ಸಯಾನ್ ಜಿಎಸ್‌ಬಿ ಸೇವಾ ಮಂಡಲ ಹರಿಸೇವೆ
65ನೇ ಗಣೇಶೋತ್ಸವ ಪೂರ್ವತಯಾರಿ ಸಭೆ
Team Udayavani, Jun 21, 2019, 5:50 PM IST
ಮುಂಬಯಿ: ಶ್ರೀ ಕಾಶೀ ಮಠ ಸಂಸ್ಥಾನದ ವೃಂದಾವನಸ್ಥ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸನ್ಯಾಸ ದೀಕ್ಷಾ ಅಮೃತ ಮಹೋತ್ಸವ ಹರಿದ್ವಾರದಲ್ಲಿ ಭಾಗವಹಿಸಿದವರಿಗೆ ಮತ್ತು ಇತರರಿಗೆ ಜೂ. 16 ರಂದು ಜಿಎಸ್‌ಬಿ ಸೇವಾ ಮಂಡಲವು ಶ್ರೀ ಗುರುಗಣೇಶ ಪ್ರಸಾದ ಸಭಾಗೃಹದಲ್ಲಿ ಹರಿಸೇವೆಯನ್ನು ಆಯೋಜಿಸಿತು. ಬೆಳಗ್ಗೆ 9.30 ಕ್ಕೆ ಹರಿಸೇವೆ ಪೂಜೆ ಪ್ರಾರಂಭಗೊಂಡಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಸೇವಾ ಮಂಡಲದ 65 ನೇ ವಾರ್ಷಿಕ ಗಣೇಶೋತ್ಸವದ ಪೂರ್ವ ತಯಾರಿಯ ಪ್ರಥಮ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ವೈಧಿಕರಾದ ವಿಜಯ ಭಟ್ ಅವರು ಪ್ರಾರ್ಥನೆಗೈದರು. ಸೇವಾ ಮಂಡಲದ ಅಧ್ಯಕ್ಷ ರಮೇಶ್ ಭಂಡಾರ್ಕರ್ ಅವರು ಸ್ವಾಗತಿಸಿ, ಸಭೆಯಲ್ಲಿ ಪ್ರಸ್ತುತ ವರ್ಷದ ಗಣೇಶೋತ್ಸವದ ಆಯೋಜನಾ ಸಮಿತಿಯ ಪ್ರಧಾನ ಸಂಚಾಲಕರಾಗಿ ಡಾ| ಭುಜಂಗ ಪೈ, ಸಹ ಸಂಚಾಲಕರಾಗಿ ಜಿ. ದಾಮೋದರ ರಾವ್, ರಘುನಂದನ್ ಕಾಮತ್, ನ್ಯಾಯವಾದಿ ಎಂ. ವಿ. ಕಿಣಿ, ಗಣೇಶ್ ಯು. ಪ್ರಭು ಅವರನ್ನು ನೇಮಿಸಲಾಗಿದೆ ಎಂದು ನುಡಿದು, ಗಣೇಶೋತ್ಸವ ಸಂಭ್ರಮದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.
ಸಹ ಸಂಚಾಲಕ ದಾಮೋದರ ರಾವ್ ಅವರು ಮಾತನಾಡಿ, ಮಂಡಲದ ಕಳೆದ ವರ್ಷದ ಗಣೇಶೋತ್ಸವದ ಗಳಿಕೆ. ಖರ್ಚು ಇತ್ಯಾದಿ ವಿಷಯಗಳ ವರದಿಯನ್ನು ವಾಚಿಸಿದರು. ಈ ವರ್ಷ ಗಣೇಶೋತ್ಸವದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಪೂಜಾ ಸೇವೆ, ಪ್ರಚಾರ ಹಾಗೂ ಇನ್ನಿತರ ಮೂಲಕ ಧನಸಂಗ್ರಹ ಮಾಡುವ ಬಗ್ಗೆ ತಿಳಿಸಿದರು.
ಇನ್ನೋರ್ವ ಸಹ ಸಂಚಾಲಕ ಗಣೇಶ್ ಪ್ರಭು ಅವರು ಮಾತನಾಡಿ, ನಮ್ಮ ಗಣೇಶೋತ್ಸವದ ಪ್ರಧಾನ ಅರ್ಚಕರಾಗಿದ್ದ ಬಂಟ್ವಾಳ ಕೃಷ್ಣ ಭಟ್ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಅವರು ಗಣೇಶೋತ್ಸವವು ಅದ್ದೂರಿಯಾಗಿ ನಡೆಯಲು ವೈಧಿಕ ವೃಂದದೊಂದಿಗೆ ಕ್ಲಪ್ತ ಸಮಯದಲ್ಲಿ ಪೂಜೆಗಳನ್ನು ನಿರ್ವಹಿಸುವುದರೊಂದಿಗೆ ಸಮಯ ಪಾಲನೆಯಲ್ಲಿ ಸೇವೆ ಸಲ್ಲಿಸಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಸೇವಾ ಮಂಡಲದ ಟ್ರಸ್ಟಿ ಆರ್. ಜಿ. ಭಟ್ ಅವರು ಮಾತನಾಡಿ, ಜಿಎಸ್‌ಬಿ ಗಣೇಶೋತ್ಸವವು ಮುಂಬಯಿ ಹಾಗೂ ಹೊರನಾಡಿನಲ್ಲಿ ಖ್ಯಾತಿ ಪಡೆದಿದೆ. ಈ ಮೂಲಕ ನಮ್ಮ ಸಮಾಜದ ಹೆಸರು ಉನ್ನತ ಸ್ಥಾನಕ್ಕೇರಿದೆ. ಇಲ್ಲಿಯ ಶಿಸ್ತು ಉಲ್ಲೇಖನೀಯ ಎಂದು ನುಡಿದು, ಸೇವಾ ಮಂಡಲದ ಗಣೇಶೋತ್ಸವ ಸಮಿತಿಯ ದಿವಂಗತರಾದ ಮಾಧವ ಪುರಾಣಿಕ್, ಬಂಟ್ವಾಳ್ ಕೃಷ್ಣ ಭಟ್ ಮತ್ತು ದಿನೇಶ್ ಪೈ ಅವರು ಸಲ್ಲಿಸಿದ ಸೇವೆಯನ್ನು ವಿವರಿಸಿ, ಜಿಎಸ್‌ಬಿ ಹೆಸರು ಇಂದು ಖ್ಯಾತಿ ಪಡೆಯಲು ಮುಖ್ಯವಾಗಿ ಈ ಮೂವರು ಕಾರಣಕರ್ತರಾಗಿದ್ದಾರೆ ಎಂದರು.
ವೈದಿಕರಾದ ವಿಜಯ ಭಟ್ ಅವರು ಮಾತನಾಡಿ, ಐವತ್ತು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಸೇವಾ ಮಂಡಲದ ಗಣೇಶೋತ್ಸವದಲ್ಲಿ ಇತರ ಅರ್ಚಕರೊಂದಿಗೆ ಶ್ರೀ ಮಹಾಗಣಪತಿಯ ಪೂಜೆಯಲ್ಲಿ ಪಾಲ್ಗೊಂಡಿದ್ದೇನೆ. ಈ ವರ್ಷದಿಂದ ಗಣೇಶೋತ್ಸವದಲ್ಲಿ ತನ್ನ ನೇತೃತ್ವದಲ್ಲಿ ಸರ್ವ ಪೂಜೆಗಳನ್ನು ವೈಧಿಕ ವೃಂದದ ಸಹಕಾರದೊಂದಿಗೆ ಮಾಡುವ ಜವಾಬ್ದಾರಿ ವಹಿಸುವೆ ಎಂದು ನುಡಿದು, ಸರ್ವರ ಸಹಕಾರ ಅಗತ್ಯವಾಗಿದೆ ಎಂದರು.
ಸೇವಾ ಮಂಡಲದ ಪ್ರಧಾನ ಕಾರ್ಯದರ್ಶಿ ಶಿವಾನಂದ ಭಟ್ ಅವರು ವಂದಿಸಿದರು. ಮುಂದಿನ ಸಮಾಲೋಚನಾ ಸಭೆಯು ಜೂ. 29 ರಂದು ಸಂಜೆ 7.30 ಕ್ಕೆ ಜಿಎಸ್‌ಬಿ ಸೇವಾ ಮಂಡಲ, ಶ್ರೀಗಣೇಶ ಪ್ರಸಾದ ಸಭಾಗೃಹ, ಸಯಾನ್ ಪೂರ್ವ ಇಲ್ಲಿ ಜರಗಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.