ಧಾರಾವಿ, ಮಾಹಿಮ್‌, ದಾದರ್‌ ಕೋವಿಡ್ ಸೋಂಕಿನ 63 ಹೊಸ ಪ್ರಕರಣ

Team Udayavani, May 14, 2020, 6:52 AM IST

ಧಾರಾವಿ, ಮಾಹಿಮ್‌, ದಾದರ್‌ ಕೋವಿಡ್ ಸೋಂಕಿನ 63 ಹೊಸ ಪ್ರಕರಣ

ಸಾಂದರ್ಭಿಕ ಚಿತ್ರ

ಮುಂಬಯಿ: ಧಾರಾವಿ, ಮಾಹಿಮ್‌ ಮತ್ತು ದಾದರ್‌ನಲ್ಲಿ ಮಂಗಳವಾರ ಕೋವಿಡ್ ವೈರಾಣು ಸೋಂಕಿತ ಒಟ್ಟು 63 ಹೊಸ ಪ್ರಕರಣಗಳು ಪತ್ತೆಯಾಗಿವೆ. ಹಾಗೆಯೆ ಕೋವಿಡ್ ಸೋಂಕಿನಿಂದ ಇಬ್ಬರೂ ಸಾವನ್ನಪ್ಪಿದ್ದಾರೆ. ವೈರಾಣು ಸೋಂಕಿತ ಹೊಸ ಪ್ರಕರಣಗಳಲ್ಲಿ ಧಾರಾವಿ ಪರಿಸರದಿಂದ 46, ಮಾಹಿಮ್‌ 6 ಮತ್ತು ದಾದರ್‌ ನಿಂದ 11 ಪ್ರಕರಣ ಪತ್ತೆಯಾಗಿವೆ. ಕೋವಿಡ್ ಸೋಂಕಿನಿಂದ ಧಾರಾವಿಯಲ್ಲಿ ಮತ್ತು ದಾದರ್‌ನಲ್ಲಿ ಪ್ರತ್ಯೇಕ ಓರ್ವ ಸಾವನ್ನಪ್ಪಿದ್ದಾರೆ.

ಮುಂಬಯಿ ನಗರದಲ್ಲಿ ಕೋವಿಡ್ ವೈರಾಣು ಸೋಂಕಿತ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಲಾರಂಭಿಸಿದೆ. ಅದರಲ್ಲೂ ಕೊಳೆಗೇರಿ ಪ್ರದೇಶವಾದ ಧಾರಾವಿಯಲ್ಲಿ ಇಂದು 46 ವೈರಾಣು ಸೋಂಕಿತರು ಪತ್ತೆಯಾಗುವ ಜತೆಗೆ, ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 962ಕ್ಕೆ ಏರಿದೆ. ಇಂದು ಓರ್ವ ವ್ಯಕ್ತಿಯ ಸಾವಿನ ಜತೆಗೆ ಧಾರಾವಿಯಲ್ಲಿ
ಕೋವಿಡ್ ದಿಂದ ಮೃತರ ಸಂಖ್ಯೆ 31ಕ್ಕೆ ಏರಿದೆ.

ಇಂದು ಧಾರಾವಿಯ 60 ಫೀಟ್‌ ರೋಡ್‌, ನಾಯಕ್‌ ನಗರ, ಕುಂಭಾರ್‌ ವಾಡಾ, ಕಾಲಾಕಿಲಾ. ಪಿವಿ ಚಾಲ್‌ ಮತ್ತು ನ್ಯೂ ಮುನ್ಸಿಪಲ್‌ ಚಾಲ್‌ನಲ್ಲಿ ಪ್ರತ್ಯೇಕ ಒಂದೊಂದು ಕೊರೊನಾ ಪ್ರಕರಣ, ಕುತ್ತುವಾಡಿ ಮತ್ತು ಟ್ರಾನ್ಜಿಸ್ಟ್‌ ಕ್ಯಾಂಪ್‌ನಲ್ಲಿ ತಲಾ ಇಬ್ಬರು ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಧಾರವಿ ಮುಖ್ಯ ರಸ್ತೆ, ಇಂದಿರಾ ಖುರೇಷಿ ನಗರ ಮತ್ತು ರಾಜೀವ್‌ ಗಾಂಧಿ ನಗರದಲ್ಲಿ ತಲಾ 3 ಮತ್ತು ಟಿ-ಜಂಕ್ಷನ್‌ನಲ್ಲಿ 5 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 90 ಫೀಟ್‌ ರೋಡ್‌ ಮತ್ತು ಧಾರಾವಿ ಕ್ರಾಸ್‌ ರಸ್ತೆಯಲ್ಲಿ ಪ್ರತ್ಯೇಕ 7 ಪೀಡಿತರು ಮತ್ತು ಮಾಟುಂಗಾ ಕಾರ್ಮಿಕ ಶಿಬಿರದಲ್ಲಿ 8 ಪೀಡಿತರು ಪತ್ತೆಯಾಗಿದ್ದಾರೆ. ಮಾಹಿಮ್‌ನಲ್ಲಿ  ಕೋವಿಡ್ ದ ಆರು ಪ್ರಕರಣ ಪತ್ತೆಯಾಗಿದ್ದು, ಒಟ್ಟು ಕೊರೊನಾ ಪೀಡಿತರ ಸಂಖ್ಯೆ 143ಕ್ಕೆ ಏರಿದೆ. ಸಾವನ್ನಪ್ಪಿ
ದವರ ಸಂಖ್ಯೆ ಏಳಕ್ಕೆ ಏರಿದೆ. ಮಾಹಿಮ್‌ನಲ್ಲಿ ಇಲ್ಲಿಯ ತನಕ 28 ಮಂದಿ ಕೋವಿಡ್ ದಿಂದ ಮುಕ್ತರಾಗಿದ್ದು, ಡಿಸಾcರ್ಜ್‌ ಮಾಡಲಾಗಿದೆ.

ಇಂದು ಮಾಹಿಮ್‌ನ ಕಾಶೀನಾಥ್‌ ಬಿಲ್ಡಿಂಗ್‌, ಅರಿಹಂತ್‌ ಬಿಲ್ಡಿಂಗ್‌, ನ್ಯೂ ಪೊಲೀಸ್‌ ಕಾಲನಿ, ರನ್‌ ಶ್ಯಾಮ್‌ ನಿವಾಸ್‌, ಗ್ಯಾಬ್ರಿಯಲ್‌ ಹೌಸ್‌ ಮತ್ತು ಪ್ರಜಾ ಸೇವಕ್‌ ಸೊಸೈಟಿಯಲ್ಲಿ ಪ್ರತ್ಯೇಕ ಒಂದೊಂದು ಪ್ರಕರಣ ಪತ್ತೆಯಾಗಿದೆ. ದಾದರ್‌ನಲ್ಲಿ ಇಂದು ಕೋವಿಡ್ ದ 11 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಪ್ರದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 125ಕ್ಕೆ ಏರಿದೆ ಮತ್ತು ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿದೆ.

ದಾದರ್‌ನಲ್ಲಿ ಕೋವಿಡ್ ದಿಂದ 28 ಮಂದಿ ಗುಣಮುಖರಾಗಿದ್ದು, ಅವರನ್ನು ಡಿಸಾcರ್ಜ್‌ ಮಾಡಲಾಗಿದೆ. ದಾದರ್‌ನಲ್ಲಿ ಪತ್ತೆಯಾದ 11 ಪ್ರಕರಣಗಳಲ್ಲಿ ಚಿತ್ತಾಳೆ ರಸ್ತೆಯ ಗುಲ್ಮಾರ್ಗ್‌ ಸೊಸೈಟಿ, ಶಿವಾಜಿ ಪಾರ್ಕ್‌ನಲ್ಲಿ ಗಣೇಶ್‌ ಭುವನ್‌, ಸುಶ್ರುಷಾ ಸ್ಟಾಫ್ ಕಾಲೋನಿ, ಪ್ರಿಯದರ್ಶಿನಿ ಸೊಸೈಟಿ, ದೇವಿ ಪದ್ಮಬಾಯಿ ಚಾಲ್, ಚಿಖಲೆ ಮಾರ್ಗದ ಗುಲ್ಮೋಹರ್‌ ಸೊಸೈಟಿ ಮತ್ತು ಲೋಕಮಾನ್ಯ ನಗರದಲ್ಲಿ ಇಂದು ಪ್ರತ್ಯೇಕ ಒಂದೊಂದು ಪ್ರಕರಣ ಪತ್ತೆಯಾಗಿದೆ. ಜೈ ಹನುಮಾನ್‌ ಸೊಸೈಟಿ ಮತ್ತು ದಾದರ್‌ ಪೊಲೀಸ್‌ ಲೈನ್‌ನಲ್ಲಿ ಪ್ರತ್ಯೇಕ ಎರಡು ಪ್ರಕರಣ ಪತ್ತೆಯಾಗಿವೆ.

ಟಾಪ್ ನ್ಯೂಸ್

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.