ಆಗಸ್ಟ್ ನಲ್ಲಿ 6ನೇ ನಾವಿಕ ವಿಶ್ವ ಕನ್ನಡ ಸಮಾವೇಶ
Team Udayavani, Feb 20, 2021, 3:34 PM IST
ಅಮೆರಿಕ : 6ನೇ ನಾವಿಕ ವಿಶ್ವ ಕನ್ನಡ ಸಮಾವೇಶವನ್ನು ಆಗಸ್ಟ್ 27, 28, 29ರಂದು “ಭಾಷೆ- ಬಾಂಧವ್ಯ- ಭರವಸೆ’ ಎಂಬ ಟ್ಯಾಗ್ ಲೈನ್‌ನೊಂದಿಗೆ ಆಚರಿಸಲಾಗುವುದು ಎಂದು ನಾವಿಕ ಸಂಸ್ಥೆಯ ಅಧ್ಯಕ್ಷರಾದ ವಲ್ಲೀಶ ಶಾಸ್ತ್ರಿ ಘೋಷಿಸಿದರು.
ಮೂರು ದಿನಗಳ ಸಮ್ಮೇಳನದಲ್ಲಿ ಕನ್ನಡ ಭಾಷೆ , ಕಲೆ, ಪರಂಪರೆ , ವಾಣಿಜ್ಯ , ಉದ್ಯಮ, ಸಾಹಿತ್ಯ , ಸಿನೆಮಾ, ರಂಗಭೂಮಿ, ವಿಜ್ಞಾನ , ಮನೋರಂಜನೆ, ಆರೋಗ್ಯ, ಯೋಗ, ವೈದ್ಯಕೀಯ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಮೂಡಿಬರಲಿವೆ.
ಈ 6ನೇ ನಾವಿಕ ವಿಶ್ವ ಕನ್ನಡ ಸಮ್ಮೇಳನ ಸಂಚಾಲಕರಾಗಿ ಡಾ| ಕವಿತಾ ಕೊಟ್ರಪ್ಪ ಅವರೊಂದಿಗೆ ಶಿವಕುಮಾರ್, ಆರುಡಿ ರಾಜಗೋಪಾಲ್ ಮತ್ತು ಮಂಜುನಾಥ್ ರಾವ್ ಸಹ- ಸಂಚಾಲಕರಾಗಿ ಸೇವೆ ಸಲ್ಲಿಸಲಿದ್ದಾರೆ.
ಪ್ರತಿ ಎರಡು ವರ್ಷಗಳಿಗೊಮ್ಮೆ ಅಮೆರಿಕದ ಯಾವುದಾದರೊಂದು ದೊಡ್ಡ ಊರಿನಲ್ಲಿ ಸಾವಿರಾರು ಜನರು ಒಂದೇ ಸೂರಿನಡಿ ಒಟ್ಟಿಗೆ ಸೇರಿಸಿ ನಾವಿಕ ವಿಶ್ವ ಕನ್ನಡ ಸಮಾವೇಶಗಳನ್ನು ಆಚರಿಸಲಾಗುತ್ತಿತ್ತು. ಆದರೆ ದುರದೃಷ್ಟದಿಂದ ಅಮೆರಿಕದಲ್ಲಿ ಈಗಲೂ ಕರೋನಾ ಮಹಾಮಾರಿಯು ಇನ್ನೂ ನಿಯಂತ್ರಣಕ್ಕೆ ಬಾರದೇ ಇರುವುದರಿಂದ ಈ ಬಾರಿ ನಾವಿಕ ವಿಶ್ವ ಕನ್ನಡ ಸಮಾವೇಶವನ್ನು ಅಂತರ್ಜಾಲದ ಮೂಲಕ ಆಚರಿಸಬೇಕಾದ ಅನಿವಾರ್ಯತೆ ಬಂದಿದೆ.
ಪ್ರಚಾರ ಸಮಿತಿಯ ಚೇರ್ಮನ್ ಆಗಿ ಬೆಂಕಿ ಬಸಣ್ಣ, ಜಾಗತಿಕ ಕನ್ನಡ ಕೂಟಗಳ ಆಯೋಜಕರಾಗಿ ಪುಷ್ಪಲತಾ, ಭಾರತದ ಸಮಿತಿಗಳ ಚೇರ್ಮನ್ ಆಗಿ ಸಮೀರ ಭಾರದ್ವಾಜ , ಕನ್ನಡ-ಕಲಿ ಕಾರ್ಯಕ್ರಮಗಳ ಆಯೋಜಕರಾಗಿ ಡಾ| ಅಶೋಕ್ ಕಟ್ಟಿಮನಿ, ಮೂಲಸೌಲಭ್ಯಗಳ ಆಯೋಜಕರಾಗಿ ಸತ್ಯಪ್ರಸಾದ್, ವಿವಿಧ ಪ್ರತಿಭಾ ಸ್ಪರ್ಧೆಗಳ ಆಯೋಜಕರಾಗಿ ರಾಮರಾವ್, ನಾಟಕ ಸ್ಪರ್ಧೆಗಳ ನಿಯೋಜಕರಾಗಿ ಅಲಮೇಲು ಅಯ್ಯಂಗಾರ್, ನೃತ್ಯ ಸ್ಪರ್ಧೆಗಳ ಆಯೋಜಕರಾಗಿ ಮಂಗಳ ಪ್ರಶಾಂತ್, ಕಾಮಿಡಿ ಮತ್ತು ಶಾರ್ಟ್ ಫಿಲ್ಮ್ ಕಾರ್ಯಕ್ರಮಗಳ ಆಯೋಜಕರಾಗಿ ಶ್ರೀಕಾಂತ್ ಹಾಗೂ ಸಂಗೀತ ಕಾರ್ಯಕ್ರಮಗಳ ನಿರ್ವಾಹಕರಾಗಿ ಶೇಷಪ್ರಸಾದ್ ಸೇವೆ ಸಲ್ಲಿಸಲಿದ್ದಾರೆ.
ಸಾಗರೋತ್ತರದ ಪ್ರತಿಭೆಗಳ ಜತೆಗೆ ಕರ್ನಾಟಕದಲ್ಲಿರುವ ಉತ್ತಮೋತ್ತಮ ಕಲಾವಿದರಿಂದ ಸಂಗೀತ , ನೃತ್ಯ , ನಾಟಕ , ಯಕ್ಷಗಾನದಂತಹ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯಿದೆ. ಪ್ರಪಂಚದ ವಿವಿಧ ದೇಶಗಳ ಕನ್ನಡ ಸಂಘಗಳು ಈ ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲಿವೆ.
ಹೆಚ್ಚಿನ ವಿವರಗಳಿಗಾಗಿ www.navika.org ಗೆ ಭೇಟಿ ಕೊಡಿ. – ಬೆಂಕಿ ಬಸವಣ್ಣ, ಅಧ್ಯಕ್ಷರು, ಪ್ರಚಾರ ಸಮಿತಿ, ನಾವಿಕ ಸಂಸ್ಥೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.