗರ ಪಾಲಿಕೆಗಳು ಪುರಸಭೆಗಳು ಗ್ರಾಮ ಪಂಚಾಯಿತಿಗಳಿಂದ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ.ಸದಸ್ಯರು ಸತ್ತರೆ ಅವರ ಅಧಿ ಕೃತ ಉತ್ತರಾ ಧಿಕಾರಿಗಳಿಗೆ ಅನುದಾನ ನೀಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.